ಕುರ್ದ್‌ಗಳ ಗೋಧಿ ಬೆಳೆ ದರೋಡೆಗೆ ಸಿರಿಯ ಅಧ್ಯಕ್ಷರಿಂದ ಆದೇಶ

0
633

ಸನ್ಮಾರ್ಗ ವಾರ್ತೆ

ಡಮಾಸ್ಕಸ್,ಡಿ.11: ಕುರ್ದ್ ಬಹುಸಂಖ್ಯಾತರ ಪ್ರದೇಶದಿಂದ ಗೋಧಿಯನ್ನು ದರೋಡೆ ಮಾಡಲು ಸಿರಿಯದ ಸರಕಾರ ಸೈನ್ಯಕ್ಕೆ ಆದೇಶ ನೀಡಿದೆ ಎಂಬುದಾಗಿ ವರದಿಯಾಗಿದೆ. ದೇಶದ ಆಹಾರ ಧಾನ್ಯದಲ್ಲಿ ಸಿರಿಯಾದಲ್ಲಿ ತೀವ್ರ ಬಿಕ್ಕಟ್ಟು ಕಂಡು ಬಂದಿದ್ದು ಈಶಾನ್ಯದಲ್ಲಿರುವ ಕುರ್ದುಗಳ ಗೋಧಿಯನ್ನು ಎತ್ತಿಕೊಂಡು ಬರುವಂತೆ ಸಿರಿಯ ಅಧ್ಯಕ್ಷ ಬಶ್ಶರ್ ಅಲ್ ಅಸದ್ ಆದೇಶಿಸಿದ್ದಾರೆ ಎಂದು ಪ್ರತಿಪಕ್ಷ ಮಾಧ್ಯಮವಾದ ಐನ್ ಅಲ್ ಫುರಾತ್ ವರದಿ ಮಾಡಿದೆ.

ಯುಫ್ರಿಟಿಸ್ ನದಿ ಬದಿಯ ಕ್ರಾಸಿಂಗ್‍ನಲ್ಲಿ ಸಾಗಾಟ ನಡೆಯುತ್ತಿದ್ದ ಎರಡು ಟ್ರಕ್ ಗೋಧಿಯನ್ನು ವಶಪಡಿಸಿಕೊಳ್ಳಲು ಖತ್ರಿಜಿ ಸೇನೆಗೆ ಸರಕಾರ ಆದೇಶ ಹೊರಡಿಸಿದೆ ಎಂದು ವರದಿಯಾಗಿದೆ. ಕುರ್ದುಗಳ ನೇತೃತ್ವದ ಸಿರಿಯನ್ ಡೆಮಕ್ರಾಟಿಕ್ ಫೋರ್ಸ್ ನಿಯಂತ್ರಣದಲ್ಲಿರುವ ಪ್ರದೇಶ ಇದು. ಕಳೆದ ಒಂದು ವಾರದಿಂದ 200 ಟನ್ ಗೋಧಿ ಮತ್ತು ಬಾರ್ಲಿಯಂತಹ ಇತರ ವಸ್ತುಗಳ ಸಾಗಾಟವನ್ನು ತಡೆಯಲು ಸಿರಿಯ ಸರಕಾರ ಸೇನೆಗೆ ಆದೇಶ ನೀಡಿತ್ತು ಎಂದು ವರದಿಯಲ್ಲಿದೆ.

ಸಿರಿಯದಲ್ಲಿ ಬಶರುಲ್ ಅಸದ್ ಸರಕಾರದ ಸರಕು ಸಾಗಾಟ ದಿಗ್ಬಂಧನದಿಂದ ದೇಶದಲ್ಲಿ ಸರಕು, ಇಂಧನದಂತಹ ಅಗತ್ಯ ವಸ್ತುಗಳ ಅಭಾವ ತಲೆದೋರಿದೆ.