ಸನ್ಮಾರ್ಗ ವಾರ್ತೆ
ಗುವಾಹಟಿ, ಎ. 28: ಕೊರೊನ ವಿರುದ್ಧ ಹೋರಾಟದಲ್ಲಿ ತೊಡಗಿಸಿಕೊಂಡ ಪತ್ರಕರ್ತರಿಗೆ ಅಸ್ಸಾಂ ಸರಕಾರ 50 ಲಕ್ಷ ರೂಪಾಯಿಯ ಇನ್ಶೂರೆನ್ಸ್ ನೀಡಲಿದೆ ಎಂದು ಮುಖ್ಯಮಂತ್ರಿ ಸರ್ಬಾಬನಂದ ಸೊನೊವಾಲ ಹೇಳಿದ್ದಾರೆ. ಪತ್ರಕರ್ತರನ್ನು ಬೆಂಬಲಿಸುವುದು ಸರಕಾರದ ಹೊಣೆಗಾರಿಕೆಯಾಗಿದೆ. ಹಲವು ಕಷ್ಟಗಳಿಂದ ಪತ್ರಕರ್ತರು ಕೊರೊನ ದುರಂತವನ್ನು ವರದಿ ಮಾಡುತ್ತಿದ್ದಾರೆ. ಜೀವ ಪಣವಾಗಿಟ್ಟು ಕಾರ್ಯಕ್ಷೇತ್ರದಲ್ಲಿ ತೊಡಗಿಸಿರುವ ಪತ್ರಕರ್ತರು ತಾರೆಯರು. ಸರಕಾರ ಇವರಿಗೆ 50 ಲಕ್ಷ ಇನ್ಶೂರೆನ್ಸ್ ಒದಗಿಸುತ್ತಲಿದೆ ಎಂದರು.
ಅಸ್ಸಾಮಿನಲ್ಲಿ ಈವರೆಗೆ ಆರೋಗ್ಯ ಸಚಿವಾಲಯದ ಲೆಕ್ಕದ ಪ್ರಕಾರ 36 ಮಂದಿಗೆ ಕೊರೊನ ಬಂದಿದೆ.
ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












