ಸನ್ಮಾರ್ಗ ವಾರ್ತೆ
ಹೊಸದಿಲ್ಲಿ,ಆ.11: ಟ್ವಿಟರ್ ಯುದ್ಧದಲ್ಲಿ ಜಯಗಳಿಸಲು ವಾರ್ ರೂಮ್‍ಗಳನ್ನು ಸಜ್ಜೀಕರಿಸಿ ಹಣ ವ್ಯಯಿಸುವ ಮೂಲಕ ಸೈಬರ್ ಹೋರಾಟಗಾರರನ್ನು ಉಪಯೋಗಿಸಿ ನಕಲಿ ವಾರ್ತೆಗಳು ಮತ್ತು ಪೋಸ್ಟ್‌ಗಳನ್ನು ಸೃಷ್ಟಿಸುವ ಬಿಜೆಪಿಯ ರೀತಿ ಇದೀಗ ಎಲ್ಲರಿಗೂ ಪರಿಚಿತವಾಗಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ಕಾಂಗ್ರೆಸ್ ಬಲಿಷ್ಠಗೊಂಡೊಡನೆ ಟ್ವಿಟರ್ ಮತ್ತು ಬಿಜೆಪಿಯ ಹಲವು ಪ್ರಮಾದಗಳನ್ನು ಬಹಿರಂಗಪಡಿಸಿದೆ.
ದೇಶದ ಮುಂದಿನ ಪ್ರಧಾನಿಯಾಗಲು ಅತ್ಯಂತ ಅರ್ಹ ಯಾರೆಂದು ನಡೆದ ಇಂಡಿಯಾ ಟುಡೆಯ ಆನ್‍ಲೈನ್ ಸರ್ವೆಯಲ್ಲಿ ಬಿಜೆಪಿ ಮೋಸ ಮಾಡಿದೆ ಎಂದು ಟ್ವಿಟರಿಗರು ಬೆಟ್ಟು ಮಾಡಿದ್ದಾರೆ.
ವೋಟಿಂಗ್ ಕೊನೆಗೊಳ್ಳಲ್ಲು ಹನ್ನೊಂದು ಗಂಟೆಗಳು ಮಾತ್ರ ಬಾಕಿ ಇದ್ದಾಗ 50.4 ಶೇಕಡದೊಂದಿಗೆ ರಾಹುಲ್ ಗಾಂಧಿ ಮುಂದಿದ್ದರು. ಆ ಸಮಯದಲ್ಲಿ ಮೋದಿಗೆ ಶೇ. 49.6 ಮತಗಳು ಬಿದ್ದಿದ್ದವು.
ಆದರೆ, ಮೂರು ಗಂಟೆಯೊಳಗೆ ಬೋಟ್‌ಗಳ (ವೆಬ್ ರೊಬೊಟ್) ಸಹಾಯ ಪಡೆದು ಹಣ ವ್ಯಯಿಸಿ ಬಿಜೆಪಿ ಮುಂದೆ ಬಂತು ಎಂದು ಟ್ವಿಟರ್ ಬಳಕೆದಾರರು ಸ್ಕ್ರೀನ್ ಶಾಟ್‍ಗಳನ್ನು ಮುಂದಿಟ್ಟು ಸೂಚಿಸಿದ್ದಾರೆ. ಮೂರು ಗಂಟೆಗಳೊಳಗೆ ಮೂರು ಲಕ್ಷ ಮತಗಳು ಖರೀದಿಸಿ ಬಿಜೆಪಿ ಕೃತಕತೆ ಸೃಷ್ಟಿಸಿದೆ.
ನಕಲಿ ಐಡಿಗಳನ್ನು ಉಪಯೋಗಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಶಕ್ತಿ ತೋರಿಸುತ್ತಿರುವ ಬಿಜೆಪಿ ಬೋಟ್‌ಗಳನ್ನು ಉಪಯೋಗಿಸಿ ಹಣವನ್ನು ನೀಡಿ ನಿಯೋಗಿಸಿದ ಐಟಿ ಸೆಲ್‍ಗಳ ಬಲದಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಮೋಸದಾಟ ನಡೆಸಿದರೆಂದು ಕೆಲವರು ತಿಳಿಸಿದ್ದಾರೆ.
ಕೇವಲ ನಾಲ್ಕು ನಿಮಿಷಗಳಲ್ಲಿ 1900ಕ್ಕೂ ಹೆಚ್ಚು ಮತಗಳು ಮೋದಿಗೆ ಹೆಚ್ಚಾಗಿರುವುದರ ಸ್ಕ್ರೀನ್ ಶಾಟ್‍ಗಳನ್ನು ಅವರು ಹಂಚಿಕೊಡಿದ್ದಾರೆ.
More than 3 lakh votes bought with in 3 hours by BJP to rig the poll.
They know they can't win against Rahul Gandhi without cheap tricks. #BotsJanataParty pic.twitter.com/eu6ODWW04p
— Spirit of Congress (@SpiritOfCongres) August 9, 2020
5,75,670.00 rupees is how much BJP spent to rig a small twitter poll to win against Rahul Gandhi.
Just imagine how much money BJP is paying Godi media daily to attack Rahul Gandhi. #BotsJanataParty
— Spirit of Congress (@SpiritOfCongres) August 9, 2020
ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












