ಸನ್ಮಾರ್ಗ ವಾರ್ತೆ
ಒಡಿಸ್ಸಾ, ಎ. 28 ಒರಿಸ್ಸಾದ ಮೀನುಗಾರರು ಲಾಕ್ಡೌನ್ನಿಂದಾಗಿ ಚೆನ್ನೈಯಲ್ಲಿ ಸಿಕ್ಕಿಬಿದ್ದಿದ್ದರು. ಇವರು ಊರಿಗೆ ಬೋಟಿನಲ್ಲಿ ಹೊರಟು ಬಂದಿದ್ದಾರೆ. ಹೀಗೆ ಒರಿಸ್ಸಾ ಕರಾವಳಿ ತಲುಪಲು 1100 ಕಿಲೋಮೀಟರ್ ದೂರವನ್ನು ಕ್ರಮಿಸಿದರು. ಎಪ್ರಿಲ್ 24ರಂದು ಚೆನ್ನೈಯಿಂದ ಅವರು ಹೊರಟು ಆಂಧ್ರಪ್ರದೇಶದಲ್ಲಿ ಸಿಕ್ಕಿಬಿದ್ದಿದ್ದ 14 ಮಂದಿಯನ್ನು ಸೇರಿಸಿಕೊಂಡು ಒಟ್ಟು 39 ಮಂದಿ ಒಡಿಸ್ಸದ ದಾಂಕುರ್ ಎಂಬಲ್ಲಿ ಬೋಟನ್ನು ದಡಕ್ಕೆ ತಲುಪಿಸಿದ್ದಾರೆ. ಆದರೆ ಇವರನ್ನು ಬ್ಲಾಕ್ ತಹಸೀಲ್ದಾರ್ ಐಸೊಲೇಶನ್ಗೆ ಕಳುಹಿಸಿದರು.
ಚೆನ್ನೈಯಿಂದ ಎಪ್ರಿಲ್ 20ಕ್ಕೆ 27 ಮೀನುಗಾರರು ಪ್ರಯಾಣ ಶುರುಮಾಡಿದ್ದರು. ಕಳೆದ ದಿವಸ ಆಂಧ್ರ ಪ್ರದೇಶದ ಇಚ್ಛಪುರಮಕ್ಕೆ ತಲುಪಿದ್ದರು. ಇವರಲ್ಲದೆ 38 ಮಂದಿ ಪದಿ ಸೋನಾಪುರಕ್ಕೆ ಬಂದು ತಲುಪಿದ್ದರು. ಇವರನ್ನೂ ಕ್ವಾರಂಟೈನ್ ಮಾಡಲಾಗಿದೆ ಎಂದು ತಹಸೀಲ್ದಾರ್ ಹರಿಪ್ರಸಾದ್ ಬೋಯ್ ತಿಳಿಸಿದ್ದಾರೆ.
ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












