ಅಮೇರಿಕ| ಅರ್ಕಾನ್ಸಾಸ್‌ನಲ್ಲಿ ಅತ್ಯಾಚಾರ ಸೇರಿದಂತೆ ಎಲ್ಲ ರೀತಿಯ ಗರ್ಭಪಾತಗಳಿಗೆ ನಿಷೇಧ: ಹೊಸ ಗರ್ಭಪಾತ ನಿಷೇಧ ಕಾನೂನಿಗೆ ಗವರ್ನರ್ ಅಂಕಿತ

0
391

ಸನ್ಮಾರ್ಗ ವಾರ್ತೆ

ಅರ್ಕಾನ್ಸಾಸ್: ಅಮೆರಿಕಾದ ಯಾವುದೇ ರಾಜ್ಯದಲ್ಲಿ ಜಾರಿಗೆ ತರಲು ಸಾಧಯವಾಗದ ನೂತನ ಗರ್ಭಪಾತ ಕಾಯ್ದೆಯನ್ನು ಅರ್ಕಾನ್ಸಾಸ್ ರಾಜ್ಯ ಸರ್ಕಾರ ಜಾರಿಗೆ ತರುತ್ತಿದೆ. ಅತ್ಯಾಚಾರ, ವೇಶ್ಯಾವಾಟಿಕೆಯ ಕಾರಣಗಳಿಂದ ಗರ್ಭಧರಿಸಿದ ಮಹಿಳೆಯರು ಗರ್ಭಪಾತ ಮಾಡಿಸಿಕೊಳ್ಳುವುದು ಕೂಡ ಅಪರಾಧ ಎಂದು ಪರಿಗಣಿಸುವ ಹೊಸ ಮಸೂದೆಗೆ ಗರ್ವನರ್‌ ಅಸ್ಸಾ ಹಚಿನ್ಸನ್ ಮಂಗಳವಾರ ಅಂಕಿತ ಹಾಕಿದರು.

ಕಾಯ್ದೆಯ ಪ್ರಕಾರ ಗರ್ಭಪಾತವನ್ನು ಕೇವಲ ವೈದ್ಯಕೀಯ ತುರ್ತು ಪರಿಸ್ಥಿತಿಗಳಲ್ಲಿ ಮಾತ್ರ ನಡೆಸಬೇಕಿದ್ದು, ಅತ್ಯಾಚಾರ, ವೇಶ್ಯಾವಾಟಿಕೆ ಕಾರಣಗಳಿಂದ ನಡೆಸುವ ಗರ್ಭಪಾತವನ್ನೂ ಕೂಡ ಅಪರಾಧವೆಂದು ಪರಿಗಣಿಸಲಾಗುತ್ತದೆ. ಒಂದು ವೇಳೆ ನ್ಯಾಯಾಲಯ ಮಧ್ಯಪ್ರವೇಶಿಸದಿದ್ದರೆ, ಹೊಸ ಕಾನೂನು ಆಗಸ್ಟ್‌‌ನಿಂದ ಜಾರಿಗೆ ಬರಲಿದೆ.

ಅಮೆರಿಕದ ಅನೇಕ ರಾಜ್ಯಗಳು ಈಗಾಗಲೇ ಗರ್ಭಪಾತ ಮಸೂದೆಗಳನ್ನು ಅಂಗೀಕರಿಸಿದೆ. ಆದರೆ, ಅತ್ಯಾಚಾರ, ವೇಶ್ಯಾವಾಟಿಕೆ ಪ್ರಕರಣಗಳಲ್ಲಿ ಗರ್ಭಪಾತಕ್ಕೆ ಅನುಮತಿಸುವುದಿಲ್ಲ ಎಂದು ಯಾವುದೇ ರಾಜ್ಯ ಹೇಳಿಲ್ಲ. ಇತ್ತೀಚೆಗೆ, ಸೌತ್‌ ಕೆರೊಲಿನಾ ಇದೇ ರೀತಿಯ ಕಾನೂನು ರೂಪಿಸಿತ್ತು, ಆದರೆ, ಫೆಡರಲ್ ನ್ಯಾಯಾಲಯ ಈ ಕಾನೂನನ್ನು ರದ್ದುಗೊಳಿಸಿತ್ತು. ಇದರೊಂದಿಗೆ ಅರ್ಕಾನ್ಸಾಸ್ ರಾಜ್ಯ ಸರ್ಕಾರ ಜಾರಿಗೊಳಿಸುತ್ತಿರುವ ಕಾನೂನನ್ನು ನ್ಯಾಯಾಲಯ ರದ್ದುಗೊಳಿಸುವುದು ನಿಶ್ಚಿತ ಎಂದು ಹೇಳಲಾಗುತ್ತಿದೆ.

ಅತ್ಯಾಚಾರ ಹಾಗೂ ವೇಶ್ಯಾವಾಟಿಕೆ ಪ್ರಕರಣಗಳಿಗೆ ವಿನಾಯಿತಿ ನೀಡಲು ಸಿದ್ಧ ಎಂದು ಅರ್ಕಾನ್ಸಾಸ್ ಗವರ್ನರ್ ಅಸ್ಸ ಹಚಿನ್ಸನ್ ಅವರು ಹೇಳಿದ್ದಾರೆ.