ಅನುಗ್ರಹ ಮಹಿಳಾ ಕಾಲೇಜ್ ಸ್ವಾತಂತ್ರ್ಯ ದಿನಾಚರಣೆ: ಕಲ್ಲಡ್ಕ ಸಂಗ್ರಹಾಲಯದ ಸ್ಥಾಪಕ ಮುಹಮ್ಮದ್ ಯಾಸಿರ್ ರಿಗೆ ವಿಶೇಷ ಸ್ಮರಣಿಕೆಯ ಮೂಲಕ ಗೌರವ

0
157

ಸನ್ಮಾರ್ಗ ವಾರ್ತೆ

15 ಆಗಸ್ಟ್ 2023 ರಂದು ಕಲ್ಲಡ್ಕ ವಸ್ತು ಸಂಗ್ರಹಾಲಯದ ಸ್ಥಾಪಕರಾದ ಶ್ರೀಯುತ ಮಹಮ್ಮದ್ ಯಾಸಿರ್ ಅವರನ್ನು 77ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಅನುಗ್ರಹ ಮಹಿಳಾ ಕಾಲೇಜು ಕಲ್ಲಡ್ಕಕ್ಕೆ ಮುಖ್ಯ ಅತಿಥಿಯಾಗಿ ಆಹ್ವಾನಿಸಲಾಯಿತು. ಸ್ವಾತಂತ್ರ್ಯ ದಿನಾಚರಣೆಯನ್ನು ಸ್ಮರಣೀಯವಾಗಿಸಲು ಶ್ರೀ ಮಹಮ್ಮದ್ ಯಾಸಿರ್ ಅವರು ಕಾಲೇಜಿಗೆ ಸುಂದರವಾದ ಸ್ಮರಣಿಕೆ ಯನ್ನು ಹಸ್ತಾಂತರಿಸಿದರು.

ಸ್ಮರಣಿಕೆಯು ಎರಡು 10 ರೂಪಾಯಿ ಭಾರತೀಯ ಕರೆನ್ಸಿ ನೋಟುಗಳ 15.08.1947 ಮತ್ತು 26.01.1950 ಸರಣಿ ಸಂಖ್ಯೆಗಳನ್ನು ಹೊಂದಿದೆ.

ಈ ಎರಡು ವಿಶೇಷ ದಿನಾಂಕಗಳು ಭಾರತದ ಇತಿಹಾಸದಲ್ಲಿ ನಡೆದ ಎರಡು ಪ್ರಮುಖ ಘಟನೆಗಳನ್ನು ನೆನಪಿಸುತ್ತದೆ. ಶ್ರೀಯುತ ಮಹಮ್ಮದ್ ಯಾಸಿರ್ ಅವರ ಸಾಧನೆಯನ್ನು ಕಾಲೇಜಿನ ಆಡಳಿತ ಮಂಡಳಿ, ಬೋಧಕ – ಬೋಧಕೇತರ ವೃಂದದವರು ಹಾಗೂ ವಿದ್ಯಾರ್ಥಿನಿಯರು ಪ್ರಶಂಸಿದರು.