ಶಾರ್ಜ ಸರಕು ಹಡಗಿನಲ್ಲಿ ಬೆಂಕಿ: 13 ಭಾರತೀಯರ ರಕ್ಷಣೆ

0
635

ಶಾರ್ಜ,ಮೇ9: ಖಾಲಿದ್ ಬಂದರಿನಲ್ಲಿ ಲಂಗರು ಹಾಕಿದ ಸರಕು ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಭಾರೀ ನಾಶನಷ್ಟ ಸಂಭವಿಸಿದೆ ಎಂದು ವರದಿಯಾಗಿದೆ. ಹಡಗಿನಲ್ಲಿದ್ದ 13 ಭಾರತೀಯರನ್ನು ರಕ್ಷಿಸಲಾಗಿದೆ. ಬುಧವಾರ ಬೆಳಗ್ಗೆ 6:45ಕ್ಕೆ ಅಪಘಾತ ಸಂಬವಿಸಿತು. ಇರಾನ್ ಮತ್ತು ಆಫ್ರಿಕಾಗಳಿಗೆ ಇಂಧನ ಮತ್ತು ವಾಹನಗಳು, ಟಯರ್‌ಗಳನ್ನು ಸಾಗಿಸಲು ಸಜ್ಜಾಗಿ ನಿಂತ ಹಡಗು ಅಗ್ನಿಗಾಹುತಿಯಾಗಿದೆ. ಅಪಾಯ ಅರಿತ ಕೂಡಲೇ ಬಂದರಿನ ಅಗ್ನಿಶಾಮಕ ವಿಭಾಗ ಮತ್ತು ಇತರ ಪ್ರದೇಶಗಳ ಅಗ್ನಿಶಾಮಕ ದಳಗಳು ರಕ್ಷಣಾ ಕಾರ್ಯಕ್ಕೆ ಧಾವಿಸಿ ಬಂದವು. ಯುದ್ಧೋಪಾಧಿಯಲ್ಲಿ ರಕ್ಷಣಾ ಕಾರ್ಯ ನಡೆಸಿತು. ಹದಿಮೂರು ಮಂದಿಯ ಅಮೂಲ್ಯ ಪ್ರಾಣವನ್ನು ರಕ್ಷಿಸಲು ಸಾಧ್ಯವಾಯಿತು ಎಂದು ಸಿವಿಲ್ ಡಿಫೆನ್ಸ್ ನಿರ್ದೇಶಕ ಕರ್ನಲ್ ಸಾಮಿ ಅಲ್ ನಕ್ವಿ ಹೇಳಿದ್ದಾರೆ. ಅವಗಢದಲ್ಲಿ ಯಾರೂ ಗಾಯಗೊಂಡಿಲ್ಲ. ಹಡಗಿನಲ್ಲಿ 6000 ಗ್ಯಾಲನ್ ಡೀಸಲ್, ಕಾರು, ಲಾರಿ ಸಹಿತ 120 ವಾಹನಗಳಿದ್ದವು. 300 ಟಯರ್‍‌ಗಳು ಮತ್ತು ವಾಹನಗಳೆಲ್ಲವೂ ಸುಟ್ಟುಹೋಗಿವೆ.