ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ಡಿ. 31: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸೋಮವಾರ ಮಧ್ಯರಾತ್ರಿ ತನ್ ಟ್ವಿಟರ್ ನಲ್ಲಿ ಊಂಏಂ ಹ್ರೀಂ ಕಲಿಂ ಚಾಮುಂಡಾಯ ವಿಚ್ಚೆ ಎನ್ನುವ ಮಂತ್ರವನ್ನು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಭಾರೀ ಚರ್ಚೆಗೆ ಗ್ರಾಸವಾಗಿದೆ. ಪ್ರಿಯಾಂಕಾ ಅವರು ದುರ್ಗಾ ಸಪ್ತಶ್ತಿ ಮಂತ್ರದ ಮೂಲಕ ಯಾವ ಸಂದೇಶ ನೀಡುತ್ತಿದ್ದಾರೆ ಅನ್ನುವ ಪ್ರಶ್ನೆಯನ್ನು ಹಲವಾರು ಕೇಳಿದ್ದಾರೆ? ಹಲವರು ಹಲವು ರೀತಿಯ ಕಾಮೆಂಟು ಮಾಡಿದ್ದಾರೆ. ಒಬ್ಬರು ಇದನ್ನು ರಾಜಕೀಯದೊಂದಿಗೆ ಜೋಡಿಸಿದ್ದಾರೆ. ಇತರ ಕೆಲವರು ತಮ್ಮ ಅಭೀಷ್ಟ ಸಿದ್ಧಿಗಾಗಿ ಅವರು ಮಂತ್ರವನ್ನು ಜಪಿಸಿದ್ದಾರೆ ಎಂದು ಹೇಳಿದ್ದಾರೆ. ಇನ್ನೋರ್ವ ಟ್ವಿಟರ್ ಬಳಕೆದಾರ ಸರಿಯಾದ ರೀತಿಯಲ್ಲಿ ಉಚ್ಚರಿಸಲು ಸಲಹೆ ನೀಡಿದ್ದಾರೆ.
ಕಳೆದ ಕೆಲವು ದಿನಗಳಿಂದ ಪ್ರಿಯಾಂಕಾ ಚರ್ಚೆಯಲ್ಲಿದ್ದಾರೆ. ಪ್ರಿಯಾಂಕಾ ಡಿಸೆಂಬರ್ 28ರಂದು ಲಕ್ನೊಕ್ಕೆ ಹೋಗಿದ್ದರು. ಸ್ಥಳೀಯ ಪೊಲೀಸರು ಅವರನ್ನು ಕೊರಳಪಟ್ಟಿ ಹಿಡಿದು ದೂಡಿದರೆಂದು ಮತ್ತು ಮುಂದೆ ಹೋಗದಂತೆ ಎಚ್ಚರಿಕೆ ನೀಡಿದರೆಂದು ಪ್ರಿಯಾಂಕ ಹೇಳಿದ್ದರು. ಲಕ್ನೊ ಪೊಲೀಸ್ ಸರ್ಕಲ್ ಅಧಿಕಾರಿಯವರು ಪ್ರಿಯಾಂಕಾ ಅವರ ಭದ್ರತಾ ಅಧಿಕಾರಿಗಳಿಗೆ ಬೆದರಿಕೆ ಹಾಕಿದ್ದರು.












