ಮುಳುಗಡೆ ಹಾಗೂ ವಿಪತ್ತುಗಳನ್ನು ತಡೆಗಟ್ಟಲು ಗೃಹ ಸಚಿವಾಲಯದಿಂದ ಜಾಗೃತಿ ಅಭಿಯಾನ

0
63

ಸನ್ಮಾರ್ಗ ವಾರ್ತೆ

ರಾಸ್ ಅಲ್-ಖೈಮಾ: ಮನರಂಜನೆಗಾಗಿ ಬೀಚ್‌ಗಳು ಮತ್ತು ಈಜುಕೊಳಗಳಿಗೆ ಬರುವವರು ಮಕ್ಕಳ ಬಗ್ಗೆ ದುಪ್ಪಟ್ಟು ಜಾಗರೂಕರಾಗಿರಬೇಕು.

ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಮಯ ಕಳೆಯುವಾಗ ಮಕ್ಕಳ ಬಗ್ಗೆ ನಿಗಾ ವಹಿಸದಿರುವುದು ಅಪಘಾತ ಮತ್ತು ದುರಂತಗಳಿಗೆ ಕಾರಣವಾಗಬಹುದು ಎಂದು ಇರಾಕ್ ಪೊಲೀಸ್ ಮಾಧ್ಯಮ ಮತ್ತು ಸಾರ್ವಜನಿಕ ಸಂಪರ್ಕ ವಿಭಾಗದ ನಿರ್ದೇಶಕ ಕರ್ನಲ್ ಹಮದ್ ಅಬ್ದುಲ್ಲಾ ಅಲ್-ಅವಾದ್ ಹೇಳಿದ್ದಾರೆ.

ರಾಸ್ ಅಲ್ ಖೈಮಾದಲ್ಲಿ ಮುಳುಗಡೆ ಸೇರಿದಂತೆ ಅನಾಹುತಗಳನ್ನು ತಪ್ಪಿಸಲು ವಿಶೇಷ ಬೇಸಿಗೆ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಮಕ್ಕಳ ಮೇಲ್ನೋಟವನ್ನು ಬಿಗಿಗೊಳಿಸಿರಿ. ಈಜು ಅಭ್ಯಾಸ ಮಾಡಿಸಿರಿ. ಲೈಫ್ ಜಾಕೆಟ್ ಇತ್ಯಾದಿ ರಕ್ಷಣಾ ಉಪಕರಣಗಳನ್ನು ಕಡ್ಡಾಯವಾಗಿ ಬಳಿಸಿರಿ. ಸೂಚಿಸಿದ ಸ್ಥಳಗಳನ್ನು ಮಾತ್ರ ಈಜಲು ಬಳಸಿರಿ., ಈಜು ಕೊಳ ಬೀಚ್‍ಗಳಲ್ಲಿ ಇರುವ ಸುರಕ್ಷಾ ಸೂಚಕಗಳನ್ನು ಕಡೆಗಣಿಸಬೇಡಿರಿ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ. ತುರ್ತು ಪರಿಸ್ಥಿತಿಯಲ್ಲಿ ಸಾರ್ವಜನಿಕರಿಗೆ 999 ನಂಬರಿಗೆ ಕರೆ ಮಾಡಿ ಸಹಾಯ ಕೇಳಬಹುದು ಎಂದು ಸಈದ್ ಅಲ್ ಮುಸಾಫರಿ ಹೇಳಿದರು.