ಅನುಗ್ರಹ ಮಹಿಳಾ ಕಾಲೇಜಿನಲ್ಲಿ 77ನೇ ಸ್ವಾತಂತ್ರ್ಯೋತ್ಸವ

0
97

ಸನ್ಮಾರ್ಗ ವಾರ್ತೆ

ದಿನಾಂಕ 15.08.2023 ರಂದು ಅನುಗ್ರಹ ಮಹಿಳಾ ಕಾಲೇಜಿನಲ್ಲಿ 77ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಪ್ರಾರಂಭದಲ್ಲಿ ಕಾಲೇಜಿನ ಆವರಣದಲ್ಲಿ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ ಶ್ರೀಯುತ ಮಹಮ್ಮದ್ ಯಾಸಿರ್, ಕಲ್ಲಡ್ಕ ವಸ್ತು ಸಂಗ್ರಹಾಲಯದ ಸ್ಥಾಪಕರು ಗಿಡ ನೆಡುವ ಮೂಲಕ ಸ್ವಾತಂತ್ರ್ಯ ದಿನಾಚರಣೆಯ ಸೊಬಗನ್ನು ಹೆಚ್ಚಿಸಿ ಚಾಲನೆ ನೀಡಿದರು.

ಪ್ರಾರಂಭದಲ್ಲಿ ಕುಮಾರಿ ನಿಹಾಲ ಹೈದರ್ ಪ್ರಥಮ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಕಿರಾತನ್ನು ಪಠಿಸಿದರು. ಅತಿಥಿಯಾಗಿ ಆಗಮಿಸಿದ ಶ್ರೀಯುತ ಮಹಮ್ಮದ್ ಯಾಸಿರ್ ಧ್ವಜಾರೋಹಣವನ್ನು ನೆರವೇರಿಸಿದರು.

ನಂತರ ವಿದ್ಯಾರ್ಥಿನಿಯರು ರಾಷ್ಟ್ರಗೀತೆ ಮತ್ತು ಧ್ವಜ ಗೀತೆಯನ್ನು ಹಾಡಿದರು. ಮುಂದುವರಿದು ಸಭಾ ಕಾರ್ಯಕ್ರಮವನ್ನು ಪ್ರಾರ್ಥನೆಯೊಂದಿಗೆ ಪ್ರಾರಂಭಿಸಿ ವಿದ್ಯಾರ್ಥಿನಿಯಾದ ಕುಲ್ಸ್ ನಿಹಾನ ಸ್ವಾತಂತ್ರ್ಯ ದಿನಾಚರಣೆಯ ಮಹತ್ವವನ್ನು ವ್ಯಕ್ತಪಡಿಸಿದರು. ರಾಷ್ಟ್ರಭಕ್ತಿಯನ್ನು ಸಾರುವ ದೇಶಭಕ್ತಿ ಗೀತೆಗಳನ್ನು ವಿದ್ಯಾರ್ಥಿನಿಯರು ಹಾಡಿದರು.

ಬೋರ್ಡ್ ಆಫ್ ಇಸ್ಲಾಮಿಕ್ ಪರೀಕ್ಷೆಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿನಿಯರಿಗೆ ಪ್ರಶಸ್ತಿ ಪತ್ರವನ್ನು ನೀಡಿ ಗೌರವಿಸಲಾಯಿತು. ವಿತರಣಾ ಪಟ್ಟಿಯನ್ನು ಮೌಲ್ಯಧಾರಿತ ಶಿಕ್ಷಣ ವಿಭಾಗದ ಮುಖ್ಯಸ್ಥೆಯಾಗಿರುವ ಶ್ರೀಮತಿ ಸಲೀಮಾರವರು ನೆರವೇರಿಸಿದರು.

ಅತಿಥಿಯಾಗಿ ಆಗಮಿಸಿದ ಶ್ರೀಯುತ ಮಹಮ್ಮದ್ ಯಾಸಿರ್ ರವರು ವಿದ್ಯಾರ್ಥಿಗಳು ನಮ್ಮ ದೇಶದ ಆಸ್ತಿ. ಸಾಧನೆ ಮಾಡಿದವರನ್ನು ನಮ್ಮ ದೇಶವು ಗುರುತಿಸುತ್ತದೆ. ಭಾರತ ದೇಶದ ಹಿರಿಮೆಯನ್ನು ಉತ್ತುಂಗಕ್ಕೆ ಕೊಂಡೊಯ್ಯುವ ಜವಾಬ್ದಾರಿಯುತ ದೇಶ ಪ್ರೇಮವನ್ನು ಬೆಳೆಸಿಕೊಳ್ಳಬೇಕು ಎಂದು ತಮ್ಮ ಅತಿಥಿ ಭಾಷಣದಲ್ಲಿ ತಿಳಿಸಿದರು.

ನಂತರ ಆಡಳಿತ ಮಂಡಳಿಯ ಸಂಚಾಲಕರಾದ ಶ್ರೀಯುತ ಅಮಾನುಲ್ಲಾ ಖಾನ್ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹುತಾತ್ಮರಾದ ಸೇನಾನಿಗಳನ್ನು ಸ್ಮರಿಸಿ ಭಾರತವನ್ನು ಸದೃಢ ಗೊಳಿಸಲು ಹಿಂದೂ ಮುಸ್ಲಿಂ ಐಕ್ಯತೆ ಅತ್ಯಗತ್ಯ ಎಂದು ತಿಳಿಸುತ್ತಾ ವಿದ್ಯಾರ್ಥಿನಿಯರಿಗೆ ಆದರ್ಶನಾರಿ, ಆದರ್ಶ ವಿದ್ಯಾರ್ಥಿ,ಆದರ್ಶ ಭಾರತೀಯ ಪ್ರಜೆ ಆಗಬೇಕೆಂಬ ಕಿವಿಮಾತಿನೊಂದಿಗೆ ತಮ್ಮ ಅಧ್ಯಕ್ಷೀಯ ಭಾಷಣವನ್ನು ಮುಕ್ತಾಯಗೊಳಿಸಿದರು.

ವೇದಿಕೆಯಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀಯುತ ಯಾಸಿನ್ ಬೇಗ್, ಉಪಾಧ್ಯಕ್ಷರು ಶ್ರೀಯುತ ಇಮಾರತ್ ಅಲಿ ಮತ್ತು ಖಜಾoಚಿಯಾದ ಹೈದರ ಅಲಿ ಹಾಗೂ ಕಾಲೇಜಿನ ಪ್ರಾಂಶುಪಾಲರಾದ ಹೇಮಲತ ಬಿ ಡಿ ಮತ್ತು ಕಾಲೇಜಿನ ಸಲಹಾ ಸಮಿತಿಯ ಕಾರ್ಯದರ್ಶಿ ಯಾದ ಶ್ರೀಮತಿ ಮಮಿತಾ ಎಸ್ ಇತರ ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಬೋಧಕ – ಬೋಧಕೇತರ ವೃಂದದವರು, ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

ಗಣಿತಶಾಸ್ತ್ರದ ಉಪನ್ಯಾಸಕಿಯಾದ ಕುಮಾರಿ ಸುಶ್ಮಿತಾ ರವರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವ ಎಲ್ಲರನ್ನೂ ಸ್ವಾಗತಿಸಿ, ವಂದಿಸಿ ಕಾರ್ಯಕ್ರಮವನ್ನು ನಿರೂಪಿಸಿದರು. ಲಘು ಉಪಹಾರದೊಂದಿಗೆ ಕಾರ್ಯಕ್ರಮವು ಮುಕ್ತಾಯಗೊಂಡಿತು.