ಬಾಂಗ್ಲಾ ದೇಶದ ನಡೆದಾಡುವ ಗ್ರಂಥಾಲಯ ಪೊಲನ್ ಸರ್‍ಕಾರ್ ನಿಧನ

0
742

ಢಾಕ: ಬಾಂಗ್ಲಾದೇಶದಲ್ಲಿ ನಡೆದಾಡುವ ಗ್ರಂಥಾಲಯ ಎಂದು ಪ್ರಸಿದ್ಧರಾದ ಪೊಲನ್ ಸರ್‍ಕಾರ್ (98) ನಿಧನರಾಗಿದ್ದಾರೆ. ಜೀವನದುದ್ದಕ್ಕೂ ಜನರಿಗೆ ಜ್ಞಾನ ಹಂಚಲು ಪುಸ್ತಕಗಳೊಂದಿಗೆ ತಾನಿರುವ ಊರಿನಾದ್ಯಂತ ಸುತ್ತಾಡುತ್ತಿದ್ದ ಚೇತನ ಅವರು. ಬಾಂಗ್ಲಾದೇಶದ ಉಪಜಿಲ್ಲೆ ಬೌಸುವ ಗ್ರಾಮದ ತನ್ನ ಮನೆಯಲ್ಲಿ ಇಂದು ಮಧ್ಯಾಹ್ನ 12:30ಕ್ಕೆ ಅವರು ನಿಧನರಾದರು.

ಕೆಲವು ದಿವಸಗಳಿಂದ ಅನಾರೋಗ್ಯಕ್ಕೀಡಾಗಿದ್ದರು ಎಂದು ಅವ ಪುತ್ರ ಹೈದರ್ ಅಲಿ ತಿಳಿಸಿದರು. ಅವರು ಪೂರ್ಣ ಹೆಸರು ಹರೇಝುದ್ದೀನ್ ಆಗಿದ್ದು ಬಗಟಿಪುರ ಉಪಜಿಲ್ಲೆಯಲ್ಲಿ ಸೆಪ್ಟಂಬರ್ 10, 1921ರಲ್ಲಿ ಜನಿಸಿದ್ದರು. ಪೊಲನ್ ಸರ್‍ಕಾರ್ ಸ್ವಯಂಪ್ರೇರಣೆಯಿಂದ ಓದುವ ಹವ್ಯಾಸವನ್ನು ರೂಢಿಸಿಕೊಂಡಿದ್ದರು.

ಪೋಲನ್‍ರ ತಂದೆ ತೀರಿಕೊಂಡಾಗ ಅವರ ತಾಯಿ ರಾಜಶಾಹಿಯ ತನ್ನ ತವರು ಮನೆಗೆ ಹೋದರು. ಆರನೆ ತರಗತಿ ಅವರ ಕಲಿಕೆ ನಿಂತುಹೋಯಿತು. ಆದರೆ ಅವರ ಕಲಿಯುವ ತುಡಿತ ನಿಲ್ಲಲಿಲ್ಲ. ನಂತರ ಅವರು ತನ್ನ ನಾಟಕ ಕಂಪೆನಿಗೆ ಸೇರಿದರು. ಅದರಲ್ಲಿ ಸ್ಕ್ರಿಪ್ಟ್ ಗಳನ್ನು ಓದುವುದು ಮತ್ತು ನಾಟಕಗಳಲ್ಲಿ ಪಾತ್ರ ಮಾಡಿದರು. ಸ್ಥಳೀಯ ಲೈಬ್ರರಿಗಳಿಂದ ಪುಸ್ತಕವನ್ನು ಖರೀದಿಸಿ ಓದತೊಡಗಿದರು. ಹೀಗೆ ಅವರು ಓದುವ ಹವ್ಯಾಸ ಬೆಳೆಯಿತು.

ನಂತರ ಅವರು ಕಾನೂನು ವಿಷಯಗಳನ್ನು ಮತ್ತು ವ್ಯಾಪಾರ ಒಪ್ಪಂದಗಳನ್ನು ಬರೆಯುವ ಹಾಗೂ ಸಭೆಯಲ್ಲಿ ವಿಷಯ ಮಂಡಿಸುವ ಪ್ರತಿಭೆ ಗೋಚರವಾಯಿತು. ಒಮ್ಮೆ ಅವರು ಸ್ಥಳೀಯ ಹೈಸ್ಕೂಲ್ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಆಗ ಅವರು ಮಕ್ಕಳಿಗೆ ಪುಸ್ತಕಗಳನ್ನು ಹಂಚಿ ಅವರು ಓದಿನ ರುಚಿ ಹಿಡಿಸಿದರು.

ತನ್ನ ಎಂಬತ್ತನೆ ವರ್ಷದಲ್ಲಿ ಸಕ್ಕರೆ ಕಾಯಿಲೆಗೆ ತುತ್ತಾದರೂ ಕನಿಷ್ಠ ದಿನಕ್ಕೆ ಮೂರು ಕಿಲೊಮೀಟರ್ ನಡೆದಾಡುತ್ತೇನೆ ಎಂದು ಒಮ್ಮೆ ಹೇಳಿದ್ದಾರೆ. ಈ ವೇಳೆ ಅವರು ಗ್ರಾಮಸ್ಥರ ಮನೆಗೆ ಹೋಗಿ ಪುಸ್ತಕ ವಿತರಿಸುತ್ತಿದ್ದರು. ಸುಮಾರು ದಶಕಗಳ ಕಾಲ ಅವರು ನಡೆದು ಹೋಗಿ ಪುಸ್ತಕವನ್ನು ಕೊಡುವ ಕೆಲಸನ್ನು ಚಾಚು ತಪ್ಪದೆ ಮಾಡಿದರು.

20008ರಲ್ಲಿ ತನ್ನ ಸ್ವಂತ ಸ್ಥಳದಲ್ಲಿ ರಾಶಾಹಿ ಜಿಲ್ಲಾ ಪರಿಷತ್‍ನ ಸಹಾಯದಲ್ಲಿ ಲೈಬ್ರೆರಿ ಸ್ಥಾಪಿಸಿದರು. ಈಗ ಈ ಲೈಬ್ರರಿಯು ಪುಸ್ತಕ ವಿತರಣ ಕೇಂದ್ರಗಳನ್ನು ಬೇರೆ ಬೇರೆ ಜಿಲ್ಲೆಗಳಲ್ಲಿ ಹೊಂದಿದೆ. ಇವರಿಂದ ಪ್ರೇರಣೆ ಗೊಂಡು ಗ್ರಾಮದ ಕೆಲವು ಯುವಕರು ಪುಸ್ತಕ ಓದುವ ಚಳವಳಿಯನ್ನು ಹುಟ್ಟುಹಾಕಿದ್ದಾರೆ. 2011ರಲ್ಲಿ ಪೊಲನ್ ಸರ್ಕಾರ್ ರಿಗೆ ಅವರ ಸಮಾಜ ಸೇವೆಯನ್ನು ಪರಿಗಣಿಸಿ ಇಕ್ಸುಯೇ ಪದಕ ನೀಡಿ ಗೌರವಿಸಲಾಗಿದೆ.