ಸನ್ಮಾರ್ಗ ವಾರ್ತೆ
ಶ್ರೀನಿವಾಸಪುರ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ತಂದಿರುವ ವಕ್ಫ್ ತಿದ್ದುಪಡಿ ಕಾಯ್ದೆಗೆ ವಿರೋಧವಾಗಿ ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ನೇತೃತ್ವದಲ್ಲಿ ದೇಶಾದ್ಯಾಂತ ಬತ್ತಿ ಗುಲ್ ತಹ್ರೀಕ್ ಎಂಬ ಶಾಂತ ಪ್ರತಿಭಟನೆ ಬುಧವಾರ ನಡೆಯಿತು.
ರಾತ್ರಿ 9 ರಿಂದ 9:15ರ ವರೆಗೆ ದೇಶದ ಪ್ರಮುಖ ನಗರಗಳು, ಪಟ್ಟಣಗಳು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಮುಸ್ಲಿಂ ಬಹುಸಂಖ್ಯಾತ ವಸತಿಗಳಲ್ಲಿ ಮನೆಗಳು, ಅಂಗಡಿಗಳು, ಮಸೀದಿಗಳು ಸೇರಿದಂತೆ ಎಲ್ಲಾ ಧಾರ್ಮಿಕ ಕೇಂದ್ರಗಳಲ್ಲಿ ವಿದ್ಯುತ್ಬತ್ತಿಗಳನ್ನು ಆರಿಸಲಾಗಿತು. 15 ನಿಮಿಷಗಳ ಕಾಲ ಕತ್ತಲ್ನಲ್ಲಿ ಮೌನವಾಗಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸುವ ಮೂಲಕ ಪ್ರತಿಭಟನೆ ನಡೆಸಲಾಯಿತು.
ಶ್ರೀನಿವಾಸಪುರದಲ್ಲಿಯೂ ಸಮುದಾಯದವರು ಶಿಸ್ತಿನಿಂದ ಪಾಲ್ಗೊಂಡು ಈ ಬತ್ತಿ ಗುಲ್ ತಹ್ರೀಕ್ಗೆ ಬೆಂಬಲಿಸಿದರು. ಎಲ್ಲೆಂದರೆ, ದೀಪಗಳು, ಟ್ಯೂಬ್ಲೈಟ್ಗಳು ಆರಿಸಿ ಯಾವುದೇ ಘೋಷಣೆ ಇಲ್ಲದೆ ಶಾಂತವಾಗಿ ಕತ್ತಲ್ನಲ್ಲಿ ತಾವು ವಕ್ಫ್ ತಿದ್ದುಪಡಿ ಕಾಯ್ದೆಗೆ ವಿರೋಧವೆನ್ನುವ ಸಂಕೇತವನ್ನು ನೀಡಿದರು. ಈ ರೀತಿಯ ಶಿಸ್ತಿನ ಪ್ರತಿಭಟನೆಗೆ ಮೆಚ್ಚುಗೆ ವ್ಯಕ್ತವಾಗಿದೆ.
ವಕ್ಫ್ ತಿದ್ದುಪಡಿ ಕಾಯ್ದೆ ಮುಸ್ಲಿಂ ಸಮುದಾಯದ ಧಾರ್ಮಿಕ, ಸಾಮಾಜಿಕ ಹಾಗೂ ಆರ್ಥಿಕ ಹಿತಾಸಕ್ತಿಗೆ ಧಕ್ಕೆಯಾಗಬಲ್ಲದು ಎಂಬ ಆತಂಕವಿದ್ದು, ಭಾರತದ ಸಂವಿಧಾನ ಹಾಗೂ ಇಸ್ಲಾಮಿಕ್ ಶರಿಯತ್ನ ತತ್ವಗಳಿಗೆ ವಿರುದ್ಧವಾಗಿರುವ ಯಾವುದೇ ತಿದ್ದುಪಡಿ ವಿರೋಧಿಸಿ ಈ ತಹ್ರೀಕ್ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಬೆಂಗಳೂರು, ದೆಹಲಿ, ಮುಂಬೈ, ಹೈದ್ರಾಬಾದ್, ಲಕ್ನೋ, ಪಟ್ನಾ, ಚೆನ್ನೈ ಸೇರಿದಂತೆ ಅನೇಕ ನಗರಗಳಲ್ಲಿ ಈ ತಹ್ರೀಕ್ಗೆ ಭಾರಿ ಪ್ರತಿಸಾದನೆ ದೊರೆತಿದ್ದು, ಸಾಮಾಜಿಕ ಜಾಲತಾಣಗಳಲ್ಲಿಯೂ ಇದರ ಬಗ್ಗೆ ಚರ್ಚೆಗಳು ಗರಿಗೆದರುತ್ತಿವೆ.












