ಕೋವಿಡ್ ಎರಡನೇ ಅಲೆಯ ಹೆಸರಲ್ಲಿ ಸರ್ಕಾರ ತನ್ನ ವೈಫಲ್ಯವನ್ನು ಮರೆಮಾಚಲು ಯತ್ನಿಸುತ್ತಿದೆ:  ವೆಲ್ಫೇರ್ ಪಾರ್ಟಿ ಟೀಕೆ

0
402

ಸನ್ಮಾರ್ಗ ವಾರ್ತೆ

ಬೆಂಗಳೂರು: ಕೋವಿಡ್ ರೋಗ ಮತ್ತೊಮ್ಮೆ ತಲೆದೋರಿದೆ. ಇದನ್ನು ತಡೆಗಟ್ಟಲು ಅಗತ್ಯ ಕ್ರಮಗಳು ಸರಕಾರ ತೆಗೆದುಕೊಳ್ಳಬೇಕು, ಹಾಗಂತ ಕೇವಲ ಸಭೆ ಸಮಾರಂಭ ಹಾಗೂ ಪ್ರತಿಭಟನೆಗಳಿಗೆ ನಿರ್ಬಂಧ ಹೇರಿರುವುದು ಸರಿಯಾದ ಕ್ರಮವಲ್ಲ ಎಂದು ವೆಲ್ಫೇರ್ ಪಾರ್ಟಿ ಕರ್ನಾಟಕ ಪಕ್ಷದ ರಾಜ್ಯಾಧ್ಯಕ್ಷ ಅಡ್ವೋಕೇಟ್ ತಾಹೀರ್ ಹುಸೇನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಪ್ರಕಟಣೆ ನೀಡಿರುವ ಅವರು, ಸಾರ್ವಜನಿಕರ ಹಕ್ಕುಗಳನ್ನು ಹತ್ತಿಕೂತಿರುವ ಸರಕಾರದ ಕ್ರಮ ಖಂಡನೀಯ. ರಮೇಶ್ ಜಾರಕಿಹೊಳಿ CD ಪ್ರಕರಣದಿಂದ ಸರಕಾರಕ್ಕೆ ಮುಜುಗುರ ಆಗಿದೆ, ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ, ಅದನ್ನು ಮರೆಮಾಚಲು ಪ್ರತಿಭಟನೆ ಗಳ ಮೇಲೆ ಸರಕಾರ ನಿರ್ಬಂಧ ಹೇರುತ್ತಿದ್ದೆ. ಸಾವಿರಾರು ಜನರನ್ನು ಸೇರಿಸಿ ರಾಜಕೀಯ ಪಕ್ಷಗಳು ಮೆರವಣಿಗೆ, ಚುನಾವಣಾ ಪ್ರಚಾರ ಮಾಡಿದರೆ ಸೋಂಕು ಹರಡುವುದಿಲ್ಲವೇ? ಎಂದು ಅವರು ಪ್ರಶ್ನಿಸಿದ್ದಾರೆ.

ಒಂದು ಕಡೆ ಸರಕಾರ ಸಾರ್ವಜನಿಕ ಕಾರ್ಯಕ್ರಮಗಳ ಮೇಲೆ ನಿರ್ಬಂಧ ಹೇರಿದರೆ ಇನ್ನೊಂದು ಕಡೆ ಚುನಾವಣಾ ಆಯೋಗ ಚುನಾವಣೆಗಳನ್ನು ಘೋಷಿಸುತ್ತಿದೆ. ಇದರಿಂದ ಸಾರ್ವಜನಿಕರಲ್ಲಿ ಗೊಂದಲ ಮೂಡಿದೆ. ಸರಕಾರ ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್ ವ್ಯಾಕ್ಸಿನ್ ಜನರಿಗೆ ತಲುಪುವಂತೆ ಮಾಡಬೇಕು, ಬೆಂಗಳೂರಿನಲ್ಲಿ ಬಿಎಂಟಿಸಿ ಸಾರಿಗೆಗಳಲ್ಲಿ ಜನ ತುಂಬಿ ಪ್ರಯಾಣ ಮಾಡುತ್ತಿದ್ದಾರೆ ಅದರ ಬಗ್ಗೆ ಗಮನ ಹರಿಸಿ ಅಂತರ ಕಾಯ್ದು ಪ್ರಯಾಣ ಮಾಡುವ ವ್ಯವಸ್ಥೆ ಮಾಡಬೇಕು. ಇದನೆಲ್ಲ ಬಿಟ್ಟು ಕೇವಲ ಪ್ರತಿಭಟನೆಗಳ ಮೇಲೆ ನಿರ್ಭಧನೆ ಹೇರುವುದು ಸಮಂಜಸವಲ್ಲ, ಸರಕಾರ ರೋಗ ತಡೆಯುವುದಕ್ಕಾಗಿ ವೈಜ್ಞಾನಿಕ ನಿರ್ಧಾರಗಳು ತೆಗೆದುಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು.