ಕಾಶ್ಮೀರ: ಆಸಿಯಾ ಅಂದ್ರಾಬಿಯ ವಿರುದ್ಧ ದೇಶದ್ರೋಹ ಆರೋಪ ಹೊರಿಸಲು ಕೋರ್ಟ್ ಆದೇಶ

0
426

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಕಾಶ್ಮೀರದ ನಿಷೇಧಿತ ಪ್ರತ್ಯೇಕವಾದಿ ಸಂಘಟನೆಯಾದ ದುಕ್ತರಾನೆ ಮಿಲ್ಲತ್‍ನ ಸ್ಥಾಪಕ ನಾಯಕಿ ಆಸಿಯಾ ಅಂದ್ರಾಬಿ, ಸಹ ಕಾರ್ಯಕರ್ತೆಯರಾದ ಫೆಹ್ಮಿದಾ ಸೋಫಿ, ನಹೀದಾ ನಸ್ರೀನ್ ವಿರುದ್ಧ ದೇಶದ್ರೋಹ ಆರೋಪ ಹೊರಿಸಲು ಕೋರ್ಟ್ ಆದೇಶ ಹೊರಡಿಸಿದೆ.

ವಿಶೇಷ ಕೋರ್ಟಿನ ಜಡ್ಜ್ ಪರ್ವೀನ್ ಸಿಂಗ್ ಆದೇಶ ನೀಡಿದ್ದು, ಸರಕಾರದ ವಿರುದ್ಧ ಯುದ್ಧ, ದೇಶದ್ರೋಹ, ದೇಶದಲ್ಲಿ ಭಯೋತ್ಪಾದನಾ ಚಟುವಟಿಕೆಗಳಿಗೆ ಸಂಚು ಹೆಣೆದದ್ದು ಈ ಆರೋಪಗಳನ್ನು ಹೊರಿಸಿ ಕೇಸು ಹಾಕಬೇಕೆಂದು ಕೋರ್ಟು ಹೇಳಿದೆ.

ಯುಎಪಿಎ ಕಾನೂನು ಪ್ರಕಾರ ಬಂಧಿಸಲಾಗಿರುವ ಇವರನ್ನು ಈಗಾಗಲೇ ವಿಚಾರಣೆ ನಡೆಸಲಾಗುತ್ತಿದೆ. ಈ ಮೂವರನ್ನು 2018 ಎಪ್ರಿಲ್‍ನಲ್ಲಿ ಬಂಧಿಸಲಾಗಿತ್ತು.