ಸನ್ಮಾರ್ಗ ವಾರ್ತೆ
ಹೊಸದಿಲ್ಲಿ,ಆ.15: ಮೊಗಲ್ ಚಕ್ರವರ್ತಿ ಬಾಬರ್ನ ಬಾಬರ್ ನಾಮಾದಲ್ಲಿ ರಾಮಮಂದಿರದ ಕುರಿತು ಪ್ರಸ್ತಾಪಗಳಿಲ್ಲ ಎಂದು ಸುಪ್ರೀಂಕೋರ್ಟು ತಿಳಿಸಿದೆ. ರಾಮವಿಗ್ರಹಕ್ಕಾಗಿ ಹಾಜರಾದ ವಕೀಲ ಸಿಎಸ್ ವೈದ್ಯನಾಥನ್ ಸುಪ್ರೀಂಕೋರ್ಟಿನ ಅಭಿಪ್ರಾಯವನ್ನು ಸರಿಯೆಂದು ಸಮ್ಮತಿಸಿದ್ದಾರೆ. ಬಾಬರಿ ಜಮೀನು ಪ್ರಕರಣದಲ್ಲಿ ಬುಧವಾರ ನಡೆದ ವಿಚಾರಣೆಯ ವೇಳೆ ಸುಪ್ರೀಂಕೋರ್ಟು ಈ ವಿಷಯವನ್ನು ಪ್ರಸ್ತಾಪಿಸಿದೆ.
ಬಾಬರ್ ನಾಮದಲ್ಲಿ ರಾಮಮಂದಿರದ ಕುರಿತ ಪರಮಾರ್ಶೆಗಳಿಲ್ಲ ಎಂದು ಜಸ್ಟಿಸ್ ಸಿ.ಎಸ್. ಬೆಬಡೆ ವೈದ್ಯನಾಥರಿಗೆ ಸೂಚಿಸಿದರು. ಅದನ್ನು ವೈದ್ಯನಾಥನ್ರು ಕೂಡ ಸಮ್ಮತಿಸಿದರು. ನಂತರ ನಡೆದ ವಾದದಲ್ಲಿ ಸುನ್ನಿ ವಕ್ಫ್ ಬೋರ್ಡ್ ವಕೀಲ ಅಡ್ವೊಕೇಟ್ ರಾಜೀವ್ ಧವನ್ ಮಸೀದಿ ನಿರ್ಮಾಣಕ್ಕೆ ಸಂಬಂಧಿಸಿದ ಬಾಬರ್ ನಾಮಾದ ಪುಟಗಳು ಕಾಣೆಯಾಗಿವೆ ಎಂದು ಸುಪ್ರೀಂಕೋರ್ಟಿಗೆ ಮನವರಿಕೆ ಮಾಡಿಕೊಟ್ಟರು.
ಇದೇ ವೇಳೆ ಬಾಬರ್ ಆಗಲಿ, ಔರಂಗಝೇಬ್ ಆಗಲಿ ರಾಮ ಜನ್ಮಭೂಮಿಯಲ್ಲಿ ಬಾಬರಿ ಮಸೀದಿಯಲ್ಲದ ಇನ್ನೊಂದು ಕಟ್ಟಡವನ್ನು ಕಟ್ಟಿಸಿದ್ದಾರೆ ಎಂದು ಸಿ.ಎಸ್ ವೈದ್ಯನಾಥನ್ ವಾದಿಸಿದರು. ಮಸೀದಿಯಲ್ಲಿರುವ ಕಂಭಗಳಲ್ಲಿ ಮುಸ್ಲಿಮರಲ್ಲದ ಚಿತ್ರಗಳಿದ್ದವು ಅದು ರಾಮಮಂದಿರದಿಂದ ತೆಗೆದದ್ದಾಗಿರಬಹುದು ಎಂಬ ವಾದವನ್ನೂ ಅವರು ಮುಂದಿಟ್ಟರು. ಇದಕ್ಕಾಗಿ ಬ್ರಿಟಿಷ್ ಸರ್ವೆಯರ್ ಪುಸ್ತಕದ ಸಾಲುಗಳನ್ನು ಅವರು ಉದ್ಧರಿಸಿದರು. ಈಸ್ಟ್ ಇಂಡಿಯಾ ಕಂಪೆನಿಯ ಗಝೆಟಿಯರ್, ಬ್ರಿಟಿಷ್ ಸೇನೆಯ ಇಂಜಿನಿಯರ್ ಅಲಗ್ಸಾಂಡರ್ ಕನ್ನಿಂಗ್ಹಾಮ್ರ ಪ್ರಾಚ್ಯವಸ್ತು ವರದಿಯ ಕೆಲವು ಭಾಗಗವನ್ನು ವೈದ್ಯನಾಥನ್ ಓದಿದರು. ಬಾಬರಿ ಮಸೀದಿ ಎಂಬ ಹೆಸರು 19ನೇ ಶತಮಾನದವರೆಗೂ ಈ ಮಸೀದಿಗೆ ಇರಲಿಲ್ಲ. ಶ್ರೀರಾಮ ಜನ್ಮ ಭೂಮಿ ಎಂಬಂತೆ ಶತಮಾನಗಳ ಕಾಲ ಹಿಂದೂಗಳು ಅಲ್ಲಿ ಆರಾಧನೆ ನಡೆಸುತ್ತಿದ್ದರು ಎನ್ನುವ ವಾದಕ್ಕೆ ಹಲವು ಪುಸ್ತಕಗಳನ್ನು ವೈದ್ಯನಾಥನ್ ಉಲ್ಲೇಖಿಸಿದರು.












