ಬೆಂಗಳೂರು ಉದ್ವಿಗ್ನ: ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು- ಸಿಎಂ ಯಡಿಯೂರಪ್ಪ

0
712

ಸನ್ಮಾರ್ಗ ವಾರ್ತೆ

ಬೆಂಗಳೂರು,ಆ.12: ಫೇಸ್‍ಬುಕ್‍ನಲ್ಲಿ ಪ್ರವಾದಿಯವರನ್ನು ನಿಂದಿಸಿ ಪೋಸ್ಟ್ ಹಾಕಿದಕ್ಕಾಗಿ ಬೆಂಗಳೂರಿನಲ್ಲಿ ನಡೆದ ಘಟನೆಯಲ್ಲಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.

ಶಾಂತಿಯನ್ನು ಮರುಸ್ಥಾಪಿಸಲು ಎಲ್ಲ ಕ್ರಮಗಳನ್ನು ಸರಕಾರ ಜರಗಿಸಲಿದೆ. ಜನರು ಶಾಂತಿ ಕಾಪಾಡಬೇಕು. ಪತ್ರಕರ್ತರು, ಪೊಲೀಸರು, ಜನರ ಮೇಲೆ ನಡೆದ ದಾಳಿಯನ್ನು ಒಪ್ಪಲು ಸಾಧ್ಯವಿಲ್ಲ.

ವದಂತಿಗಳು, ಅಕ್ರಮಗಳು ಹರಡುವವರೊಂದಿಗೆ ಯಾವುದೇ ಅನುಕಂಪವನ್ನು ಸರಕಾರ ಹೊಂದುವುದಿಲ್ಲ. ಇಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಜನರು ಭಯಭೀತರಾಗಬಾರದೆಂದು ಮುಖ್ಯಮಂತ್ರಿ ಮನವಿ ಮಾಡಿದರು.

ಪ್ರವಾದಿ ನಿಂದೆಯ ಕಾರಣದಿಂದ ಡಿಜೆ ಹಳ್ಳಿ ಕಾವಲಭೈರಸಂದ್ರದ ಜನರು ಬೀದಿಗಿಳಿದದ್ದು ಘರ್ಷಣೆಗೆ ಕಾರಣವಾಗಿತ್ತು. ಪುಲಿಕೇಶಿ ನಗರದ ಕಾಂಗ್ರೆಸ್ ಶಾಶಕ ಅಖಂಡ ಶ್ರೀನಿವಾಸ ಮೂತಿರ್ಯ ಸಹೋದರಿಯ ಮಗ ನವೀನ್ ಪೋಸ್ಟ್ ಹಾಕಿದ್ದನು. ನವೀನ್‍ನನ್ನು ಬಂಧಿಸಬೇಕೆಂದು ಆಗ್ರಹಿಸಿ ಜನರು ಬೀದಿಗಿಳಿದಿದ್ದರು.

ನವೀನ್‍ನ ಕಾರು ಸಹಿತ ಹಲವು ವಾಹನಗಳನ್ನು ಸುಟ್ಟುಹಾಕಿದ್ದರು. ಶಾಸಕರ ಮನೆಗೂ ಕಲ್ಲೆಸತವಾಗಿತ್ತು. ಡಿಜೆ ಹಳ್ಳಿ ಪೊಲೀಸ್ ಠಾಣೆಗೆ ಜನರು ಮುತ್ತಿಗೆ ಹಾಕಿದ್ದರು. ಲಾಟಿ ಚಾರ್ಜು ಮಾಡಿದರೂ ಜನರನ್ನು ಚದುರಿಸಲಾಗದೇ ಪೊಲೀಸರು ಗುಂಡು ಹಾರಿಸಿದ್ದು ಮೂವರು ಮೃತಪಟ್ಟಿದ್ದಾರೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.