ಸಿರಿಯ: ಇದ್ಲಿಬ್‍ನ ರೆಸ್ಟೊರೆಂಟಿನಲ್ಲಿ ಆತ್ಮಾಹುತಿ ಬಾಂಬು ಸ್ಫೋಟ: ಕನಿಷ್ಠ 7 ಸಾವು

0
559

ಇದ್ಲಿಬ್: ಸಿರಿಯದ ವಾಯವ್ಯ ನಗರವಾದ ಇದ್ಲಿಬ್‍ನ ರೆಸ್ಟೊರೆಂಟೊಂದರಲ್ಲಿ ಅತ್ಮಾಹುತಿ ಬಾಂಬ್ ಸ್ಫೋಟಗೊಂಡು ಕನಿಷ್ಟ ಏಳು ಮಂದಿ ಮೃತಪಟ್ಟಿದ್ದಾರೆಂದು ಸಿರಿಯದ ಹೋರಾಟಗಾರರು ಮತ್ತು ಯುದ್ಧ ಮಾನಿಟರ್ ತಿಳಿಸಿದ್ದಾರೆ.

ಬ್ರಿಟನ್ ಮೂಲದ ಸಿರಿಯದ ಮಾನವಹಕ್ಕುಗಳ ಸಂಘಟನೆ ಆತ್ಮಾಹುತಿ ಬಾಂಬರ್ ಸ್ಫೋಟಕಗಳನ್ನು ರೆಸ್ಟೋರೆಂಟಿನ ಒಳಗೆ ಸ್ಫೋಟಿಸಿದ ಕೂಡಲೆ ರೆಸ್ಟೋರೆಂಟಿನಲ್ಲಿ ಬೆಂಕಿ ಹರಡಿತ್ತು. ಆರು ಭಯೋತ್ಪಾದಕರ ಸಹಿತ ಎಂಟು ಮೃತಪಟ್ಟಿದ್ದಾರೆ ಎಂದು ತಿಳಿಸಿದೆ. ಆದರೆ ಇದ್ಲಿಬ್‍ನ ಮಾಧ್ಯಮ ಕೇಂದ್ರ ಏಳು ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿಸಿದೆ.

ಗುರುವಾರ ಸ್ಫೋಟ ಇತ್ತೀಚಿನ ಸ್ಫೋಟವಾಗಿದ್ದು ಇದ್ಲಿಬ್‍ನಲ್ಲಿ ಕಾನೂನು ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಇದ್ಲಿಬ್ ನಗರ ಬಂಡುಕೋರ ಗುಂಪು ಅಲ್‍ಕಾಯಿದ ಸಹ ಸಂಘನಟೆಯಾದ ಹಯಾತ್ ತಹ್ರೀರ್ ಅಲ್ ಶಾಮ್ ಅಥವಾ ಲೆವೆಂಟ್ ಲಿಬರೇಶನ್ ಕಮಿಟಿಯ ನಿಯಂತ್ರಣದಲ್ಲಿರುವ ಕೊನೆಯ ಪ್ರದೇಶವಾಗಿದೆ.