ನಟಿ ಕಂಗನಾ, ಸಹೋದರಿ ವಿರುದ್ಧ ದೇಶದ್ರೋಹ ಪ್ರಕರಣ; ಮುಂಬೈ ಪೊಲೀಸರಿಂದ ಸಮನ್ಸ್

0
561

ಸನ್ಮಾರ್ಗ ವಾರ್ತೆ

ಮುಂಬೈ,ಅ.22: ಬಾಲಿವುಡ್ ನಟಿ ಕಂಗನಾ ರಾಣಾವತ್ ಮತ್ತು ಸಹೋದರಿ ರಂಗೋಲಿಯವರಿಗೆ ಮುಂಬೈ ಪೊಲೀಸರು ಸಮನ್ಸ್ ಕಳುಹಿಸಿದ್ದಾರೆ. ಈ ತಿಂಗಳು 26, 27ಕ್ಕೆ ವಿಚಾರಣೆಗೆ ಹಾಜರಾಗಬೇಕೆಂದು ತಿಳಿಸಲಾಗಿದೆ. ಮುಂಬೈ ಮ್ಯಾಜಿಸ್ಟ್ರೇಟ್ ಕೋರ್ಟಿನ ಆದೇಶ ಪ್ರಕಾರ ಇಬ್ಬರ ಮೇಲೆ ಬಾಂದ್ರಾ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ. ಧರ್ಮ, ವಂಶ, ಭಾಷೆಯ, ಹುಟ್ಟೂರಿನ ಹೆಸರಿನಲ್ಲಿ ಕೋಮು ಸ್ಪರ್ಧೆಯುಂಟುಮಾಡಿದ್ದು, ಧಾರ್ಮಿಕ ಭಾವನೆಗೆ ಹಾನಿ ಮಾಡಲು ಪ್ರಜ್ಞಾಪೂರ್ವ ಯತ್ನಿಸಿದ ಪ್ರಕರಣಗಳು ಇಬ್ಬರ ವಿರುದ್ಧ ದಾಖಲಿಸಿಕೊಳ್ಳಲಾಗಿದೆ.

ಕಂಗನಾ ಬಾಲಿವುಡ್ ಅನ್ನು ಅಪಮಾನಿಸುವ ಟ್ವೀಟ್‍ಗಳ ಮೂಲಕ ಕೋಮು ಸ್ಪರ್ಧೆಯುಂಟು ಮಾಡುತ್ತಿದ್ದಾರೆ ಎಂಬ ದೂರಿನಲ್ಲಿ ಕೋರ್ಟು ಎಫ್‍ಐಆರ್ ದಾಖಲಿಸಲು ಸೂಚಿಸಿತ್ತು. ಸಹೋದರಿ ರಂಗೋಲಿಯ ಟ್ವೀಟ್‍ಗಳು ಧರ್ಮ ಸ್ಪರ್ಧೆಗೆ ಪ್ರಚೋದನೆ ನೀಡುತ್ತದೆ ಎಂದು ದೂರಿನಲ್ಲಿ ಹೇಳಲಾಗಿತ್ತು.

ಸುಶಾಂತ್‍ರ ಸಾವಿನ ನಂತರ ಕಂಗನಾರ ಟ್ವೀಟ್‍ಗಳು ದೂರಿಗೆ ಆಧಾರವಾಗಿದೆ. ಮುಂಬೈಯಲ್ಲಿ ಕಾನೂನು ವ್ಯವಸ್ಥೆ ಕೆಟ್ಟಿದೆ ಅಲ್ಲಿ ಬದುಕಲು ಹೆದರಿಕೆಯಾಗುತ್ತಿದೆ ಎಂದು ಕಂಗನಾ ಹೇಳಿದ್ದಾರೆ. ಕಂಗನಾರ ಹಿಂದೆ ಬಿಜೆಪಿ ಇದೆ ಎಂದು ಶಿವಸೇನೆ ಆರೋಪಿಸುತ್ತಿದೆ. ಕಂಗನಾರ ಮುಂಬೈ ಕಟ್ಟಡ ಕಾನೂನು ಬಾಹಿರವಾಗಿದೆ ಎಂದು ಮುಂಬೈ ಕಾರ್ಪೊರೇಷನ್ ಕೆಡವಲು ಮುಂದಾದುರೊಂದಿಗೆ ಕಾನೂನು ಯುದ್ಧ ಆರಂಭವಾಗಿದೆ.