ಸನ್ಮಾರ್ಗ ವಾರ್ತೆ
ನಟ ಅಮಿತಾಬ್ ಬಚ್ಚನ್ ಅವರು ಅಯೋಗ್ಯಯಲ್ಲಿ ಭೂಮಿ ಖರೀದಿಸಿದ ಮೊದಲ ಸೆಲೆಬ್ರಿಟಿಗಳಲ್ಲಿ ಒಬ್ಬರಾಗಿದ್ದಾರೆ. ರಾಮಮಂದಿರ ಉದ್ಘಾಟನಾ ಸಮಾರಂಭಕ್ಕೂ ಮುನ್ನ ಯೋಜನೆಯಲ್ಲಿ ಅಮಿತಾಬ್ ಬಚ್ಚನ್ ಅವರು ಆರಂಭದಲ್ಲಿ 10,000 ಚದರ ಅಡಿ ಜಾಗವನ್ನು ಸ್ವಾಧೀನ ಪಡಿಸಿಕೊಂಡರು.
ದಿ ಹೌಸ್ ಆಫ್ ಅಭಿನಂದನ್ ಲೋಧ ದ ಸಂಸ್ಥಾಪಕ ಅಭಿನಂದನ್ ಲೋದ ಇತ್ತೀಚೆಗೆ ಒಂದು ಕಾರ್ಯಕ್ರಮದಲ್ಲಿ ಭೂ ಒಪ್ಪಂದದ ಹಿಂದಿನ ಕುತೂಹಲಕಾರಿ ಕಥೆಯನ್ನು ಹಂಚಿಕೊಂಡರು.. 2023ರಲ್ಲಿ ಅವರು ಆಸ್ಟ್ರೇಲಿಯಾದಲ್ಲಿದ್ದಾಗ ಬಚ್ಚನ್ ಅವರ ಫೋನ್ ಕರೆ ಬೆಳಗಿನ ಜಾವ 3 ಗಂಟೆಗೆ ಬಂತು. ಅವರು ಆರಂಭದಲ್ಲಿ ಮಿಸ್ಡ್ ಕಾಲ್ಗಳನ್ನು ನೋಡಿದರು ಆದರೆ ನಂತರ ಬಂದ ಸಂದೇಶವನ್ನು ನೋಡಿ ಆಶ್ಚರ್ಯ ಚಕಿತರಾದರು. ಇದು ಅಮಿತಾಬ್ ಬಚ್ಚನ್, ಅನುಕೂಲಕರವಾದಾಗ ಮತ್ತೆ ಕರೆ ಮಾಡಿ ಎಂದು ಸಂದೇಶದಲ್ಲಿ ಹೇಳಲಾಗಿತ್ತು.
ನಾನು ಅಯೋಧ್ಯೆಯಲ್ಲಿ ಸ್ವಲ್ಪ ಭೂಮಿಯನ್ನು ಖರೀದಿಸಲು ಬಯಸುತ್ತೇನೆ ಎಂದು ಅಮಿತಾಬ್ ಬಚ್ಚನ್ ಹೇಳಿದ್ರು. ಬಚ್ಚನ್ ತಮ್ಮ ಹುಟ್ಟೂರು ಪ್ರಯಾಗ್ರಾಜ್ ಜೊತೆಗಿನ ಭಾವನಾತ್ಮಕ ಸಂಬಂಧವನ್ನು ಪ್ರಸ್ತಾಪಿಸಿದರು.. ಬಚ್ಚನ್ ಅವರ ಆಶಯವನ್ನು ತಿಳಿದ ಲೋಧ ಅವರಿಗೆ ಉತ್ತಮ ಸ್ಥಳವನ್ನು ಹುಡುಕುವುದಾಗಿ ಭರವಸೆ ನೀಡಿದರು.
ಬೆಲೆಯ ಬಗ್ಗೆ ಮಾತನಾಡಲು ಹಿಂಜರಿದ ಬಚ್ಚನ್ ನೇರವಾಗಿ 15,000 ಚದರ ಅಡಿ ಭೂಮಿಗೆ ಬೇಡಿಕೆ ಇಟ್ಟರು ಲೋದ ಸುಮಾರು 15 ಕೋಟಿ ವೆಚ್ಚವಾಗುತ್ತದೆ ಎಂದು ಹೇಳಿದಾಗ ಮರು ದಿನವೇ ಮೊತ್ತವನ್ನು ಹಸ್ತಾಂತರಿಸಿದರು.
ಅಲ್ಲದೆ ರಾಮಮಂದಿರದಿಂದ ಹತ್ತು ಕಿಲೋ ಮೀಟರ್ ದೂರದಲ್ಲಿರುವ 54,454 ಚದರ ಅಡಿ ಅಳತೆಯ ಮತ್ತೊಂದು ಭೂಮಿಯನ್ನು ಹರಿವಂಶರಾಯಿ ಬಚ್ಚನ್ ಸ್ಮಾರಕ ಟ್ರಸ್ಟ್ ಹೆಸರಿನಲ್ಲಿ ಸ್ವಾಧೀನ ಪಡಿಸಿಕೊಂಡಿದ್ದಾರೆ. ಅಲ್ಲದೆ 2026ರಲ್ಲಿ ಮತ್ತೊಂದು ಪ್ರದೇಶದಲ್ಲಿ ಎರಡು ಎಕ್ರೆ 67 ಸೆಂಟ್ಸ್ ಭೂಮಿಯನ್ನು 35 ಕೋಟಿ ರೂಪಾಯಿಗೆ ಖರೀದಿಸಿದ್ದಾರೆ.












