ಸ್ಕೂಲ್ ಟಾಪರ್ ಗಳಿಗೆ ಶೇಖ್ ಮುಹಮ್ಮದ್‍ರ ಸರ್ಪೈಸ್

0
210

ಸನ್ಮಾರ್ಗ ವಾರ್ತೆ

ದುಬೈ: ಅನಿರೀಕ್ಷಿತವಾಗಿ ಒಂದು ಉಡುಗೊರೆ ಅದು ಕೂಡ ಪ್ರತಿಯೊಬ್ಬ ಬಯಸುವ ಒಬ್ಬ ವ್ಯಕ್ತಿಯಿಂದ ಇದಕ್ಕಿಂತ ಸಂತೋಷ ಯುಎಇ ಸರಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಸಿಗಲು ಸಾಧ್ಯವಿಲ್ಲ.

ಈ ವರ್ಷ ಶಾಲೆಯಲ್ಲಿ ಟಾಪರ್‍ ಗಳಾದ ಎಂಟು ವಿದ್ಯಾರ್ಥಿಗಳಿಗೆ ಯುಎಇಯ ಉಪಾಧ್ಯಕ್ಷ , ಪ್ರಧಾನಿ ದುಬಯಿಯ ಆಡಳಿತಾಧಿಕಾರಿ ಶೇಖ್ ಮುಹಮ್ಮದ್ ಬಿನ್ ರಾಶಿದ್ ಅಲ್ ಮಕ್ತೂಂ ಅವರಿಗೆ ಅನಿರೀಕ್ಷಿತವಾದ ಉಡುಗರೆ ದೊರಕಿದೆ.

ಶೇಖ್ ಮುಹಮ್ಮದ್‍ರ ಸಹಿ ಇರುವ ಅಭಿನಂದನಾ ಸರ್ಟಿಫಿಕೆಟ್ ನಗದು ಬಹುಮಾನದ ಜೊತೆಗೆ ಹೃದಯಸ್ಪರ್ಶಿಯಾದ ಒಂದು ಬರಹ ಕೂಡ ಇದೆ.

ಒಂದು ವಾರದ ಹಿಂದೆ ದುಬೈ ಮೀಡಿಯ ಕಚೇರಿಯಿಂದ ಕರೆ ಮಾಡಿ ರಾಜಕೀಯವಾದ ಒಂದು ಉಡುಗೊರೆ ಕಳುಹಿಸಲಾಗುತ್ತದೆ ವಿದ್ಯಾರ್ಥಿಗಳಿಗೆ ತಿಳಿಸಲಾಗಿತ್ತು. ಇಷ್ಟು ಬೆಲೆ ಬಾಳುವ ಉಡುಗೊರೆಯಾಗಿದೆಯೆಂದು ಒಮ್ಮೆಯೂ ನಾವು ನಿರೀಕ್ಷಿಸಿರಲಿಲ್ಲ ಎಂದು ವಿದ್ಯಾರ್ಥಿಗಳು ಹೇಳಿದರು.

ಮರಿಯಂ ಉಬೈದ್ ರಾಶಿದ್ ಹಮದ್ ಅಲಿ ಅಸ್ಸಾಬಿ, ಅಬ್ದುಲ್ಲ ಮುಹಮ್ಮದ್ ಮಖಿಮರ್ ಆರಿಫ್ ಮಖಿಮರ್, ಆಲಿಯ ಹಸನ್ ದರ್‍ವಿಶ್, ವಾಲಿದ್ ಖಾಲಿದ್ ಅಲ್‍ಸಾದಿ, ವಾರ್ದ್ ಉಮರ್ ಮಹ್ಮೂದ್, ಮಾಯಿದ್ ರಾಶಿದ್ ಖಲೀಫ ಉಬೈದ್ ಅಲ್ ಮೌದಿ, ನದಾ ಸುಲೈಮಾನ್ ಮುಹಮ್ಮದ್ ಅಹ್ಮದ್ ಅಲ್‍ಮಸ್ಮಿ, ಆಲಿಸಿಯ ಹಂದಾನ್ ರಾಶಿದ್ ಅಬ್ದುಲ್ಲ ಅಲ್‍ಶಂಸಿ ದುಬೈ ಆಡಳಿತಗಾರನಿಂದ ಉಡುಗೊರೆ ಸಿಕ್ಕಿದ ವಿದ್ಯಾರ್ಥಿಗಳು ಆಗಿದ್ದಾರೆ.

ನಿಮ್ಮ ಸಾಮರ್ಥ್ಯವನ್ನು ಅಭಿನಂದಿಸುತ್ತೇನೆ. ಈ ಸಾಧನೆಗೆ ಸಂತೋಷಕ್ಕೆ ಕಾರಣರಾದ ನಿಮಗೆ , ನಿಮ್ಮ ಕುಟುಂಬಕ್ಕೆ ಮಾತ್ರವಲ್ಲ ನಿಮಗೆ ಪದವಿ ಕೊಟ್ಟ ದೇಶವನ್ನು ಅಭಿನಂದಿಸುತ್ತೇನೆ. ನಿಮ್ಮ ಸಾಧನೆ ದೇಶದ ಬೆಳವಣಿಗೆ ಸಮೃದ್ಧಿ ಪ್ರಕ್ರಿಯೆಗೆ ಒಂದು ಹೊಸ ಲೋಕ ಕೂಡ ಸೇರುತ್ತದೆ ಎಂದು ಶೇಕ್ ಮುಹಮ್ಮದ್ ಬರೆದಿದ್ದಾರೆ. ಉಡುಗೊರೆ ಸಿಕ್ಕ ಹಣದಲ್ಲಿ ಕಾರು ಖರೀದಿಸುವುದು ಮುಂದಿನ ಕಲಿಕೆಗೆ ಉಪಯೋಗಿಸಲು ವಿದ್ಯಾರ್ಥಿಗಳು ಬಯಸಿದ್ದಾರೆ ಎಂದು ವರದಿಯಾಗಿದೆ.