ಲಡಾಖ್ ಪರಿಸರ ಹೋರಾಟಗಾರರ ಬಂಧನ; ಮೋದಿಯವರ ಅಹಂಕಾರ ಮುರಿಯಲಿದೆ ಎಂದ ರಾಹುಲ್‌

0
119

ಸನ್ಮಾರ್ಗ ವಾರ್ತೆ

ನವದೆಹಲಿ: ಶಿಕ್ಷಣ ತಜ್ಞ ಮತ್ತು ಪರಿಸರ ಹೋರಾಟಗಾರ ಸೋನಮ್ ವಾಂಗ್‌ಚುಕ್ ಅವರನ್ನು ಸೋಮವಾರ ರಾತ್ರಿ ಸಿಂಘು ಗಡಿಯಲ್ಲಿ ಲಡಾಖ್‌ನ 120ಕ್ಕೂ ಹೆಚ್ಚು ಪ್ರತಿಭಟನಾಕಾರರೊಂದಿಗೆ ಬಂಧಿಸಲಾಯಿತು. ದಿಲ್ಲಿ ನಗರದಲ್ಲಿ ಅಕ್ಟೋಬರ್ 6ರವರೆಗೆ ನಿಷೇಧಾಜ್ಞೆಗಳನ್ನು ಹೇರಿದ ಹಿನ್ನೆಲೆಯಲ್ಲಿ ಈ ಬಂಧನ ನಡೆದಿದೆ ಎನ್ನಲಾಗಿದೆ.

ವಿಪಕ್ಷ ನಾಯಕ ರಾಹುಲ್ ಗಾಂಧಿ ಮಂಗಳವಾರ ಪೊಲೀಸರ ಕ್ರಮವನ್ನು ತೀವ್ರವಾಗಿ ಖಂಡಿಸಿದ್ದು, “ಸಾಂವಿಧಾನಿಕ ಹಕ್ಕಿಗಾಗಿ ಹೋರಾಡುವವರನ್ನು ಬಂಧೀಸುವುದು ಸ್ವೀಕಾರಾರ್ಹವಲ್ಲ. ಲಡಾಖ್ ಭವಿಷ್ಯದ ಪರವಾಗಿರುವ ನಿಲ್ಲುತ್ತಿರುವ ವಯೋವೃದ್ಧರನ್ನು ದಿಲ್ಲಿ ಗಡಿಯಲ್ಲಿ ಬಂಧಿಸುವುದು ಯಾಕೆ? ಮೋದಿ ಜಿ, ರೈತರಂತೆ, ಈ ‘ಚಕ್ರವ್ಯೂಹ’ವೂ ಮುರಿಯಲಿದೆ, ನಿಮ್ಮ ಅಹಂಕಾರವೂ ಮುರಿಯಲಿದೆ. ನೀವು ಲಡಾಖ್‌ನ ಧ್ವನಿಯನ್ನು ಕೇಳಲೇಬೇಕು.” ಎಂದು ಅವರು ಪೋಸ್ಟ್ ಎಕ್ಸ್‌ನಲ್ಲಿ ಹಾಕಿದ್ದಾರೆ.

ವಾಂಗ್‌ಚುಕ್ ಮತ್ತು ಇತರ ಪ್ರತಿಭಟನಾಕಾರರು ಪಾದಯಾತ್ರೆಯ ಮೂಲಕ ದಿಲ್ಲಿಗೆ ಬಂದಿದ್ದರು, ಮತ್ತು ಅವರು ಅಕ್ಟೋಬರ್ 2ರಂದು ಗಾಂಧಿ ಜಯಂತಿ ದಿನ ರಾಜ್‌ಘಾಟ್‌ಗೆ ತಲುಪುವ ಯೋಜನೆ ಹೊಂದಿದ್ದರು. ಈ ಪ್ರತಿಭಟಕರು ಕೇಂದ್ರದ ಜೊತೆಗೆ ಪ್ರಮುಖ ಬೇಡಿಕೆಗಳ ಬಗ್ಗೆ ಸಂವಾದವನ್ನು ಪುನಃ ಪ್ರಾರಂಭಿಸಬೇಕು ಎಂದು ಆಗ್ರಹಿಸಿದ್ದರು., ಲಡಾಖ್‌ಗೆ ರಾಜ್ಯದ ಸ್ಥಾನ ನೀಡುವುದು, ಭಾರತದ ಸಂವಿಧಾನದ ಆರನೇ ಅನುಸೂಚಿಗೆ ಒಳಪಡಿಸುವುದು ಮತ್ತು ಪರಿಸರ ರಕ್ಷಣೆಗಾಗಿ ಕಠಿಣ ಕ್ರಮ ಕೈಗೊಳ್ಳುವುದು ಇತ್ಯಾದಿ ಬೇಡಿಕೆಗಳಿಗೆ ಒತ್ತಾಯಿಸಿ ಲೇಹ್ ಅಪೆಕ್ಸ್ ಬಾಡಿ ಪಾದಯಾತ್ರೆಯನ್ನು ಆಯೋಜಿಸಿತ್ತು.

ಸೋಮವಾರ ಬಂಧನದ ನಂತರ, ವಾಂಗ್‌ಚುಕ್ ಮಾತನಾಡುತ್ತಾ, ನಮ್ಮ ಭವಿಷ್ಯದ ಬಗ್ಗೆ ತಿಳಿಯದು, ನಾವು ಬಹಳ ಶಾಂತಿಯುತವಾಗಿ ಬಾಪು ಅವರ ಸಮಾಧಿಗೆ ಹೋಗುತ್ತಿದ್ದೇವೆ… ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶದಲ್ಲಿ, ಪ್ರಜಾಪ್ರಭುತ್ವದ ತಾಯ್ನಾಡಿನಲ್ಲಿ… ಹೈ ರಾಮ್.” ಎಂದು ಹೇಳಿದರು.

ದಿಲ್ಲಿಯಲ್ಲಿ ಹೇರಿದ ನಿಷೇಧಾಜ್ಞೆಗಳ ಹಿನ್ನೆಲೆಯಲ್ಲಿ, ದ್ವೇಷದ ವಾತಾವರಣ, MCD ಸ್ಥಾಯಿ ಸಮಿತಿ ಚುನಾವಣೆ, ವಿಧಾನಸಭಾ ಚುನಾವಣೆಗಳು, ಹಬ್ಬದ ಕಾಲ, ಮತ್ತು ಗಾಂಧಿ ಜಯಂತಿ ಉಲ್ಲೇಖಿಸಿ ಬಂಧನ ನಡೆದಿದೆ. ಈ ಘಟನೆ ಹಲವು ಪತ್ರಿಕೆಗಳು ಗಮನಾರ್ಹವಾಗಿ ಪರಿಗಣಿಸಿಲ್ಲ ಎಂದು ನ್ಯೂಸ್ ಲಾಂಡ್ರಿ ವರದಿ ಮಾಡಿದೆ.