ಇಂದು ಬ್ಯಾಂಕ್ ಸಿಬ್ಬಂದಿಗಳ ಮುಷ್ಕರ

0
491

ಹೊಸದಿಲ್ಲಿ,ಅ.22: ಇಂದು ಒಂದು ವಿಭಾಗದ ಬ್ಯಾಂಕ್ ಸಿಬ್ಬಂದಿಗಳು ಮುಷ್ಕರ ನಡೆಸಲಿದ್ದು ರಾಷ್ಟ್ರಾದ್ಯಂತ ಬ್ಯಾಂಕಿಂಗ್ ಕ್ಷೇತ್ರದ ವಹಿವಾಟು ಸ್ಥಗಿತವಾಗುವ ಆತಂಕ ಸೃಷ್ಟಿಯಾಗಿದೆ. ಬ್ಯಾಂಕುಗಳ ವಿಲೀನ, ಹೂಡಿಕೆ ದರ ಕಡಿಮೆ ಇವುಗಳನ್ನು ವಿರೋಧಿಸಿ ಆಲ್ ಇಂಡಿಯಾ ಬ್ಯಾಂಕ್ ಎಂಪ್ಲಾಯಿಸ್ ಅಸೋಸಿಯೇಶನ್(ಬಿಐಎಫ್ಎ), ಬ್ಯಾಂಕ್ ಎಂಪ್ಲೋಯಿಸ್ ಫೆಡರೇಷನ್ ಆಫ್ ಇಂಡಿಯಾ(ಎಐಬಿಇಎ), ಬ್ಯಾಂಕ್ ಎಂಪ್ಲಾಯಿಸ್ ಫೆಡರೇಶನ್ ಅಫ್ ಇಂಡಿಯಾ(ಬಿಇಎಫ್‍ಐ) ಜಂಟಿಯಾಗಿ ದೇಶಾದ್ಯಂತ ಮುಷ್ಕರ ಘೋಷಿಸಿವೆ.

ಮುಷ್ಕರದಿಂದ ವ್ಯವಹಾರಕ್ಕೆ ಅಡ್ಡಿಯಾಗಬಹುದೆಂದು ಎಸ್‍ಬಿಐ ಸಹಿ ದೇಶದ ಪ್ರಧಾನ ಬ್ಯಾಂಕುಗಳು ವ್ಯವಹಾರಸ್ಥರಿಗೆ ಮುನ್ನೆಚ್ಚರಿಕೆಯನ್ನೂ ನೀಡಿವೆ.

ಮುಷ್ಕರ ನಡೆಸದಂತೆ ಚೀಫ್ ಲೇಬರ್ ಕಮಿಷನರ್ ಮುಂದೆ ಚರ್ಚೆ ನಡೆದಿತ್ತು. ಆದರೆ ಯಾವುದೇ ತೀರ್ಮಾನ ಆಗಿಲ್ಲ. ಕಳೆದ ತಿಂಗಗಳು 26, 27 ತಾರೀಕುಗಳಲ್ಲಿ ಬ್ಯಾಂಕ್ ಸಿಬ್ಬಂದಿಗಳ ಸಂಘಟನೆ ಎರಡು ದಿವಸಗಳ ಮುಷ್ಕರಕ್ಕೆ ಕರೆ ನೀಡಿದ್ದರೂ ಸರಕಾರ ಮಧ್ಯಪ್ರವೇಶಿಸಿದ್ದರಿಂದ ಮುಂದೂಡಲಾಗಿತ್ತು.