‘ಮೋದಿ ಅವರ ಜನಪ್ರಿಯತೆ ಕುಸಿದಿದೆ. ಕೇಂದ್ರ ಸರಕಾರದ ಅಸ್ತಿತ್ವವು ವಿಧಾನಸಭಾ ಚುನಾವಣೆಗಳ ಫಲಿತಾಂಶವನ್ನು ಅವಲಂಬಿಸಿದೆ’: ಪ್ರಶಾಂತ್ ಕಿಶೋರ್

0
207

ಸನ್ಮಾರ್ಗ ವಾರ್ತೆ

ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರಕಾರದ ಜನಪ್ರೀತಿ ತೀವ್ರವಾಗಿ ಕುಸಿದಿದೆ. ಈ ಸರ್ಕಾರ ಐದು ವರ್ಷ ಬಾಳಿಕೆ ಬರುತ್ತೋ ಇಲ್ಲವೋ ಎಂಬುದು ಮುಂದಿನ ವಿಧಾನಸಭಾ ಚುನಾವಣೆಗಳ ಫಲಿತಾಂಶವನ್ನು ಅವಲಂಬಿಸಿದೆ ಎಂದು ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಹೇಳಿದ್ದಾರೆ.

ಶೀಘ್ರ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಗೆದ್ದರೆ ಮಾತ್ರ ಎನ್‌ಡಿಎ ಅಧಿಕಾರದಲ್ಲಿ ಮುಂದುವರೆಯಲಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಮುಂದೆ 9 ರಾಜ್ಯಗಳ ವಿಧಾನಸಭೆಗೆ ಚುನಾವಣೆ ನಡೆಯಲಿದೆ, ಮೋದಿ ಸರಕಾರದ ಅಸ್ತಿತ್ವವು ಈ ಚುನಾವಣಾ ಫಲಿತಾಂಶವನ್ನು ಅವಲಂಬಿಸಿದೆ.

ಜಮ್ಮು-ಕಾಶ್ಮೀರ ದೆಹಲಿ ಹರಿಯಾಣ ಮಹಾರಾಷ್ಟ್ರ ಜಾರ್ಖಂಡ್ ಬಿಹಾರ ಮುಂತಾದ ರಾಜ್ಯಗಳಲ್ಲಿ ಚುನಾವಣೆ ನಡೆಯಲಿದೆ. ಇದರ ಫಲಿತಾಂಶ ಬಿಜೆಪಿಗೆ ವಿರುದ್ಧವಾದರೆ ಸರ್ಕಾರದ ಅಸ್ತಿತ್ವಕ್ಕೆ ಭಂಗ ಬರಲಿದೆ ಎಂದು ಹೇಳಿರುವ ಅವರು ಬಿಹಾರದಲ್ಲಿ ಮರಳಿ ಅಧಿಕಾರ ಗಳಿಸಲು ಸಾಧ್ಯವಿಲ್ಲ ಎಂದು ಬಿಜೆಪಿ ಕಾರ್ಯಕರ್ತರೇ ಹೇಳುತ್ತಿದ್ದಾರೆ ಎಂದು ಹೇಳಿದ್ದಾರೆ.