ಬಾಗ್‍ಪತ್‍ನ ಬದ್ರುದ್ದೀನ್ ಶಾ ದರ್ಗಾ ಹಿಂದೂಗಳಿಗೆ; ಜಿಲ್ಲಾ ಸೆಶನ್ಸ್ ಕೋರ್ಟು ಆದೇಶ

0
471

ಸನ್ಮಾರ್ಗ ವಾರ್ತೆ

ಬಾಗ್ಪತ್‍ (ಉತ್ತರಪ್ರದೇಶ): ಬಾಗ್ಪತ್‍ನ ಸೂಫಿ ಬದ್‍ರುದ್ದೀನ್ ಶಾ ದರ್ಗಾ ಹಿಂದೂ ವಿಭಾಗಕ್ಕೆ ಬಿಟ್ಟುಕೊಡಲು ಸೆಶನ್ಸ್ ಕೋರ್ಟು ಆದೇಶ ನೀಡಿದೆ.

ಮಾಲಕತ್ವ ಹಕ್ಕು ತಮಗೆ ನೀಡಲು ಮುಸ್ಲಿಮರು ಸಲ್ಲಿಸಿದ ಅಜಿ ತಳ್ಳಿ ಹಾಕಿದ ಸಿವಿಲ್ ಜಡ್ಜ್ ಶಿವಂ ದ್ವಿವೇದಿಯವರು ವಿವಾದ ಜಮೀನು ವಕ್ಫ್ ಆಸ್ತಿ, ಸ್ಮಶಾನ ಭೂಮಿ ಆಗಿದೆ ಎಂದು ದೃಢಪಡಿಸಲು ಮುಸ್ಲಿಮರು ವಿಫಲರಾಗಿದ್ದಾರೆ ಎಂದು ಕೋರ್ಟು ಹೇಳಿದೆ.

ಬಾಗ್‍ಪತ್‍ನ ಬರ್ನಾವಾ ಗ್ರಾಮದಲ್ಲಿ ದರ್ಗಾ ಇರುವ ಸ್ಥಳದಲ್ಲಿ ಹಲವು ವರ್ಷಗಳಿಂದ ವಿವಾದವಿತ್ತು. ದರ್ಗಾ 600 ವರ್ಷಗಳಷ್ಟು ಹಳೆಯದು ಎಂದು ಮುಸ್ಲಿಮರು ಹೇಳುತ್ತಿದ್ದಾರೆ. 1930ರಲ್ಲಿ ಹಿಂದೂಗಳು ಅಕ್ರಮವಾಗಿ ನುಸುಳಿ ಪ್ರಾರ್ಥನೆ ನಡೆಸಲು ಯತ್ನಿಸಿದ್ದಾರೆ ಎಂದು ಆರೋಪಿಸಿ ದರ್ಗಾದ ಉಸ್ತುವರಿ ವಹಿಸಿದ ಮುಖೀಂ ಖಾನ್ ಮೀರತ್‍ನ ಕೋರ್ಟಿಗೆ ಹೋಗಿದ್ದರು. ನಂತರ ಬಾಗ್‍ಪತ್ ಕೋರ್ಟಿಗೆ ಪ್ರಕರಣ ವರ್ಗಾಯಿಸಲಾಗಿತ್ತು. ಬಾಗ್ಪತ್ ಪುರೋಹಿತ ಕೃಷ್ಣ ದತ್ ಮಹಾರಾಜ್‍ರನ್ನು ಪ್ರಕರಣದಲ್ಲಿ ಆರೋಪಿಯಾಗಿಸಲಾಗಿತ್ತು.

ಇದನ್ನು ಬದ್ರುದ್ದೀನ್ ಶಾರ ಸಮಾಧಿ ಎಂದು ಮುಸ್ಲಿಮರು ಹೇಳುತ್ತಿದ್ದಾರೆ. ಇದನ್ನು ಮಹಾಭಾರತದಲ್ಲಿ ಬಂದಿರುವ ಲಕ್ಷ ಗೃಹದ ಅವಶೇಷ ಎಂದು ಹಿಂದೂ ವಿಭಾಗದವರು ವಾದಿಸಿದ್ದಾರೆ. ಪಾಂಡವರನ್ನು ಸುಡಲು ದುರ್ಯೋಧನ ಕಟ್ಟಿಸಿದ ಅರಮನೆ ಮಹಾಭಾರತದ ಲಕ್ಷ ಗೃಹವಾಗಿದೆ.

ಲಕ್ಷ ಗೃಹದೊಂದಿಗೆ ಸಂಬಂಧಿಸಿ ಸಂಪೂರ್ಣ ಸಾಕ್ಷ್ಯಗಳನ್ನು ಕೋರ್ಟಿನಲ್ಲಿ ಸಲ್ಲಿಸಲಾಗಿದೆ. ಇದರ ಮಾಲಕತ್ವದ ಹಕ್ಕು ಮುಸ್ಲಿಮರ ವಿಭಾಗದಲ್ಲ ಎಂದು ಅದನ್ನು ಹಿಂದೂ ವಿಭಾಗಕ್ಕೆ ಬಿಟ್ಟು ಕೊಡಬೇಕೆಂದು ವಕೀಲ ರಣ್‍ವೀರ್ ಸಿಂಗ್ ತೋಮರ್ ವಾದಿಸಿದ್ದರು. ಮುಸ್ಲಿಮರು ಹೈಕೋರ್ಟಿನ ಮೊರೆ ಹೋಗಲಿದ್ದಾರೆ ಎಂದು ವಕೀಲ ಶಾಹಿದ್ ಖಾನ್ ಹೇಳಿದ್ದಾರೆ.

ಈಗ ಈ ಜಮೀನು ಆರ್ಕಿಲಾಜಿಕಲ್ ಸರ್ವೆ ಆಫ್ ಇಂಡಿಯದ ಅಧೀನದಲ್ಲಿದೆ. ತೀರ್ಪಿನ ನಂತರ ಪ್ರದೇಶದಲ್ಲಿ ಪೊಲೀಸರು ಬಿಗಿ ಬಂದೋಬಸ್ತು ಮಾಡಿದ್ದಾರೆ.