ಸನ್ಮಾರ್ಗ ವಾರ್ತೆ-
ಕಾರ್ತೂಂ, ಆ.22: ಪದಚ್ಯುತಗೊಂಡಿರುವ ಮಾಜಿ ಸುಡಾನ್ ಅಧ್ಯಕ್ಷ ಉಮರುಲ್ ಬಶರ್ ಸೌದಿ ಅರೇಬಿಯದಿಂದ ಸೌದಿ ಅರೇಬಿಯದಿಂದ 90 ಮಿಲಿಯನ್ ಡಾಲರ್ ನೆರವು ಸ್ವೀಕರಿಸಿದ್ದಾರೆ ಎಂದು ಅವರ ವಿರುದ್ಧ ವಿಚಾರಣೆ ನಡೆಸುತ್ತಿರುವ ತನಿಖಾ ತಂಡ ಹೇಳಿದೆ. ಭ್ರಷ್ಟಾಚಾರ ಪ್ರಕರಣದಲ್ಲಿ ತನಿಖೆ ಎದುರಿಸುತ್ತಿರುವ ಬಶರ್ ರನ್ನು ಕೋರ್ಟಿಗೆ ಹಾಜರು ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಪೊಲೀಸಧಿಕಾರಿ ಕೋರ್ಟಿಗೆ ಸೌದಿ ನೀಡಿದ ಸಹಾಯಧನದ ಕುರಿತು ತಿಳಿಸಿದರು.
ಭ್ರಷ್ಟಾಚಾರ, ವಿದೇಶಿ ಹಣ ಕೈವಶ ಇರಿಸಿದ್ದು, ಕಾನೂನು ಭಾಹಿರವಾಗಿ ದೇಣಿಗೆ ಸ್ವೀಕರಿಸಿದ್ದು ಇತ್ಯಾದಿ ಆರೋಪಗಳನ್ನು ಬಶರ್ ವಿರುದ್ಧ ಹೊರಿಸಿ ಅವರನ್ನು ಜೈಲಿನಲ್ಲಿರಿಸಲಾಗಿದೆ.
ಈ ಪ್ರಕರಣದ ವಿಚಾರಣೆಯ ವೇಳೆ ಅವರನ್ನು ಕೋರ್ಟಿಗೆ ಹಾಜರುಪಡಿಸಲಾಯಿತು. ಸೌದಿ ಅರೇಬಿಯದಿಂದ ಅನಧಿಕೃತವಾಗಿ ಬಶರ್ ಹಣ ಸ್ವೀಕರಿಸಿದ್ದಾರೆ ಎಂದು ಬ್ರಿಗೇಡಿಯರ್ ಜನರಲ್ ಅಹ್ಮದ್ ಅಲಿ ಸೋಮವಾರ ಕೋರ್ಟಿಗೆ ತಿಳಿಸಿದರು. ಇತ್ತೀಚೆಗೆ ಅವರ ವಸತಿಯಿಂದ 7.8 ಮಿಲಿಯನ್ ಡಾಲರ್ ಯುರೊವನ್ನು ಪೊಲೀಸರು ವಶಪಡಿಸಿಕೊಂಡಿದ್ದರು.












