ಬಿಜೆಪಿಯ ತಾವರೆ ಚಿಹ್ನೆ ವಿರುದ್ಧ ಹೈಕೋರ್ಟಿನಲ್ಲಿ ಅರ್ಜಿ

0
682

ಸನ್ಮಾರ್ಗ ವಾರ್ತೆ

ಲಕ್ನೊ,ಡಿ.11: ಬಿಜೆಪಿಯ ಚುನಾವಣಾ ಚಿಹ್ನೆ ತಾವರೆಯನ್ನು ರದ್ದು ಪಡಿಸಬೇಕೆಂದು ಅಲಾಹಾಬಾದ್ ಹೈಕೋರ್ಟಿನಲ್ಲಿ ಗೊರಕ್‍ಪುರದ ಕಾಳಿಶಂಕರ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ತಾವರೆ ರಾಷ್ಟ್ರೀಯ ಹೂ. ಇದನ್ನು ರಾಜಕೀಯ ಪಾರ್ಟಿಗಳು ಉಪಯೋಗಿಸಲು ಬಿಡಬಾರದು ಎಂದು ಅವರು ವಾದಿಸಿದ್ದಾರೆ.

ಅರ್ಜಿಯಲ್ಲಿ ಹೈಕೋರ್ಟು ಭಾರತದ ಚುನಾವಣಾ ಆಯೋಗಕ್ಕೆ ನೋಟಿಸು ಕಳುಹಿಸಿದೆ. ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಚೀಫ್ ಜಸ್ಟಿಸ್ ಗೋವಿಂದ್ ಮತ್ತೂರ್, ಜಸ್ಟಿಸ್ ಪಿಯುಷ್ ಅಗರ್‍ವಾಳ್‍ರ ವಿಭಾಗೀಯ ಪೀಠ 2021 ಜನುವರಿ 12ಕ್ಕೆ ವಾದ ಆಲಿಸಲಿದೆ.

ನೋಂದಾಯಿತ ರಾಜಕೀಯ ಪಾರ್ಟಿಗಳ ಚಿಹ್ನೆಗಳನ್ನು ಚುನಾವಣೆಯ ವೇಳೆಗೆ ಮಾತ್ರ ಮಿತಿಗೊಳಿಸಬೇಕು. ಅದನ್ನು ದುರ್ಬಳಕೆ ಮಾಡುವ ಸಾಧ್ಯತೆ ಇದೆ ಎಂದು ಅರ್ಜಿದಾರರು ಹೇಳಿದ್ದಾರೆ. ಸರಕಾರಿ ವೆಬ್‍ಸೈಟ್ ಮತ್ತು ಇತರ ಕಡೆ ತಾವರೆಯಿರುವುದು ಕಂಡು ಬರುತ್ತಿದ್ದು ಇದು ಮತದಾರರ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ ಎಂದು ಅರ್ಜಿದಾರರು ತಿಳಿಸಿದ್ದಾರೆ.