ನ್ಯಾಯ ವಿಳಂಬವಾದರೆ ಪ್ರಜಾಪ್ರಭುತ್ವಕ್ಕೆ ಅರ್ಥವಿಲ್ಲ- ಯೋಗಿ ಆದಿತ್ಯನಾಥ

0
178

ಸನ್ಮಾರ್ಗ ವಾರ್ತೆ

ಲಕ್ನೊ, ಆ. 16: ಸಮಯಕ್ಕೆ ಸರಿಯಾಗಿ ನ್ಯಾಯ ಸಿಗದಿದ್ದರೆ ಪ್ರಜಾಪ್ರಭುತ್ವ ಮತ್ತು ಉತ್ತಮ ಆಡಳಿತಕ್ಕೆ ಅರ್ಥವಿಲ್ಲ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದು, ಉತ್ತರ ಪ್ರದೇಶದ ಸ್ಟೇಟ್ ಇನ್ಸಿಟಿಟ್ಯೂಟ್ ಆಫ್ ಫಾರೆನ್ಸಿಕ್ ಸೈನ್ಸ್ ನ ಮೊದಲ ಬ್ಯಾಚ್‍ನ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಅವರು ಮಾತಾಡುತ್ತಿದ್ದರು.

ಪ್ರಜಾಪ್ರಭುತ್ವದ ಕುರಿತು ಉತ್ತಮ ಆಡಳಿತದ ಬಗ್ಗೆ ನಾವು ಕೆಲವೊಮ್ಮೆ ಮಾತನಾಡುತ್ತೇವೆ. ಆದರೆ ನ್ಯಾಯ ತಡವಾದರೆ ಈ ಪದಗಳಿಗೆ ಎಂತಹ ಅರ್ಥವಿದೆ ಎಂದು ಅವರು ಪ್ರಶ್ನಿಸಿದರು.

ಈ ನಡುವೆ ಉತ್ತರ ಪ್ರದೇಶದಲ್ಲಿ ಯೋಗಿ ಮುಖ್ಯಮಂತ್ರಿ ಆದ ಮೇಲೆ ನಿರಪರಾದಿಗಳ ಸಹಿತ 200 ಮಂದಿಯನ್ನು ವಿಚಾರಣೆ ಇಲ್ಲದೆ ಕೋರ್ಟು ಕ್ರಮಗಳಿಲ್ಲದೆ ಪೊಲೀಸರು ಎನ್‍ಕೌಂಟರ್ ಮಾಡಿ ಕೊಂದಿದ್ದು ಇನ್ನೊಂದೆಡೆ ಸರಕಾರವನ್ನು ವಿರೋಧಿಸಿ ಪ್ರತಿಭಟನೆ ನಡೆಸಿದವರ ಮೇಲೆ ಹಲವಾರು ಕೇಸು ಹಾಕಿದ್ದು, ಕಟ್ಟಗಳು ಮನೆಗಳನ್ನು ಬುಲ್ಡೋಝರ್ ಉಪಯೋಗಿಸಿ ಏಕಪಕ್ಷೀಯವಾಗಿ ಕೆಡವಿದ್ದು ದೇಶಾದ್ಯಂತ ಟೀಕೆಗೆ ಗುರಿಯಾಗಿತ್ತು. ಇಂಥ ಯೋಗಿ ನ್ಯಾಯದ ಕುರಿತು ವಿದ್ಯಾರ್ಥಿಗಳಿಗೆ ಉಪದೇಶ ನೀಡಿದ್ದಾರೆ.

ಉತ್ತರ ಪ್ರದೇಶದಲ್ಲಿ ಎರಡು ವಾರಗಳಲ್ಲಿ ಒಬ್ಬರಂತೆ ಎನ್‍ಕೌಂಟರ್ ಮಾಡಲಾಗುತ್ತಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್‌ ಲೆಕ್ಕ ಇತ್ತೀಚೆಗೆ ಬಹಿರಂಗಪಡಿಸಿತ್ತು. 2017ರಿಂದ ಪೊಲೀಸರು ಗುಂಡಿಟ್ಟು 186 ಮಂದಿಯನ್ನು ಕೊಂದಿದ್ದಾರೆ. ಇವುಗಳಲ್ಲಿ ಹೆಚ್ಚಿನವು ನಕಲಿ ಎನ್‍ಕೌಂಟರ್ ಎಂದು ಬಲವಾದ ಆರೋಪ ಕೇಳಿ ಬಂದಿತ್ತು.

ಘರ್ಷಣೆಯಲ್ಲಿ ಕಾಲಿಗೆ ಗುಂಡು ಬಿದ್ದು 5046 ಮಂದಿ ಗಾಯಗೊಂಡಿದ್ದಾರೆ. ಹೆಚ್ಚು ಎನ್‍ಕೌಂಟರ್ ಮೀರತ್ ಜಿಲ್ಲೆಯಲ್ಲಿ 3151ರಷ್ಟು ಎನ್‍ಕೌಂಟರ್ ನಡೆಸಿದರು. ಇದರಲ್ಲಿ 63 ಮಂದಿ ಕೊಲ್ಲಲ್ಪಟ್ಟಿದ್ದಾರೆ. 1708 ಜನರು ಗಾಯಗೊಂಡಿದ್ದಾರೆ. ಎನ್‍ಕೌಂಟರಿನಲ್ಲಿ ಕೊಂದ ಪೊಲೀಸರಿಗೆ 75,000 ದಿಂದ 5 ಲಕ್ಷ ರೂಪಾಯಿ ಬಹುಮಾನ ಸರಕಾರ ನೀಡಿದೆ.

ಇದೇ ವೇಳೆ ಯೋಗಿ ಸರಕಾರ ಯೋಜಿಸಿದ ಕೊಲೆಗಳು ಎನ್‍ಕೌಂಟರ್ ಹೆಸರಿನಲ್ಲಿ ನಡೆಯುವುದು ಎಂದು ಆರೋಪಿಸಿ ಕೊಲ್ಲಲ್ಪಟ್ಟವರ ಕುಟಂಬಗಳು ರಂಗ ಪ್ರವೇಶಿಸಿವೆ. ಎನ್‍ಕೌಂಟರ್ ಹತ್ಯೆಗೆ ಭಡ್ತಿ ಸಿಗುತ್ತದೆ ಎಂದು ಸಹೋದ್ಯೋಗಿಗಳೊಂದಿಗೆ ಪೊಲೀಸರು ಮಾತಾಡುತ್ತಿರುವ ಮಾತುಕತೆಗಳು ಈ ಹಿಂದೆ ಬಹಿರಂಗವಾಗಿದೆ.