ರೈಲಿನಲ್ಲಿ ಮುಸ್ಲಿಂ ವೃದ್ಧರ ಮೇಲಿನ ಹಲ್ಲೆ ಪ್ರಕರಣ: ಆರೋಪಿಗಳ ಜಾಮೀನು ರದ್ದುಗೊಳಿಸಿದ ನ್ಯಾಯಾಲಯ

0
302

ಸನ್ಮಾರ್ಗ ವಾರ್ತೆ

ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಹಾಜಿ ಅಶ್ರಫ್ ಮುನಿಯಾರ್ ಎಂಬ ವೃದ್ಧನ ಮೇಲೆ ಹಲ್ಲೆ ನಡೆಸಿದ ಯುವಕರನ್ನು ಬಂದಿಸಲು ಪೊಲೀಸರು ಬಲೆ ಬೀಸಿದ್ದಾರೆ.

ಈ ಮೊದಲು ಪೊಲೀಸರು ಅವರನ್ನು ಬಂಧಿಸಿದ್ದರು ಮತ್ತು ನ್ಯಾಯಾಲಯ ಅವರಿಗೆ ತಕ್ಷಣ ಜಾಮೀನು ನೀಡಿತ್ತು. ಆದರೆ ಆ ಬಳಿಕ ಇವರ ವಿರುದ್ಧ ಜಾಮೀನು ರಹಿತ ಪ್ರಕರಣವನ್ನು ದಾಖಲಿಸಲಾಯಿತು. ಇದೀಗ ಅವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ನ್ಯಾಯಾಲಯ ಇವರ ಜಾಮೀನನ್ನು ಸೆಪ್ಟೆಂಬರ್ 2 ಸೋಮವಾರದಂದು ರದ್ದುಗೊಳಿಸಿತು.

72 ವರ್ಷದ ಹಾಜಿ ಅಶ್ರಫ್ ಅವರನ್ನು ಈ ಯುವಕರು ಕ್ರೂರವಾಗಿ ಥಳಿಸುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲಾಗಿತ್ತು.

ಗೋಮಾಂಸ ಸಾಗಿಸುತ್ತಿದ್ದಾರೆ ಎಂದು ಆರೋಪಿಸಿ ಯುವಕರು ಈ ವೃದ್ಧರ ಮೇಲೆ ಹಲ್ಲೆ ನಡೆಸಿದ್ದರು. ಈ ಯುವಕರು ಪೋಲಿಸ್ ನೇಮಕಾತಿ ಪರೀಕ್ಷೆಗೆ ಹಾಜರಾಗಲು ರೈಲಿನಲ್ಲಿ ತೆರಳುತ್ತಿದ್ದರು.