ಇಸ್ಲಾಮೊಫೋಬಿಯಾ: ಗರ್ಭಿಣಿಯ ಮೇಲೆ ಹಲ್ಲೆಯೆಸಗಿದ ದುಷ್ಕರ್ಮಿಗೆ ಜೈಲು ಶಿಕ್ಷೆ

0
892

ಸನ್ಮಾರ್ಗ ವಾರ್ತೆ

ಸಿಡ್ನಿ,ಅ.6: ಗರ್ಭಿಣಿ ಮುಸ್ಲಿಮ್ ಮಹಿಳೆಯನ್ನು ಒದ್ದು ಕೆಳಗೆ ಬೀಳಿಸಿದ ವ್ಯಕ್ತಿಗೆ ಆಸ್ಟ್ರೇಲಿಯಾದ ನ್ಯಾಯಾಲಯವು ಸ್ಟೆಪ್ ಲೊಸಿನ(43) ಎಂಬಾತನಿಗೆ 3 ವರ್ಷ ಜೈಲು ಶಿಕ್ಷೆಯನ್ನು ವಿಧಿಸಿದೆ. ಆತ ಮಹಿಳೆಗೆ ಹಲ್ಲೆಯನ್ನೂ ನಡೆಸಿದ್ದ. ನಾಲ್ಕು ಮಕ್ಕಳ ತಾಯಿ ರಿನಾ ಎಲಾಸ್ಮರ್ ಎಂಬ 38 ವರ್ಷದ ಮುಸ್ಲಿಮ್ ಮಹಿಳೆಗೆ ದ್ವೇಷದಿಂದ ಆತ ಹಲ್ಲೆಯೆಸಗಿದ್ದ.

ಕಳೆದ ವರ್ಷ ನವೆಂಬರಿನಲ್ಲಿ ಸಿಡ್ನಿಯ ಕಫೊದಲ್ಲಿ ಶಿರವಸ್ತ್ರ ಧರಿಸಿದ್ದ ರಿನಾರ ಮೇಲೆ ಸ್ಟೆಪ್‍ ಲೊಸಿನ ಹತ್ತಿರಕ್ಕೆ ಬಂದು ಜನಾಂಗೀಯ ದ್ವೇಷ ಕಾರಿದ್ದಾನೆ. ನಂತರ ಹಲವು ಬಾರಿ ಹೊಡೆದು, ನಂತರ ಒದ್ದು ಕೆಡವಿ ಹಾಕಿದ್ದ. ನೆಲಕ್ಕೆ ಬಿದ್ದ ಮೇಲೆಯೂ ಆಕೆಯನ್ನು ಆತ ತುಳಿದಿದ್ದಾನೆ. ರಿನಾರ ಗೆಳೆಯರು ದುಷ್ಕರ್ಮಿಯನ್ನು ತಡೆದಿದ್ದರು. ಕೆಳಗೆ ಬಿದ್ದರೂ ಸಣ್ಣಮಟ್ಟದ ಗಾಯಗಳು ಮಾತ್ರ ರಿನಾರಿಗೆ ಆಗಿತ್ತು. ಗರ್ಭದಲ್ಲಿದ್ದ ಮಗು ಕೂಡ ಸುರಕ್ಷಿತವಾಗಿತ್ತು.

ನಿಮಗಿಂತ ಭಿನ್ನರಾದ ವ್ಯಕ್ತಿಗಳ ಮೇಲೆ ವಾಕ್ ಮತ್ತು ದೈಹಿಕವಾಗಿ ಹಲ್ಲೆಯೆಸಗಲು ಆಸ್ಟ್ರೇಲಿಯಾ ಸೂಕ್ತ ಸ್ಥಳ ಅಲ್ಲ ಎಂಬುದನ್ನು ಮನಗಾಣಬೇಕೆಂದು ಕೋರ್ಟಿನ ಪರಿಸರದಲ್ಲಿದ್ದ ರಿನಾ ಎಲಾಸ್ಮರ ಹೇಳಿದರು.

ಆ ಘಟನೆ ನಡೆದು ತಿಂಗಳು ಕಾಲ ರಿನಾ ಆಘಾತದಿಂದ ಚೇತರಿಸಿಕೊಂಡಿರಲಿಲ್ಲ ಎಂದು ಸಹೋದರಿ ಹೇಳಿದ್ದಾರೆ. ತಾನು ಮುಸ್ಲಿಮರನ್ನು ದ್ವೇಷಿಸುವುದಿಲ್ಲ. ಹೊಂದಿಕೊಂಡು ಹೋಗುವವ. ಇಸ್ಲಾಮೋಫೊಬಿಯಾದಿಂದ ಎಲಾಸ್ಮರ್‌ರ ಮೇಲೆ ಹಲ್ಲೆ ಎಸಗಿಲ್ಲ ಎಂದು ಸ್ಟೆಪ್‌ ಲೊಸಿನ ಕೋರ್ಟಿನಲ್ಲಿ ಹೇಳಿದ್ದಾನೆ. ಮೂರು ವರ್ಷ ಶಿಕ್ಷೆಯಲ್ಲಿ ಎರಡು ವರ್ಷ ಪರೋಲ್ ಕೂಡ ಸಿಗದೆ ಆತ ಶಿಕ್ಷೆ ಅನುಭವಿಸಬೇಕಾಗಿದೆ.