ಸನ್ಮಾರ್ಗ ವಾರ್ತೆ
ಗುವಾಹಟಿ, ಫೆ.12: ಕಳೆದ ವರ್ಷ ಆಗಸ್ಟ್ ನಲ್ಲಿ ಹೊರತಂದ ಎನ್‍ಆರ್ ಸಿ ವಿವರಗಳು ವೆಬ್‍ಸೈಟ್‍ನಿಂದ ಮಾಯವಾಗಿದೆ. ಎನ್‍ಆರ್ ಸಿಯ ವೆಬ್‍ಸೈಟ್ ”www.nrcassam.nic.in”…ನಿಂದ ವಿವರಗಳು ಕಾಣೆಯಾಗಿವೆ. ಆದರೆ ವಿವರಗಳು ಸುರಕ್ಷಿತ ಇವೆ.
ತಂತ್ರಜ್ಞಾನ ಸಮಸ್ಯೆ ಇದು ಎಂದು ಕೇಂದ್ರ ಗೃಹ ಸಚಿವಾಲಯ ವಿವರಣೆ ನೀಡಿದೆ. ಸಮಸ್ಯೆಯನ್ನು ಶೀಘ್ರ ಬಗೆಹರಿಸಲಾಗುವುದು ಎಂದು ಸಚಿವಾಲಯ ತಿಳಿಸಿತು. ಐಟಿ ಕಂಪೆನಿ ವಿಪ್ರೋದೊಂದಿಗಿನ ಒಪ್ಪಂದ ನವೀಕರಣದ ವೇಳೆ ವಿವರಗಳು ಕಾಣೆಯಾಗಿವೆ ಎಂದು ಎನ್‍ಆರ್ ಸಿ ಅಧಿಕಾರಿಗಳು ಹೇಳಿದ್ದಾರೆ. ವಿವರಗಳನ್ನು ಕಾದಿರಿಸಿದ ಕ್ಲೌಡ್ ಸರ್ವಿಸ್‍ನ ಸಮಯ 2019 ಅಕ್ಟೋಬರ್ 19 ವರೆಗೆ ಇತ್ತು. ಆದರೆ ಈ ಒಪ್ಪಂದ ನವೀಕರಣವಾಗಿರಲಿಲ್ಲ. ಆದ್ದರಿಂದ ಡಿಸೆಂಬರ್ ಹದಿನೈದಕ್ಕೆ ಸರ್ವಿಸ್ ವಿಪ್ರೊ ನಿಲ್ಲಿಸಿತು. ಎಂದು ಎನ್‍ಆರ್ ಸಿ ಸ್ಟೇಟ್ ಕೊ ಆರ್ಡಿನೇಟರ್ ಹಿತೇಶ್ ದೇವ್ ಶರ್ಮ ಮಾಧ್ಯಮಗಳಿಗೆ ತಿಳಿಸಿದರು.












