ಸನ್ಮಾರ್ಗ ವಾರ್ತೆ
ಕ್ಯಾನ್‌ಬೆರ್ರಾ: ಇಸ್ಲಾಮೋಫೋಬಿಯಾ ವಿರುದ್ಧ ಹೋರಾಡಲು ವಿಶೇಷ ರಾಯಭಾರಿಯನ್ನು ಆಸ್ಟ್ರೇಲಿಯಾದ ಪ್ರಧಾನಮಂತ್ರಿ ಆಂಟೋನಿ ಅಲ್ಬನೀಸ್ ನೇಮಿಸಿದ್ದಾರೆ.
ಸೋಮವಾರ ರಾತ್ರಿ ಅಲ್ಬನೀಸ್ ಈ ಘೋಷಣೆ ಮಾಡಿದ್ದು, ಮುಸ್ಲಿಂ ವ್ಯವಹಾರಗಳ ಕುರಿತಾಗಿ ವಿಶ್ವದ ಪರಿಣಿತರಾಗಿ ಗುರುತಿಸಲ್ಪಟ್ಟಿರುವ ಬ್ರಿಟಿಷ್ ಆಸ್ಟ್ರೇಲಿಯನ್ ಆಗಿರುವ ಆಫ್ತಾಬ್ ಮಲಿಕ್ ಅವರನ್ನು ಸರ್ಕಾರದ ಮೊದಲ ಇಸ್ಲಾಮೋಫೋಬಿಯಾ ರಾಯಭಾರಿಯಾಗಿ ನೇಮಕ ಮಾಡಲಾಗಿದೆ ಎಂದು ಯುಎನ್ ಅಲಯನ್ಸ್ ಆಫ್ ಸಿವಿಲೈಸೇಷನ್ ಒಕ್ಕೂಟವು ತಿಳಿಸಿದೆ.
ಜಿಲ್ಲಿಯನ್ ಸೆಗಲ್ ಅವರನ್ನು ಜುಲೈನಲ್ಲಿಯೇ ಯಹೂದ್ಯ ವಿರೋಧಿ (antisemitism) ರಾಯಭಾರಿಯಾಗಿ ನೇಮಕ ಮಾಡಲಾಗಿದ್ದ ಸುಮಾರು ಮೂರು ತಿಂಗಳ ನಂತರ ಮಲಿಕ್ ಅವರ ನೇಮಕವಾಗಿದೆ ಎಂದು ಶಿನ್‌ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಮಸ್ಲಿಂ ಸಮುದಾಯದ ಸದಸ್ಯರು, ಧಾರ್ಮಿಕ ತಜ್ಞರು ಮತ್ತು ಸರ್ಕಾರ ಇಸ್ಲಾಮೋಫೋಬಿಯಾ ವಿರುದ್ಧ ಹೋರಾಡಲು ಉತ್ತಮ ಮಾರ್ಗಗಳ ಬಗ್ಗೆ ವಿಶೇಷ ರಾಯಭಾರಿ ಚರ್ಚೆ ನಡೆಸಲಿದ್ದಾರೆ ಎಂದು ಸರಕಾರಿ ಸಂಯುಕ್ತ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮಲಿಕ್ ಅವರನ್ನು ಅಕ್ಟೋಬರ್ 14 ರಿಂದ ಮೂರು ವರ್ಷಗಳ ಅವಧಿಗೆ ನೇಮಕ ಮಾಡಲಾಗಿದೆ ಮತ್ತು ಅವರು ನೇರವಾಗಿ ಅಲ್ಬನೀಸ್ ಹಾಗೂ ಬರ್ಕ್ ಅವರಿಗೆ ವರದಿ ಮಾಡಲಿದ್ದಾರೆ.
ಮಲಿಕ್ ಅವರು ಪಾಕಿಸ್ತಾನಿ ಮೂಲದವರು ಮತ್ತು ಬ್ರಿಟನ್‌ನಲ್ಲಿ ಜನಿಸಿದರು. ಅವರು 2012 ರಲ್ಲಿ ಆಸ್ಟ್ರೇಲಿಯಾಗೆ ವಲಸೆ ಬಂದಿದ್ದು, ನ್ಯೂ ಸೌತ್ ವೇಲ್ಸ್ ರಾಜ್ಯ ಸರ್ಕಾರದಲ್ಲಿ ಸೌಹಾರ್ದತೆಗೆ ಉತ್ತೇಜನ ನೀಡುವ ಮತ್ತು ದ್ವೇಷ ಹಾಗೂ ಅತಿರೇಕವನ್ನು ತಡೆಗಟ್ಟುವ ಕೆಲಸವನ್ನು ಮಾಡಿದ್ದಾರೆ.
ಐಎಎನ್‌ಎಸ್