ಸನ್ಮಾರ್ಗ ವಾರ್ತೆ
ಮಂಗಳೂರು: ಇತ್ತೀಚೆಗೆ ಕುಡುಪು ಎಂಬಲ್ಲಿ ಮೊಬ್ ಲಿಂಚಿಂಗ್ ನಲ್ಲಿ ಕೊಲ್ಲಲ್ಪಟ್ಟ ಕೇರಳ ವಯನಾಡ್ ನಿವಾಸಿ ಅಶ್ರಫ್ ಪಾಕಿಸ್ತಾನ ಝಿಂದಾಬಾದ್ ಘೋಷಣೆ ಕೂಗಿದ ಕಾರಣ ಗುಂಪು ಹೊಡೆದು ಕೊಂದಿದೆ ಎಂದು ಆರೋಪಿಸಲಾಗಿತ್ತು.
ಆದರೆ ಏಷಿಯಾನೆಟ್ ಗೆ ಮಾಹಿತಿ ನೀಡಿದ ಸ್ಥಳೀಯ ನಿವಾಸಿ ಹಾಗೂ ಸಾಮಾಜಿಕ ಕಾರ್ಯಕರ್ತ ಇದನ್ನು ಅಲ್ಲಗಳೆದಿದ್ದಾರೆ. ಅಶ್ರಫ್ ಪಾಕಿಸ್ತಾನ ಝಿಂದಾಬಾದ್ ಹೇಳಿಕೆ ನೀಡಿಲ್ಲ. ಹಿಂದೂಗಳೇ ಇರುವಲ್ಲಿ ಓರ್ವ ಮುಸ್ಲಿಮ್ ವ್ಯಕ್ತಿ ಬಂದು ಘೋಷಣೆ ಕೂಗಲೂ ಹೇಗೆ ಸಾಧ್ಯ ಎಂದವರು ಪ್ರಶ್ನಿಸಿದ್ದಾರೆ.
ಜವಾಬ್ದಾರಿಯುತ ಸ್ಥಾನದಲ್ಲಿರುವ ಗೃಹ ಮಂತ್ರಿಯವರು ಕುಲಂಕುಶ ತನಿಖೆ ನಡೆಸದೆ ಅಶ್ರಫ್ ಪಾಕಿಸ್ತಾನ ಝಿಂದಾಬಾದ್ ಘೋಷಣೆ ಕೂಗಿರುವುದಾಗಿ ಹೇಳಿಕೆ ನೀಡಿರುವುದು ಸರಿಯಲ್ಲ ಎಂದವರು ಹೇಳಿದ್ದಾರೆ.












