ಸಿಂಗಾಪುರಕ್ಕೆ ಭೇಟಿ ಕೊಡುವ ಪ್ರಧಾನಿಯವರೇ, ಮಣಿಪುರಕ್ಕೆ ಯಾವಾಗ ಭೇಟಿ ನೀಡುತ್ತೀರಿ: ಮೋದಿಯನ್ನು ಕುಟುಕಿದ ಕಾಂಗ್ರೆಸ್

0
162

ಸನ್ಮಾರ್ಗ ವಾರ್ತೆ

ಸಿಂಗಾಪುರ ಮತ್ತು ಬ್ರುನೆ ದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ತೆರಳಿರುವಂತೆಯೇ ಕಾಂಗ್ರೆಸ್ ಅವರನ್ನು ಕುಟುಕಿದೆ. ಸದಾ ಪ್ರಯಾಣದಲ್ಲಿರುವ ಪ್ರಧಾನಿಯವರು ಯಾವಾಗ ಮಣಿಪುರಕ್ಕೆ ಮಾನವೀಯ ಭೇಟಿ ನೀಡುತ್ತಾರೆ ಎಂದು ಪ್ರಶ್ನಿಸಿದೆ.

ಬ್ರೂನೈ ಸುಲ್ತಾನರ ಕೋರಿಕೆಯಂತೆ ಪ್ರಧಾನಿ ನರೇಂದ್ರ ಮೋದಿಯವರು ಭೇಟಿ ನೀಡಿದ್ದಾರೆ. ಹಾಗೆಯೇ ಅವರು ಸಿಂಗಾಪುರಕ್ಕೆ ಭೇಟಿ ನೀಡಲಿದ್ದಾರೆ.

ಮಣಿಪುರದ ಪರಿಸ್ಥಿತಿ ದಿನೇ ದಿನೇ ಹದಗೆಡುತ್ತಿದೆ. ಪರಿಸ್ಥಿತಿ ಹದಗೆಟ್ಟು ಇವತ್ತಿಗೆ 16 ತಿಂಗಳುಗಳಾದವು. ನೂರಾರು ಮಂದಿ ಸಾವಿಗೀಡಾಗಿದ್ದಾರೆ. ಸಾವಿರಾರು ಮಂದಿ ಮನೆ ಮಠವನ್ನ ಕಳಕೊಂಡಿದ್ದಾರೆ. ಮಾತ್ರ ಅಲ್ಲ ನಿರಾಶ್ರಿತ ಶಿಬಿರದಲ್ಲಿ ವಾಸಿಸುತ್ತಿದ್ದಾರೆ. ಈ ರಾಜ್ಯಕ್ಕೆ ಪ್ರಧಾನಿ ಮೋದಿ ಭೇಟಿ ನೀಡುವುದು ಯಾವಾಗ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಖಾರವಾಗಿ ಪ್ರಶ್ನಿಸಿದ್ದಾರೆ.