ಸ್ವೀಕರಿಸಲು ನಿರಾಕರಿಸಿದ ಬಾಂಗ್ಲಾದೇಶ: ಎರಡು ವಾರಗಳಿಂದ ರೋಹಿಂಗ್ಯನ್ ನಿರಾಶ್ರಿತರು ಸಮುದ್ರ ಮಧ್ಯೆ ಅತಂತ್ರ

0
682

ಸನ್ಮಾರ್ಗ ವಾರ್ತೆ

ಢಾಕಾ, ಏಪ್ರಿಲ್ ಬಂಗಾಳಕೊಲ್ಲಿಯಲ್ಲಿ ಎರಡು ಮೀನುಗಾರಿಕಾ ದೋಣಿಗಳಲ್ಲಿ ಸಿಲುಕಿರುವ ಸುಮಾರು 500 ಮಂದಿ ರೋಹಿಂಗ್ಯ ನಿರಾಶ್ರಿತರನ್ನು ತೀರಕೆ ಬರಲು ಬಾಂಗ್ಲಾದೇಶ ಸರಕಾರ ಅಡ್ಡಿ ಪಡಿಸಿದ್ದು ಮಾನವ ಹಕ್ಕು ಗುಂಪುಗಳು ಈ ಬಗ್ಗೆ ತೀವ್ರ ಟೀಕೆಯನ್ನು ವ್ಯಕ್ತಪಡಿಸಿವೆ.

ವಾರಗಟ್ಟಲೆ ಸಮುದ್ರದ ಮಧ್ಯೆ ಇದ್ದಾರೆ ಎಂದು ನಂಬಲಾದ ರೋಹಿಂಗ್ಯಾ ನಿರಾಶ್ರಿತರನ್ನು ರಕ್ಷಿಸುವುದು ಬಾಂಗ್ಲಾದೇಶದ ಜವಾಬ್ದಾರಿಯಲ್ಲ ಎಂದು ವಿದೇಶಾಂಗ ಸಚಿವ ಅಬ್ದುಲ್ ಮೂಮಿನ್ ಅಲ್ ಜಜೀರಾ ಟಿವಿಗೆ ತಿಳಿಸಿದ್ದಾರೆ.

ರೋಹಿಂಗ್ಯನ್ನರನ್ನು ಸೇರಿಸಿಕೊಳ್ಳಿ ಎಂದು ನೀವೇಕೆ ಬಾಂಗ್ಲಾದೇಶದೊಂದಿಗೆ ಪ್ರಶ್ನಿಸುತ್ತೀರಿ? ಅವರು ಸಮುದ್ರದ ನಡುವೆ ಇದ್ದಾರೆ ಮತ್ತು ಬಾಂಗ್ಲಾದೇಶದ ವ್ಯಾಪ್ತಿಯಲ್ಲೂ ಇಲ್ಲ ಎಂದು ಹೇಳಿದ ಅವರು, ಬಂಗಾಳಕೊಲ್ಲಿಯ ಸುತ್ತ ಎಂಟು ರಾಷ್ಟ್ರಗಳಿವೆ. ಅವುಗಳು ಜವಾಬ್ದಾರಿ ಹೊರಲಿ ಎಂದು ಅವರು ಹೇಳಿದ್ದಾರೆ. ಮ್ಯಾನ್ಮಾರ್ ಸರಕಾರದೊಂದಿಗೆ ನೀವು ಈ ಪ್ರಶ್ನೆಯನ್ನು ಕೇಳಬೇಕು ಎಂದು ಮಾಧ್ಯಮದವರಿಗೆ ಅವರು ಉತ್ತರಿಸಿದ್ದಾರೆ.

ಎರಡು ದೋಣಿಗಳಲ್ಲಿ ಮಹಿಳೆಯರು ಮತ್ತು ಮಕ್ಕಳನ್ನು ಒಳಗೊಂಡಿರುವ 500 ಮಂದಿ ಇದ್ದು, ಮಲೇಶಿಯಾ ಸರಕಾರವು ಇವರನ್ನು ಬಿಟ್ಟುಕೊಳ್ಳಲು ನಿರಾಕರಿಸಿದೆ. ಆದ್ದರಿಂದ ಅವರ ಸ್ಥಿತಿ ಅತಂತ್ರವಾಗಿದೆ. ಕೆಲವು ವಾರಗಳ ಹಿಂದೆ ಮಲೇಷಿಯಾವನ್ನು ತಲುಪಲು ವಿಫಲವಾದ ನಂತರ ಸುಮಾರು ಎರಡು ತಿಂಗಳ ಕಾಲ ಸಮುದ್ರದಲ್ಲಿ ಅಲೆಯುತ್ತಿದ್ದ ಹಡಗಿನಿಂದ 296 ರೋಹಿಂಗ್ಯನ್ನರನ್ನು ಬಾಂಗ್ಲಾದೇಶ ರಕ್ಷಿಸಿದೆ ಎಂದು ಕೂಡ ಮೂಮಿನ್ ಹೇಳಿದ್ದಾರೆ.

ರೋಹಿಂಗ್ಯನ್ನರ ಹೊಣೆಗಾರಿಕೆಯನ್ನು ಯಾಕೆ ಬಾಂಗ್ಲಾದೇಶ ಮಾತ್ರ ಹೊರಬೇಕು? ಬಾಂಗ್ಲಾದೇಶವು ಒಂದು ಮಿಲಿಯನ್ ಗಿಂತಲೂ ಹೆಚ್ಚು ರೋಹಿಂಗ್ಯ ನಿರಾಶ್ರಿತರಿಗೆ ಆಶ್ರಯವನ್ನು ಒದಗಿಸಿದೆ. ಈಗಾಗಲೇ ಅದು ಜನದಟ್ಟಣೆಯ ಸಮಸ್ಯೆಯನ್ನು ಎದುರಿಸುತ್ತಿದೆ ಎಂದು ಮೂಮಿನ್ ಹೇಳಿದ್ದಾರೆ.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.