ಅಸ್ಸಾಂ ಪೌರತ್ವ: ಜೈಲಿನಲ್ಲಿರುವ ವಿದೇಶಿ ನಿವಾಸಿಗಳ ಶರ್ತಬದ್ಧ ಬಿಡುಗಡೆಗೆ ಸುಪ್ರೀಂಕೋರ್ಟ್ ಹಸಿರು ನಿಶಾನೆ

0
470

ಹೊಸದಿಲ್ಲಿ,ಮೇ 10: ಅಸ್ಸಾಂನಲ್ಲಿ ಪೌರತ್ವ ಮಸೂದೆ ಜಾರಿಗೊಂಡು ಬಂಧನಕ್ಕೊಳಗಾದ ಅನಧಿಕೃತ ವಿದೇಶಿ ನಿವಾಸಿಗಳ ಬಿಡುಗಡೆಯ ವಿಷಯವನ್ನು ಪರಿಗಣಿಸಬೇಕೆಂದು ಸುಪ್ರೀಂಕೋರ್ಟು ಆದೇಶಿಸಿದೆ. ಅಗತ್ಯ ಸಂದರ್ಭಗಳಲ್ಲಿ ಹಾಜರಾಗಬೇಕೆಂಬ ಶರ್ತದೊಂದಿಗೆ ಇವರನ್ನು ಬಿಡುಗಡೆಗೊಳಿಸಬಹುದು ಎಂದು ಚೀಫ್ ಜಸ್ಟಿಸ್ ರಂಜನ್ ಗೊಗೊಯಿ, ಜಸ್ಟಿಸ್ ದೀಪಕ್ ಮಿಶ್ರ, ಜಸ್ಟಿಸ್ ಸಂಜೀವ್ ಖನ್ನಾರನ್ನೊಳಗೊಂಡ ಸುಪ್ರೀಂಕೋರ್ಟು ಪೀಠ ಅಸ್ಸಾಂ ಸರಕಾರಕ್ಕೆ ಸೂಚಿಸಿದೆ. ಕಾನೂನು ಜರಗಿಸಲು ಇವರನ್ನು ಹಾಜರಾಗಲು ಅಗತ್ಯವಾದ ಶರ್ತಗಳನ್ನು ಇರಿಸಬಹುದು. ಅನಧಿಕೃತವಾಗಿ ವಾಸಿಸುವವರ ವಿಚಾರದಲ್ಲಿ ತೀರ್ಪು ಕಲ್ಪಿಸಲು ಸಾವಿರ ಟ್ರಿಬ್ಯೂನಲ್‍ಗಳ ಸ್ಥಾಪನೆಗೆ ಅಸ್ಸಾಂ ಸರಕಾರಕ್ಕೆ ಸುಪ್ರೀಂಕೋರ್ಟು ಸೂಚಿಸಿತು. ಬಂಧನಕ್ಕೊಳಗಾದವರ ಬಿಡುಗಡೆಗೆ ಅಗತ್ಯ ಕ್ರಮದ ಕುರಿತು ವಿವರಣೆ ನೀಡುವಂತೆ ಪೌರತ್ವ ವಿಷಯದಲ್ಲಿ ಸುಪ್ರೀಂಕೋರ್ಟಿಗೆ ನೆರವಾಗುವ ಆಮಿಕಸ್ ಕ್ಯೂರಿ ಅಡ್ವೊಕೇಟ್, ಪ್ರಶಾಂತ್ ಭೂಷಣ್‍ಗೆ ಸುಪ್ರೀಂಕೋರ್ಟು ಸೂಚಿಸಿತು.