ಪೌರತ್ವ ತಿದ್ದುಪಡಿ ಕಾನೂನು: ನಿರಾಶ್ರಿತರನ್ನು ಬಾಂಗ್ಲಾದೇಶಕ್ಕೆ ಕಳುಹಿಸುವುದಿಲ್ಲ ಎಂದು ಬರಹ ಮೂಲಕ ದೃಢೀಕರಿಸಿ- ಭಾರತಕ್ಕೆ ಬಾಂಗ್ಲಾ ಆಗ್ರಹ

0
1343

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಡಿ. 31: ಪೌರತ್ವ ತಿದ್ದುಪಡಿ ಕಾನೂನು ಜಾರಿಗೊಳಿಸಿದರೆ ನಿರಾಶ್ರಿತರನ್ನು ಬಾಂಗ್ಲಾದೇಶಕ್ಕೆ ಕಳುಹಿಸುವುದಿಲ್ಲ ಎಂಬ ಮೋದಿ ಸರಕಾರದ ಘೋಷಣೆಗೆ ಅಧಿಕೃತ ದೃಢೀಕರಣ ಬೇಕು ಎಂದು ಬಾಂಗ್ಲಾದೇಶ ಪ್ರಧಾನಿ ಶೇಕ್ ಹಸೀನಾ ಹೇಳಿದ್ದಾರೆ. ಈ ವಿಷಯದಲ್ಲಿ ಭಾರತವು ಭರವಸೆಯನ್ನು ಬರಹ ಮೂಲಕ ನೀಡಬೇಕೆಂದು ಅವರು ಹೇಳಿದರು. ದಿ ಪ್ರಿಂಟ್ ಪತ್ರಿಕೆ ಬಾಂಗ್ಲಾದೇಶದ ಆತಂಕವನ್ನು ವರದಿಮಾಡಿದೆ.

ಭಾರತದಲ್ಲಿ ಜಾರಿಗೊಳಿಸಲಾಗುವ ಪೌರತ್ವ ಕಾನೂನಿನ ಬಗ್ಗೆ ಬಾಂಗ್ಲಾದೇಶ ಮೃದು ನಿಲುವು ಹೊಂದಿದೆ ಎಂಬ ಆರೋಪದ ನಡುವೆ ಶೇಕ್ ಹಸೀನಾ ತನ್ನ ನಿಲುವನ್ನು ಹೀಗೆ ಸ್ಪಷ್ಟಪಡಿಸಿದ್ದಾರೆ. ಹಿಂದೆ ಭಾರತಕ್ಕೆ ಖಾಸಗಿ ಭೇಟಿ ನೀಡಿದಾಗ ಎನ್ ಆರ್ ಸಿ ಕುರಿತು ಆತಂಕ ವ್ಯಕ್ತಪಡಿಸಿದ್ದರು. ಎನ್ ಆರ್ ಸಿಯ ಮೂಲಕ ಹೊರತಳ್ಳುವವರನ್ನು ಬಾಂಗ್ಲದೇಶಕ್ಕೆ ಕಳುಹಿಸುವುದಿಲ್ಲ ಎಂದು ಮೋದಿ ಸರಕಾರ ಹೇಳಿದರೆ ಸಾಲದು, ಅದಕ್ಕೆ ಅಧಿಕೃತ ದಾಖಲೆಯನ್ನು ಬಾಂಗ್ಲಾದೇಶಕ್ಕೆ ನೀಡಿಲ್ಲ ಎಂದು ಅವರು ಹೇಳಿದರು.