ಆರ್ಯನ್ ಮಿಶ್ರಾ ಹತ್ಯೆ: ಜಮಾಅತೆ ಇಸ್ಲಾಮಿ ಹಿಂದ್ ಖಂಡನೆ

0
289

ಸನ್ಮಾರ್ಗ ವಾರ್ತೆ

ಹರಿಯಾಣದ ಫರಿದಾಬಾದ್‌ನಲ್ಲಿ 19 ವರ್ಷದ ಆರ್ಯನ್ ಮಿಶ್ರಾ ಅವರನ್ನು ಗೋರಕ್ಷಕರು ಹತ್ಯೆಗೈದಿರುವುದನ್ನು ಜಮಾಅತೆ ಇಸ್ಲಾಮಿ ಹಿಂದ್ ಖಂಡಿಸಿದೆ.

ಕೋಮುವಾದಿ ಮನಸ್ಥಿತಿಯ ಕಾರಣಕ್ಕೆ ನಡೆದ ಈ ಘೋರ ಅಪರಾಧವು ನಮ್ಮ ಸಮಾಜದಲ್ಲಿ ಗೋವಿನ ರಕ್ಷಣೆಯ ಹೆಸರಿನಲ್ಲಿ ನಡೆಯುತ್ತಿರುವ ಅಪರಾಧದ ಕುರಿತು ಬೆಳಕು ಚೆಲ್ಲಿದೆ. ಆರ್ಯನ್ ಮಿಶ್ರಾ ಅವರ ದುರಂತ ಸಾವು ಅನಿಯಂತ್ರಿತ ದ್ವೇಷವು ಅಂತಿಮವಾಗಿ ತನ್ನ ಮೇಲೆಯೇ ತಿರುಗುತ್ತದೆ ಎಂಬುವುದಕ್ಕೆ ನಿದರ್ಶನವಾಗಿದೆ. ದ್ವೇಷದ ವಿಷವು ಅವರ ಹಿನ್ನೆಲೆಯನ್ನು ಲೆಕ್ಕಿಸದೆ ಯಾರನ್ನೂ ಬಿಡುವುದಿಲ್ಲ ಎಂಬುದನ್ನು ಈ ಘಟನೆ ಎತ್ತಿ ತೋರಿಸಿದೆ.

ಅಂತಹ ಗುಂಪುಗಳು ಕಾನೂನುಬಾಹಿರ ಅಧಿಕಾರವನ್ನು ಅನುಭವಿಸುತ್ತಿವೆ. ದುಷ್ಕರ್ಮಿಗಳು ಪೋಲೀಸ್ ಮತ್ತು ರಾಜಕೀಯ ಬೆಂಬಲ, ರಕ್ಷಣೆ ಪಡೆಯುತ್ತಿರುವುದು ಆಶ್ಚರ್ಯಕರವಾಗಿದೆ. ಹೆಚ್ಚುತ್ತಿರುವ ಗೋರಕ್ಷಕರ ಬೆದರಿಕೆಯನ್ನು ತಡೆಯಲು ಸರ್ಕಾರ ಮತ್ತು ಕಾನೂನು ಜಾರಿ ಸಂಸ್ಥೆಗಳು ತಕ್ಷಣ ನಿರ್ಣಾಯಕ ಕ್ರಮವನ್ನು ಕೈಗೊಳ್ಳುವುದು ಅತ್ಯಗತ್ಯ.

ಧೈರ್ಯದಿಂದ ಕಾನೂನನ್ನು ಕೈಗೆತ್ತಿಕೊಳ್ಳುವ ಇಂತಹ ದುಷ್ಕರ್ಮಿಗಳ ಗುಂಪುಗಳನ್ನು ತಡೆಯಲು ನಮ್ಮ ನ್ಯಾಯಾಂಗವು ಸಮಯೋಚಿತ ನಿರ್ಧಾರ ತೆಗೆದುಕೊಳ್ಳಬೇಕು. ಅಂತಹ ಗುಂಪುಗಳ ಮೇಲೆ ಸಹಿಷ್ಣುತೆ ಮತ್ತು ಮೌನ ಅನುಮೋದನೆಯು ಸ್ವೀಕಾರಾರ್ಹವಲ್ಲ. ಈ ಅಪರಾಧಿಗಳ ವಿರುದ್ಧ ಕ್ರಮ ಕೈಗೊಂಡು ಮುಗ್ಧ ಜೀವಗಳ ಮತ್ತಷ್ಟು ನಷ್ಟವನ್ನು ತಡೆಯಬೇಕಾಗಿದೆ ಜಮಾಅತೆ ಇಸ್ಲಾಮೀ ಹಿಂದ್ ಆಗ್ರಹಿಸಿದೆ.

ನಾವು ಆರ್ಯನ್ ಮಿಶ್ರಾ ಅವರಿಗೆ ತ್ವರಿತ ನ್ಯಾಯವನ್ನು ಕೋರುತ್ತೇವೆ. ನಮ್ಮ ರಾಷ್ಟ್ರ ರಚನೆಗೆ ಬೆದರಿಕೆ ಹಾಕುವ ಈ ಗೋರಕ್ಷಕ ಪ್ರವೃತ್ತಿಯ ವಿರುದ್ಧ ಧ್ವನಿ ಎತ್ತಲು ಎಲ್ಲಾ ಜವಾಬ್ದಾರಿಯುತ ನಾಗರಿಕರಿಗೆ ಕರೆ ನೀಡುತ್ತೇವೆ ಎಂದು ಜಮಾಅತೆ ಇಸ್ಲಾಮೀ ಹಿಂದ್ ವಕ್ತಾರ ಸಲೀಮ್ ಇಂಜಿನಿಯರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.