ರಾಬರ್ಟ್ ವಾದ್ರಾ ಆಸ್ಪತ್ರೆಗೆ ದಾಖಲು

0
575

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಅ.22: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಪತಿ ರಾಬರ್ಟ್ ವಾದ್ರಾರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ತೀವ್ರ ಬೆನ್ನು ನೋವಿನ ಕಾರಣದಿಂದಾಗಿ ನೊಯಿಡಾ ಸೆಕ್ಟರ್ ಹನ್ನೊಂದರ ಮೆಟ್ರೊ ಆಸ್ಪತ್ರೆಗೆ ವಾದ್ರಾ ದಾಖಲಾಗಿದ್ದಾರೆ. ನೋವು ಕಾಣಿಸಿಕೊಂಡದ್ದರಿಂದ ಆಸ್ಪತ್ರೆಗೆ ಆರೋಗ್ಯ ತಪಾಸಣೆಗಾಗಿ ತೆರಳಿದ್ದರು. ನಂತರ ವೈದ್ಯರ ಸಲಹೆ ಮೇರೆಗೆ ಅವರನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳಲಾಯಿತು. ಸೋಮವಾರ ಆಸ್ಪತ್ರೆಗೆ ಅವರು ದಾಖಲಾಗಿದ್ದರು, ಅದರ ಬೆನ್ನಿಗೆ ಪ್ರಿಯಾಂಕಾ ಕೂಡ ಆಸ್ಪತ್ರೆಗೆ ಬಂದಿದ್ದಾರೆ. ಅಲ್ಲಿಂದ ಮರಳಿದ ಅವರು ರಾತ್ರೆ ಪುನಃ ಆಸ್ಪತ್ರೆಗೆ ಬಂದರು.

ರಾಬರ್ಟ್ ವಾದ್ರಾ ಉಪಚಾರದಲ್ಲಿ ಪ್ರಿಯಾಂಕಾ ರಾತ್ರೆಯಿಡಿ ಆಸ್ಪತ್ರೆಯಲ್ಲಿದ್ದು. ಆಸ್ಪತ್ರೆ ಸಂಪೂರ್ಣ ಎಸ್‍ಪಿಜೆ ಸುರಕ್ಷಾ ವಲಯದಲ್ಲಿದೆ.