ಹಿಮಾಚಲಪ್ರದೇಶ: ಬಿಜೆಪಿಯಿಂದ ಮಾಜಿ ಸಚಿವ ಅನಿಲ್ ಶರ್ಮ ಉಚ್ಛಾಟನೆ

0
561

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಜ.15: ಹಿಮಾಚಲಪ್ರದೇಶದ ಮಾಜಿ ಸಚಿವ ಅನಿಲ್ ಶರ್ಮರನ್ನು ಬಿಜೆಪಿ ಪಾರ್ಟಿಯಿಂದ ಹೊರಹಾಕಿದೆ. ಮಾಜಿ ಕೇಂದ್ರ ಸಚಿವ ಸುಖ್‍ರಾಮ್‍ರ ಪುತ್ರ ಇವರು. ಕಳೆದ ಲೋಕಸಭಾ ಚುನಾವಣೆಗಿಂತ ಮೊದಲು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದರು.

ಪಾರ್ಟಿ ನೀತಿಯ ವಿರುದ್ಧ ವರ್ತಿಸುವವರು ಯಾರೇ ಆದರೂ ಅವರ ವಿರುದ್ಧ ಕ್ರಮ ಜರಗಿಸಲಾಗುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ತರುಣ್ ಚುಘ್ ಹೇಳಿದರು. ಶರ್ಮ ಪಾರ್ಟಿಯ ವಿರುದ್ಧ ಕೆಲಸ ಮಾಡಿದ್ದಾರೆ.ಆದ್ದರಿಂದ ಅವರ ವಿರುದ್ಧ ಕ್ರಮ ಜರಗಿಸಲಾಗಿದೆ ಎಂದು ತರುಣ್ ಚುಘ್ ಹೇಳಿದರು.

ಅನಿಲ್ ಶರ್ಮರ ಪುತ್ರ ಆಶ್ರಯ್ ಶರ್ಮ ಕಳೆದ ಸಂಸತ್ತಿನ ಚುಣಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್‍ನಲ್ಲಿ ಮಂಡಿ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಪುತ್ರನ ವಿರುದ್ಧ ಪ್ರಚಾರ ನಡೆಸಬೇಕೆಂದು ಅನಿಲ್ ಶರ್ಮರಲ್ಲಿ ಬಿಜೆಪಿ ಹೇಳಿತ್ತು. ಆದರೆ ಅದಕ್ಕೆ ಅನಿಲ್ ಸಮ್ಮತಿಸಿರಲಿಲ್ಲ. ಬದಲಾಗಿ ಜೈರಾಂ ಠಾಕೂರ್ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಿದ್ದರು. ಸ್ಥಳೀಯ ನಾಯಕರ ಒತ್ತಡವನ್ನು ಸಹಿಸಲಾಗದೆ ಬಿಜೆಪಿ ಅನಿಲ್ ಶರ್ಮರನ್ನು ಪಕ್ಷದಿಂದ ಉಚ್ಚಾಟಿಸಿದೆ.