ಮಾಧ್ಯಮಗಳು ವಿಚಾರಣೆಗೆ ತುತ್ತಾದಾಗ

0
400

ಸನ್ಮಾರ್ಗ ವಾರ್ತೆ

ಅಡ್ವೊಕೇಟ್ ಕಾಳಿಸ್ವರಂ ರಾಜ್

ತುರ್ತು ಪರಿಸ್ಥಿತಿಗೆ 45 ವರ್ಷ ಕಳೆದಿದೆ. ಸಂವಿಧಾನ, ಪ್ರಜಾಸ್ವಾತಂತ್ರ್ಯವನ್ನು ಹೇಗೆ ಅಧಿಕಾರ ಶಕ್ತಿಗಳು ಬುಡಮೇಲುಗೊಳಿಸ ಬಹುದು ಎಂಬುದರ ಐತಿಹಾಸಿಕ ಪಾಠವನ್ನು, ತುರ್ತು ಪರಿಸ್ಥಿತಿ ಕೊಟ್ಟಿತು. ಕೊರೊನ ಕಾಲದ ಭಾರತದಲ್ಲಿ ಸವಾಲು ಒಡ್ಡಲಾದ ಮನುಷ್ಯ ಹಕ್ಕುಗಳೂ, ಪೌರ ಸ್ವಾತಂತ್ರ್ಯವೂ ಅತ್ಯಧಿಕ ಎಚ್ಚರಿಕೆಯನ್ನು ಪ್ರಜೆಗಳಿಂದಲೂ ಮಾಧ್ಯಮಗಳಿಂದಲೂ ಬಯಸುತ್ತಿದೆ. ಕೊರೊನಕ್ಕಿಂತ ಮುಂಚೆಯೇ ಲೋಕದಲ್ಲಿ ಹಲವು ಪ್ರಜಾ ಪ್ರಭುತ್ವಗಳಲ್ಲಿಯೂ ಸಮಗ್ರಾಧಿಪತ್ಯ(ಸರ್ವ ಅಧಿಕಾರ)ದ, ಬಲ ಪಂಥೀಕರಣದ ನೆರಳು ಹರಡಿಕೊಂಡಿತ್ತು. ಪಾಶ್ಚಾತ್ಯ ಪ್ರಜಾಪ್ರಭುತ್ವಗಳು ಎದುರಿಸಿದ ದೊಡ್ಡ ಸಂದಿಗ್ಧತೆಯ ಕುರಿತು `ಕೊನೆಯ ಓಟು’ (ದ ಲಾಸ್ಟ್ ವೋಟ್) ಎಂಬ ಗ್ರಂಥದಲ್ಲಿ ಫಿಲಿಪ್ ಕೊಗನ್ ವಿಶ್ಲೇಷಿಸಿದ್ದಾರೆ. ಹಾರ್ವರ್ಡ್ ವಿಶ್ವವಿದ್ಯಾನಿಲಯದ ಸ್ಟೀವನ್ ಲೆವಿಟ್‍ಸ್‍ಕಿ, ಡಾನಿಯಲ್ ಸಿಬ್‍ಲಾಟ್ ಸೇರಿ ಬರೆದ `ಪ್ರಜಾಪ್ರಭುತ್ವವೂ ಹೇಗೆ ಸಾಯುತ್ತಿದೆ’ (ಹೌ ಡೆಮಕ್ರಸಿ ಡೈ) ಎಂಬ ಪುಸ್ತಕವೂ ಪ್ರಸಿದ್ಧಿಯನ್ನು ಗಳಿಸಿಕೊಂಡಿದೆ. ಯೆಲ್ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಫ್ರಾಂಕ್ ಎಂ. ಸ್ನೋಡನ್‍ರು ಮಹಾ ಮಾರಿಗಳು ಸಮಾಜವನ್ನೂ ರಾಜಕೀಯ ವ್ಯವಸ್ಥೆಯನ್ನೂ ಹೇಗೆಲ್ಲ ಸ್ವಾತಂತ್ರ್ಯ ರಹಿತವೋ, ಸ್ವಾತಂತ್ರ್ಯ ವಿರುದ್ಧವೋ ಆಗಿಸುತ್ತದೆಂದು 2019ರ ಒಂದು ಅಧ್ಯಯನದಲ್ಲಿ ವಿವರಿಸಿದ್ದಾರೆ.

ಕೊರೋನಕ್ಕಿಂತ ಮೊದಲೇ ಭಾರತದಲ್ಲಿ ವ್ಯಕ್ತಿ(ವೈಯಕ್ತಿಕ) ಸ್ವಾತಂತ್ರ್ಯವು ಭಯಾನಕ ರೀತಿಯಲ್ಲಿ ಪ್ರಶ್ನಿಸಲ್ಪಟ್ಟಿತ್ತು. ಯಾವುದಕ್ಕೂ ಏನಕ್ಕೂ ಎಫ್‍ಐಆರ್ ಎಂಬ ಅವಸ್ಥೆ ಬಂತು. ಶಾಂತಿಯುತವಾದ ರಾಜಕೀಯ ಹೋರಾಟಗಳನ್ನೂ ಪ್ರತಿಭಟನೆಗಳನ್ನೂ ಕ್ರಿಮಿನಲ್ ಅಪರಾಧವಾಗಿ ಮುದ್ರೆಯೊತ್ತಿ ದಮನಿಸುವ ಸ್ಥಿತಿಯುಂಟಾಯಿತು. ಒಂದು ಟ್ವೀಟ್‍ನ ಹೆಸರಿನಲ್ಲಿ ಅಥವಾ ಘೋಷಣೆ ಕೂಗಿದ ಹೆಸರಿನಲ್ಲಿ ಯಾರನ್ನೂ ಬಂಧಿಸಿ ಜೈಲಲ್ಲಿಡಬಹುದು ಎಂಬ ಸ್ಥಿತಿ ಬಂತು. ಕೊರೋನದ ಬಳಿಕ ಈ ಸ್ಥಿತಿಯು ತುಂಬ ಹೆದರಿಕೆ ಹುಟ್ಟಿಸುವ ನೆಲೆಯಲ್ಲೇ ಮುಂದುವರಿಯುತ್ತಿದೆ. ಜೊತೆಗೆ, ಬೆರಳೆಣಿಕೆಯ ಕೆಲವು ಅತೀ ಶ್ರೀಮಂತ(ಆಗರ್ಭ ಶ್ರೀಮಂತರು) ರಿಗಾಗಿ ಮಾತ್ರ ಹಲವು ನೀತಿ ವೈಪರೀತ್ಯಗಳು ಘೋಷಣೆ ಯಾದವು. ಹೀಗೆ ಕೂಡ ಸಂವಿಧಾನ ಸವಾಲಿಗೊಳಗಾಗುವುದು.

ಇಂತಹ ಸಂದರ್ಭಗಳಲ್ಲಿ ನಮ್ಮ ಮಾಧ್ಯಮಗಳು ಏನು ಮಾಡುತ್ತಿವೆ? ಮಾಧ್ಯಮ ಸ್ವಾತಂತ್ರ್ಯ ಪಟ್ಟಿಯ ವಿಷಯದಲ್ಲಿ ಈ ವರ್ಷ ಭಾರತ 142ನೇ ಸ್ಥಾನಕ್ಕೆ ಕುಸಿದಿದೆ ಎಂದು ರಿಪೋಟರ್ಸ್ ವಿದೌಟ್ ಬೋರ್ಡರ್ಸ್ ಎಂಬ ಸಂಘಟನೆ ತಿಳಿಸಿದೆ. ಶ್ರೀಲಂಕಾ, ಭೂತಾನ್‍ನಲ್ಲಿ ಕೂಡ ಪರಿಸ್ಥಿತಿ ಇಲ್ಲಿಗಿಂತ ಉತ್ತಮವಾಗಿದೆ ಎಂದು ವರದಿ ಹೇಳಿತ್ತು. ಕೋಮುಶಕ್ತಿಗಳು, ಅಮಿತಾ(ಹೆಚ್ಚಿನ ಅ)ಧಿಕಾರ ಪ್ರವೃತ್ತಿಗಳು ಈ ದುಃಸ್ಥಿತಿ ಬರಲು ಕಾರಣವಾಗಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.

ಮಾಧ್ಯಮ ಸ್ವಾತಂತ್ರ್ಯ ಕಡಿಮೆಯಾಗುವಾಗ ವ್ಯಕ್ತಿ ಸ್ವಾತಂತ್ರ್ಯವೂ ಕಡಿಮೆಯಾಗುವುದು ಎಂದು ಸಾಮಾನ್ಯವಾಗಿ ಹೇಳಬಹುದಾದರೂ ಮಾಧ್ಯಮ ಸ್ವಾತಂತ್ರ್ಯಕ್ಕಾಗಿ ನಿಲುವು ಕೈಗೊಂಡರೆ ಮಾತ್ರವೇ ಪೌರ ಸ್ವಾತಂತ್ರ್ಯದ ಜೊತೆ ನಿಲ್ಲಲು ಸಾಧ್ಯ ಎಂಬುದು ಇತಿ ಹಾಸ ನೀಡುವ ಪಾಠವಾಗಿದೆ. ಅಧಿಕಾರ ಶಕ್ತಿಗಳ ಮುಂದೆ ರಾಜಿಮಾಡಿಕೊಳ್ಳುವ ಮಾಧ್ಯಮಗಳು ಜನರಿಂದ ವಿಚಾರಣೆಗೊಳ ಗಾಗಲಿವೆ. ತುರ್ತು ಪರಿಸ್ಥಿತಿಯಾಚೆ, ಮಾಧ್ಯಮ ಸ್ವಾತಂತ್ರ್ಯಕ್ಕಾಗಿ ನಡೆದ ಪರಿಶ್ರಮಗಳ ವಿಶೇಷ ಇತಿಹಾಸ ಭಾರತಕ್ಕಿದೆ. 1823ರಲ್ಲಿ ಬ್ರಿಟಿಷರು ತಂದ ಮಾಧ್ಯಮ ವಿರುದ್ಧ ಆರ್ಡಿನನ್ಸ್ (ಸುಗ್ರಿವಾಜ್ಞೆ) ವಿರುದ್ಧ ರಾಜಾರಾಂ ಮೋಹನ್‍ರಾಯ್ ನೀಡಿದ ನಿವೇದನೆ ಪ್ರಸಿದ್ಧವಾಗಿದೆ.

ಸ್ವಾತಂತ್ರ್ಯದ ಬಳಿಕ ಮಾಧ್ಯಮ ಸ್ವಾತಂತ್ರ್ಯಕ್ಕೆ ಅನುಕೂಲ ವಾದ ಎರಡು ಪ್ರಧಾನ ತೀರ್ಪುಗಳು ಸುಪ್ರೀಂಕೋರ್ಟಿನಿಂದ ಬಂದಿದೆ. ರಮೇಶ್ ಥಾಪರ್ ಪ್ರಕರಣದಲ್ಲಿ (1950) ಎಡಪಕ್ಷ ಪ್ರಕಟಣೆ ಕ್ರಾಸ್ ರೋಡ್ಸ್ ಮುದ್ರಿಸಿ ವಿತರಣೆ ಮಾಡುವುದನ್ನು ಅಂದಿನ ಮದರಾಸಿ ಸರಕಾರ ನಿಯಂತ್ರಿಸಲು ಶ್ರಮಿಸಿದಾಗ ಆ ನಿಯಂತ್ರಣಗಳು ಸಂವಿಧಾನ ವಿರೋಧಿ ಯಾಗಿವೆ ಎಂದು ಸುಪ್ರೀಂಕೋರ್ಟು ಹೇಳಿತ್ತು. ಕುತೂಹಲ ವೆಂದರೆ, ಬಲಪಂಥೀಯ ಪತ್ರಿಕೆಯಾದ `ದ ಆರ್ಗನೈಸರ್’ನ ಕುರಿತು ಸೆನ್ಸಾರ್‍ಶಿಪ್ ಪ್ರಯೋಗಿಸಲು ಶ್ರಮಿಸಿದ ಸರಕಾರದ ಕ್ರಮವನ್ನು ಸುಪ್ರೀಂಕೋರ್ಟು ರದ್ದಪಡಿಸಿದ್ದೂ ಅದೇ ವರ್ಷದ ಭ್ರಜ್‍ಭೂಷಣ್ ಪ್ರಕರಣದಲ್ಲಾಗಿತ್ತು.

ಆದರೆ, ಮಾಧ್ಯಮ ಸ್ವಾತಂತ್ರ್ಯ ಕುರಿತ ಕಾನೂನು ತತ್ವಗಳಿಗೆ ತುರ್ತು ಪರಿಸ್ಥಿತಿ ಕಾಲದ ಸರಕಾರವು ಹುಲ್ಲು ಬೆಲೆಯೂ ಕಲ್ಪಿಸಲಿಲ್ಲ. 1975ರಲ್ಲಿ ತಂದ ಮೂರು ಮಾಧ್ಯಮ ವಿರೋಧಿ ಆರ್ಡಿನನ್ಸ್‍ಗಳು ಮರು ವರ್ಷ ಕಾನೂನು ಆಯಿತು. ಪ್ರಕಟಣೆ ತಡೆಯಲಿಕ್ಕಾಗಿ ದಿಲ್ಲಿಯ ಪ್ರಮುಖ ಮಾಧ್ಯಮ ಸಂಸ್ಥೆಯ ಕಚೇರಿಯ ವಿದ್ಯುತ್ ಸಂಪರ್ಕವನ್ನು ಕೂಡ ತೆಗೆದುಹಾಕಲು ಮೇಲಿಂದ ಆದೇಶ ವಾದ ವಿವರವು ತುರ್ತು ಪರಿಸ್ಥಿತಿ ಕಾಲದ ಅತಿಕ್ರಮಗಳ ಕುರಿತು ಅಧ್ಯಯನ ಮಾಡಿದ ಶಾ ಆಯೋಗ ವಿವರಿಸಿತ್ತು. ಸೆನ್ಸಾರ್‍ಶಿಪ್ಪೂ, ಮಾಧ್ಯಮಗಳ ಮೇಲಾದ ಕಾನೂನು ಕ್ರಮಗಳೂ ಪತ್ರಕರ್ತರ ಬಂಧನವೂ, ಜೈಲುಗಳೆಲ್ಲವೂ ಮುಂದುವರಿಯುವ ಕಥೆಗಳಾದವು. ದೂರವಿಟ್ಟ ಆಡಿಟೋರಿ ಯಲ್(ಸಂಪಾದಕೀಯ)ನ ಭಾಗಗಳು ಪ್ರಜಾಪ್ರಭುತ್ವ ಪ್ರತಿ ರೋಧದ ವಾಚಾಳಿತ್ವವನ್ನು (ಪ್ರಜಾಪ್ರಭುತ್ವದ ಕುರಿತು ಹೆಚ್ಚು ಮಾತಾಡುವುದನ್ನು) ಮೌನವಾಗಿಸಿತು.

ಈಗ ತುರ್ತು ಪರಿಸ್ಥಿತಿ ಸ್ಮರಣೆಯ ಹಿನ್ನೆಲೆಯಲ್ಲಿ ರಾಷ್ಟ್ರೀಯ ರಾಜಕೀಯವನ್ನೂ ಮಾಧ್ಯಮ ಪರಿಸ್ಥಿತಿಯನ್ನೂ ಅವಲೋಕಿ ಸುವಾಗ ಆತಂಕಗೊಳ್ಳಲಷ್ಟೇ ಸಾಧ್ಯ. ಅನ್ಯಥಾ ಮುದ್ರಣ ಮಾಧ್ಯಮಗಳು ಸವಾಲು ಎದುರಿಸಿದ ಕಾಲದಲ್ಲಿ ಆಡಳಿತ ಕೂಟ(ಸರಕಾರಕ್ಕೆ)ಕ್ಕೆ ಮಾಧ್ಯಮ ಆಶ್ರಯವನ್ನು ದೃಢಪಡಿಸು ವುದೂ ಬಹುತೇಕ ಸುಲಭವಾಯಿತು. ಸರಕಾರವನ್ನು ವಿರೋಧಿಸುವ ಮಾಧ್ಯಮಗಳಿಗೆ ಜಾಹೀರಾತು ನೀಡದೆಯೂ, ಅದುಮಿಡುವ ಯತ್ನಗಳಾದವು. ವರದಿಯ ಹೆಸರಿನಲ್ಲಿ ಪತ್ರಕರ್ತರ ವಿರುದ್ಧ ಕೇಸು ಹಾಕುವುದು ಇನ್ನೊಂದು ರೀತಿಯ ಸೆನ್ಸಾರ್‍ಶಿಪ್‍ಗೆ ಸಮಾನವಾಗಿದೆ. ಸರಕಾರಿ ವ್ಯವಸ್ಥೆ ಗಳನ್ನು ಸ್ವತಂತ್ರ ಮಾಧ್ಯಮಗಳ ವಿರುದ್ಧ ಪ್ರಯೋಗಿಸಿ ತುರ್ತುಪರಿಸ್ಥಿತಿ ಕಾಲದ ಅದೇ ರೀತಿಯು ಹೊಸ ಕಾಲಘಟ್ಟದಲ್ಲಿ ಇನ್ನೊಂದು ರೂಪದಲ್ಲಿ ವ್ಯಾಪಿಸಿಕೊಂಡು ಬಲವಾಗಿ ಜಾರಿ ಗೊಳಿಸುವ ಅವಸ್ಥೆಯುಂಟಾಯಿತು.

ಬಂಡವಾಳದ ಸುರಕ್ಷಿ ತತೆಯ ಕಾರಣದಲ್ಲಿ ಹಲವು ಮುಖ್ಯಧಾರೆಯ ಮಾಧ್ಯಮ ಗಳೂ ವಿಧೇಯತ್ವದ ಪರ್ಯಾಯಗಳಾಗಿ ಬದಲಾಗಿಬಿಟ್ಟಿವೆ.
ಆದರೆ, ರಾಷ್ಟ್ರಮಟ್ಟದಲ್ಲಿಯೂ ರಾಜ್ಯಮಟ್ಟದಲ್ಲಿಯೂ ಸ್ವಾತಂತ್ರ್ಯಕ್ಕೂ ಮಾನವಹಕ್ಕುಗಳಿಗಾಗಿಯೂ ಸಂವಿಧಾನದ ಮೌಲ್ಯಗಳಿಗಾಗಿಯೂ ನೆಲೆಯಾದ ಕೆಲವು ಮಾಧ್ಯಮಗಳು ಇವೆ ಎಂಬುದು ಸಮಾಧಾ ನಕರವಾಗಿದೆ. ಮುದ್ರಣ ಮಾಧ್ಯಮಗಳೂ, ಡಿಜಿಟಲ್ ಮಾಧ್ಯಮಗಳೂ ಇರುವ ಈ ಸಂಸ್ಥೆಗಳೇ ಪ್ರತಿಪಕ್ಷದ ಪಾತ್ರವಹಿಸುತ್ತಿವೆ. ಶಕ್ತಿಶಾಲಿ ಪ್ರತಿಪಕ್ಷ, ಆಡಳಿತ ಪರವಾದ ಅಗತ್ಯ ಮಾತ್ರವಲ್ಲ ಸಂವಿಧಾನಪರವಾದ ಆವಶ್ಯಕತೆ ಕೂಡಾ ಆಗಿದೆ.

(ಬರೆದವರು ಸುಪ್ರೀಂಕೋರ್ಟು ಮತ್ತು ಹೈಕೋರ್ಟಿನ ವಕೀಲರು-ಕೃಪೆ ಮಾಧ್ಯಮಂ)

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.