ಬಹರೇನ್ ವಿಸಿಟ್‌ ವೀಸಾ ಯಾತ್ರಿಗಳು ಈ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು…

0
348

ಸನ್ಮಾರ್ಗ ವಾರ್ತೆ

ವಿಸಿಟಿಂಗ್ ವೀಸಾ ಮತ್ತು ಇ ವಿಸಿಟ್ ವೀಸಾದ ಮೂಲಕ ಕೆಲಸ ಗಿಟ್ಟಿಸಲಿಕ್ಕಾಗಿ ಭಾರತದಿಂದ ಬಹ‌ರೇನ್ ಬರುವ ಯಾತ್ರಿಕರು ಜಾಗರೂಕತೆ ಪಾಲಿಸದಿದ್ದರೆ ಸಂಕಷ್ಟಕ್ಕೆ ಸಿಲುಕಿ ಕೊಳ್ಳಬಹುದು ಎಂಬುದಾಗಿ ವರದಿಯಾಗಿದೆ. ಬಹರೇನ್ ಅಧಿಕಾರಿಗಳು ಬಿಡುಗಡೆಗೊಳಿಸಿರುವ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸದಿದ್ದರೆ ಬಂದವರು ಮರಳಿ ಹೋಗಬೇಕಾದ ಪರಿಸ್ಥಿತಿ ಉಂಟಾಗಬಹುದು. ಈಗಾಗಲೇ ಅನೇಕರು ಇಂತಹ ಎಡವಟ್ಟು ಮಾಡಿಕೊಂಡು ಭಾರತಕ್ಕೆ ಮರಳಿರುವ ಸೂಚನೆಯೂ ಸಿಕ್ಕಿದೆ.

ಆದ್ದರಿಂದ ವಿಸಿಟಿಂಗ್ ವೀಸಾದಲ್ಲಿ ಬಹರೈನ್‌ಗೆ ಹೋಗುವವರು ಗಮನಿಸಬೇಕಾದ ವಿಷಯಗಳು ಯಾವುವು ಎಂಬುದನ್ನು ಏರ್ ಇಂಡಿಯಾ ಬಿಡುಗಡೆಗೊಳಿಸಿದ ವಿವರಗಳಲ್ಲಿ ಹೇಳಲಾಗಿದೆ.

ವಿಸಿಟಿಂಗ್ ವೀಸಾ ಅಥವಾ ಈ ವಿಸಿಟಿಂಗ್ ವಿಸಾದಲ್ಲಿ ಬರುವ ಪ್ರಯಾಣಿಕರಲ್ಲಿ ಕನ್ಫರ್ಮ್ ಮಾಡಿದ ರಿಟರ್ನ್ ಟಿಕೆಟ್ ಇರಬೇಕಾಗಿದೆ.
ಬಹರೈನ್‌ನಲ್ಲಿ ಇರಲು ಬೇಕಾಗುವಷ್ಟು ಹಣ ಇರಬೇಕಾಗಿದೆ. ಕನಿಷ್ಠ 300 ದೀನಾರ್ ಅಥವಾ ಅದಕ್ಕೆ ತಕ್ಕುದಾದ ಹಣ ಪ್ರಯಾಣಿಕರ ಕೈಯಲ್ಲಿ ಇರಬೇಕಾಗಿದೆ.

ಬಹರೈನ್‌ನಲ್ಲಿ ತಂಗುಬಷ್ಟು ದಿನ ಹೋಟೆಲ್ ರಿಸರ್ವೇಶನ್ ಮಾಡಿಕೊಂಡಿರುವ ಬಗ್ಗೆ ದಾಖಲೆ ಇರಬೇಕಾಗಿದೆ. ಬಹರೇನ್ ನಲ್ಲಿರುವ ಕೋವಿಡ್ ನಿಯಮಗಳ ಜೊತೆಗೆ ಈ ನಿಯಮಗಳನ್ನು ಕೂಡಾ ಪ್ರಯಾಣಿಕರು ಪಾಲಿಸಬೇಕಾಗಿದೆ.

ಈ ನಿಯಮವನ್ನು ಪಾಲಿಸದ ಅನೇಕರನ್ನು ಮರಳಿ ಭಾರತಕ್ಕೆ ಕಳುಹಿಸಲಾದ ಘಟನೆ ಈಗಾಗಲೇ ನಡೆದಿದೆ. ಟಿಕೆಟ್ ಮತ್ತು ವೀಸಾಕ್ಕೆ ದೊಡ್ಡದೊಂದು ಮೊತ್ತವನ್ನು ವ್ಯಯಿಸಿ ಬರುವ ಭಾರತೀಯರು ಅಂತಿಮ ಕ್ಷಣದಲ್ಲಿ ನಿರಾಶೆಯಾಗದೆ ಇರಬೇಕಾದರೆ ಈ ನಿಯಮಗಳನ್ನು ಗಮನಿಸಬೇಕಾಗಿದೆ ಎಂದು ತಿಳಿಸಲಾಗಿದೆ.

LEAVE A REPLY

Please enter your comment!
Please enter your name here