ಸನ್ಮಾರ್ಗ ವಾರ್ತೆ
ಅಂಕಾರ,ಆ.29: ಉತ್ತರ ಸಿರಿಯದಲ್ಲಿ ಸುರಕ್ಷಿತ ವಲಯ ಸ್ಥಾಪಿಸಲು ಅಮೆರಿಕದ ಹಸ್ತಕ್ಷೇಪಕ್ಕೆ ಅವಕಾಶ ನೀಡುವುದಿಲ್ಲ ಎಂದು ಟರ್ಕಿ ಅಧ್ಯಕ್ಷ ರಜಬ್ ತಯ್ಯಿಬ್ ಉರ್ದುಗಾನ್ ಹೇಳಿದರು. ವಲಯದಲ್ಲಿ ಸೇಫ್ ಝೋನ್ ಸ್ಥಾಪಿಸುವ ಕ್ರಮದಲ್ಲಿ ಅಮೆರಿಕ ನಿಧಾನ ನೀತಿ ಅನುಸರಿಸುತ್ತಿದೆ. ಈ ವಿಷಯದಲ್ಲಿ ಅಮೆರಿಕದೊಂದಿಗೆ ಒಪ್ಪಂದ ಮಾಡಿಕೊಂಡಿದ್ದರೂ ಅದು ಸರಿಯಾದ ಕ್ರಮವಾಗಿತ್ತು ಎಂದು ಈಗಲೂ ತಾನು ಭಾವಿಸಿಲ್ಲ ಎಂದು ಅವರು ಹೇಳಿದರು.
ಯೋಜನೆ ವಿಳಂಬಗೊಳಿಸಲು ಟರ್ಕಿ ಬಿಡುವುದಿಲ್ಲ. ಉತ್ತರ ಸಿರಿಯ ನಗರ ಮನ್ಬಿಜಿನಿಂದ ವೈಪಿಜಿ ಹೋರಾಟಗಾರರನ್ನು ಹೊರ ದೂಡಲು ಟರ್ಕಿ ಅಮೆರಿಕದೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ಇದನ್ನು ಜಾರಿಗೊಳಿಸಲು ಅಮೆರಿಕ ವಿಳಂಬ ನೀತಿ ಅನುಸರಿಸಿತು ಎಂದು ಉರ್ದುಗಾನ್ ಆರೋಪಿಸಿದರು.ಆದ್ದರಿಂದ ಮನ್ಬಿಜಿನಲ್ಲಿ ನಡೆದಿದ್ದ ಒಪ್ಪಂದದಲ್ಲಾದ ವಿಳಂಬ ಈ ವಿಷಯದಲ್ಲಿ ಒಪ್ಪಲು ಸಾಧ್ಯವಿಲ್ಲ. ಹೊಸ ಪ್ರಕ್ರಿಯೆಯೊಂದಿಗೆ ಶೀಘ್ರವಾಗಿ ಮುಂದೆ ಸಾಗುತ್ತೇವೆ ಎಂದು ಉರ್ದುಗಾನ್ ಹೇಳಿದರು.












