ಈ ಮಹಿಳೆ ಸಾಯುವ 9 ದಿವಸ ಮೊದಲು ಇಸ್ಲಾಂ ಸ್ವೀಕರಿಸಿದ್ದರು

0
566

ಕುವೈಟ್, ಜೂ. 24: ಸಾರಂದ್ ಸಿಮೊನ ಪೋಸ್ಟ್ ಎಂಬ ಅರುವತ್ತು ವರ್ಷದ ಮಹಿಳೆ ತಾನು ನಿಧನರಾಗುವ ಕೆಲವು ದಿವಸ ಮೊದಲು ಇಸ್ಲಾಂ ಸ್ವೀಕರಿಸಿದ್ದಾರೆ. ಅಮೆರಿಕದ ಮಹಿಳೆಯ ಕುವೈಟ್‍ನಲ್ಲಿ ವಾಸವಿದ್ದರು. ಖಲೀಜ್ ಟೈಮ್ಸ್ ವರದಿಯ ಪ್ರಕಾರ ಜೂನ್ ಹತ್ತರಂದು ಸಿಮೊನ ಇಸ್ಲಾಮ್ ಸ್ವೀಕರಿಸಿದ್ದಾರೆ. ಅರಿಫಜಾನದಲ್ಲಿರುವ ಅಮೆರಿಕ ಆರ್ಮಿ ಬೇಸ್ ಶಿಬಿರದಲ್ಲಿ ಸಿಮೊನ ಇಸ್ಲಾಮ್ ಸ್ವೀಕರಿಸಿದ್ದಕ್ಕೆ ಸಂಬಂಧಿಸಿದ ಅಫಿದಾವಿತ್ ಸಿಕ್ಕಿದೆ. ಅವರ ಪತಿ ಫೆಬ್ರುವರಿಯಲ್ಲಿ ಇಸ್ಲಾಮ್ ಸ್ವೀಕರಿಸಿದ್ದರು. ಕ್ಯಾನ್ಸರ್ ರೋಗಿಯಾಗಿದ್ದ ಸಿಮೊನರ ಮೃತದೇಹ ಸಂಸ್ಕಾರವನ್ನು ಕುವೈಟ್‍ನಲ್ಲಿಯೇ ನಡೆಸಲಾಗಿದೆ.