ಆಕ್ಸ್‌ಫರ್ಡ್ ವಿವಿ ಕೊರೋನ ವ್ಯಾಕ್ಸಿನ್‌ ಸ್ವೀಕರಿಸಿದ ಸ್ವಯಂ ಸೇವಕ ಮೃತ್ಯು; ಪರೀಕ್ಷೆ ಮುಂದುವರಿಸಲು ಅನುಮತಿ

0
479

ಸನ್ಮಾರ್ಗ ವಾರ್ತೆ

ಸಾವೊಪೊಲೊ,ಅ.22: ಆಕ್ಸ್‌ಫರ್ಡ್ ಯುನಿವರ್ಸಿಟಿಯ ಆಸ್ಟ್ರಾ ಸೆನಕ ಕೊರೋನ ವ್ಯಾಕ್ಸಿನ್ ಪರೀಕ್ಷೆಗೊಳಗಾದ ಸ್ವಯಂಸೇವಕ ಮೃತಪಟ್ಟಿದ್ದಾಗಿ ಬ್ರೆಝಿಲ್ ಹೆಲ್ತ್ ಅಥಾರಿಟಿ ಅನ್‍ವಿಸ್ ತಿಳಿಸಿದೆ. ವ್ಯಾಕ್ಸಿನ್ ಪರೀಕ್ಷೆಯ ಸುರಕ್ಷೆಯನ್ನು ಪರೀಕ್ಷಿಸುವ ಅಂತಾರಾಷ್ಟ್ರೀಯ ಸಮಿತಿ ಮುಂದೆ ಸೋಮವಾರ ಅನ್‍ವಿಸ್ ಈ ವಿಷಯವನ್ನು ಹೇಳಿತ್ತು. ಆದರೆ, ಕೊರೋನ ಪರೀಕ್ಷೆ ಮುಂದುವರಿಸಲು ಸಮಿತಿ ತಿಳಿಸಿದೆ ಎಂದು ಅನ್‍ವಿಸ್ ಹೇಳಿಕೆ ನೀಡಿದೆ.

ಮೃತ ಸ್ವಯಂಸೇವಕನಿಗೆ ಕಂಪೆನಿಯ ವ್ಯಾಕ್ಸಿನ್ ಡೋಸ್ ಕೊಟ್ಟಿಲ್ಲ ಎಂದು ಆಸ್ಟ್ರಾಸೆನಕ ತಿಳಿಸಿದೆ. ಕ್ಲಿನಿಕಲ್ ಟ್ರಯಲ್ ನಿಯಮ, ಪರೀಕ್ಷೆಯ ರಹಸ್ಯ ಸ್ವಭಾವವನ್ನು ಸಂರಕ್ಷಿಸಬೇಕಾದ್ದರಿಂದ ಮೃತಪಟ್ಟ ವ್ಯಕ್ತಿಯ ಹೆಸರನ್ನು ಬಹಿರಂಗಪಡಿಸಲಾಗಿಲ್ಲ. ಆದರೆ, ನಿಧನವಾದ ಘಟನೆಯಲ್ಲಿ ತನಿಖೆ ನಡೆಸಲಾಗುವುದು ಎಂದು ಆಸ್ಟ್ರಾಸೆನಕ ತಿಳಿಸಿದೆ.

ಬ್ರೆಝಿಲ್ ಆಸ್ಟ್ರಾಸೆನಕ ಮೂರನೇ ಹಂತದ ವ್ಯಾಕ್ಸಿನ್ ಪರೀಕ್ಷೆಯನ್ನು ಸಾವೊಪೊ ಫೆಡರಲ್ ಯುನಿವರ್ಸಿಟಿ ನಡೆಸಿಕೊಡುತ್ತಿದೆ. ಆಸ್ಟ್ರಾಸೆನಕ ವ್ಯಾಕ್ಸಿನ್ ಪರೀಕ್ಷೆ ಅಮೆರಿಕ ಮತ್ತು ಇಂಗ್ಲಂಡ್, ದಕ್ಷಿಣ ಆಫ್ರಿಕಾ, ಭಾರತ ಮುಂದಾದ ದೇಶಗಳಲ್ಲಿ ನಡೆಯುತ್ತಿದೆ. ಈ ಹಿಂದೆ ವ್ಯಾಕ್ಸಿನ್ ಪರೀಕ್ಷಿಸಿದ ವ್ಯಕ್ತಿಗೆ ಅಪೂರ್ವ ರೋಗ ಬಂದದ್ದರಿಂದ ಭಾರತ ಸಹಿತ ಪರೀಕ್ಷೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿತ್ತು.