ಅಯೋಧ್ಯೆ: ಒಂದೇ ನಿಮಿಷದಲ್ಲಿ ವಿಚಾರಣೆ ಮುಗಿಸಿದ ರಂಜನ್ ಗೊಗೋಯಿ

0
1220

ನ್ಯಾಯಾಂಗ ಪ್ರಕ್ರಿಯೆ ಮುಗಿಯುವ ಮೊದಲು ಅಯೋಧ್ಯೆಗೆ ಸಂಬಂಧಿಸಿ ಸುಗ್ರೀವಾಜ್ಞೆ ಇಲ್ಲ ಎಂದು ಪ್ರಧಾನಿ ಮೋದಿಯವರು ANI ಗೆ ನೀಡಿದ ಸಂದರ್ಶನದಲ್ಲಿ ಹೇಳಿದ ದಿನಗಳ ನಂತರ ಸುಪ್ರೀಂ ಕೋರ್ಟಿನಲ್ಲಿ ಅಯೋಧ್ಯೆ ವಿಚಾರಣೆಗೆ ಬಂದಿದ್ದು, ಅಯೋಧ್ಯೆಯ ಭೂಮಿಯನ್ನು ಹಂಚಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಮೇಲ್ಮನವಿ ಅರ್ಜಿಗಳ ವಿಚಾರಣೆಯನ್ನು ಹೊಸ ನ್ಯಾಯಪೀಠಕ್ಕೆ ವರ್ಗಾಯಿಸುವುದಾಗಿ ಹೇಳಿದೆ.

ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ಅವರು ಮೇಲ್ಮನವಿ ಅರ್ಜಿಗಳ ವಿಚಾರಣೆ ಕೈಗೆತ್ತಿಕೊಂಡರು ಮತ್ತು ಒಂದೇ ನಿಮಿಷದಲ್ಲಿ ವಿಚಾರಣೆಯನ್ನು ಮುಗಿಸಿ ಅಚ್ಚರಿ ಮೂಡಿಸಿದರು. ಜನವರಿ ಹತ್ತರಂದು ಮುಂದಿನ ವಿಚಾರಣೆ ನಡೆಸಲಾಗುವುದು ಎಂದು ನ್ಯಾಯಪೀಠ ತಿಳಿಸಿದೆ.

ಅಯೋಧ್ಯಾ ವಿವಾದವನ್ನು ಪಾರ್ಲಿಮೆಂಟ್ ಚುನಾವಣೆಯ ಮೊದಲು ಇತ್ಯರ್ಥ ಮಾಡಬೇಕೆಂದು ಬಿಜೆಪಿ ಸಹಿತ ಸಂಘಪರಿವಾರ ಒತ್ತಾಯಿಸುತ್ತಿರುವ ಸಮಯದಲ್ಲೇ ಈ ಬೆಳವಣಿಗೆ ನಡೆದಿರುವುದು ಗಮನಾರ್ಹ.