ಭಾಗವತ್‌ರು ಇಲ್ಲಿ ಧೃತರಾಷ್ಟ್ರ, ಅಮೆರಿಕದಲ್ಲಿ ವಿದುರ

0
145

✍️ ಲಕ್ಷ್ಮೀಶ ಗಬ್ಬಲಡ್ಕ
ಸದಸ್ಯರು, ದ.ಕ. ಜಿಲ್ಲಾ ಧಾರ್ಮಿಕ ಪರಿಷತ್ ಮತ್ತು ಸಂಘಪರಿವಾರದ ಮಾಜಿ ಮುಖಂಡರು

Rss ವರಿಷ್ಠ ಮೋಹನ ಭಾಗವತರು ಅಮೆರಿಕದಲ್ಲಿ ಕೊಟ್ಟ ಅಭಿಪ್ರಾಯಗಳು ದೊಡ್ಡ ಮಟ್ಟಿಗೆ ಚರ್ಚೆ ಆಗುತ್ತಿವೆ.
ಚರ್ಚೆ ಆಗಲೇ ಬೇಕು.ಚರ್ಚೆ ಆಗಬೇಕೆಂದು ಕೂಡಾ ಅವರು ಬಯಸುವುದು.

ಹಾಗೆಂದು RSS ಒಂದು ಅಭಿಪ್ರಾಯ ವ್ಯಕ್ತಪಡಿಸಿದ ನಂತರ ಆದ ಈ ಅಭಿಪ್ರಾಯಕೇಂದ್ರಿತ ಪರ ವಿರೋಧ ಚರ್ಚೆಗೆ ಅದೆಂದೂ ಸಾರ್ವಜನಿಕ ಉತ್ತರದಾಯಿತ್ವ ಪ್ರದರ್ಶನ ಮಾಡಲೇ ಇಲ್ಲ.

RSS ನ್ನು ವಿಮರ್ಶೆ ಮಾಡುವವರನ್ನು RSS ಎಂದೂ ಹತ್ತಿರವೂ ಸೇರಿಸುವುದಿಲ್ಲ.

ಮೋಹನ್ ಭಾಗವತರು ಭಾರತದಲ್ಲಿ ಭಾರತದ ಮುಸಲ್ಮಾನರನ್ನು ಪಾಕಿಸ್ತಾನಕ್ಕೆ ಹೋಗಿ ಅನ್ನುವ ಹಿಂದೂಗಳು ಹಿಂದೂಗಳು ಅಲ್ಲಾ..ಅವರು ಹಿಂದೂ ಧರ್ಮದ ಹಿತರಕ್ಷರು ಅಲ್ಲಾ ಅಂತ ಅಭಿಪ್ರಾಯ ಕೊಟ್ಟದ್ದು ಅಮೆರಿಕದಲ್ಲಿ.

RSS ವರಿಷ್ಠರ ಅಮೆರಿಕ ಭೇಟಿಗೆ ಅಲ್ಲಿ ವಿರೋಧಗಳು ವ್ಯಕ್ತ ಆದ ಸಂದರ್ಭದಲ್ಲಿಯೇ ಅಲ್ಲಿ ಅವರು ಈ ಅಭಿಪ್ರಾಯ ಕೊಟ್ಟದ್ದು ನೋಡಿದರೆ..ಮತ್ತು ಭಾರತದಲ್ಲಿ ಕಳೆದ ಅನೇಕ ವರ್ಷಗಳಲ್ಲಿ ಬಿಜೆಪಿ ಹೊರತಾದ ಎಲ್ಲಾ ಪಕ್ಷಗಳನ್ನು ಅದರ ಕಾರ್ಯಕರ್ತರನ್ನು,ಮುಸ್ಲಿಂ ಸಮುದಾಯವನ್ನು ಯಾವ ಸ್ವರೂಪದಲ್ಲಿ ನೋಡಲಾಗುತ್ತಾ ಇತ್ತು. ಮತ್ತು ಕೆಟ್ಟ ಅಭಿರುಚಿಯ ಶಬ್ದಗಳಿಂದ ನಿಂದಿಸಲಾಗುತ್ತಾ ಇತ್ತು ಅಂತ ನೋಡಿದರೆ..

ಇಲ್ಲಿ ಮೌನಿ ಧೃತರಾಷ್ಟ್ರ ಆಗಿದ್ದ ಭಾಗವತರು..ಅಮೆರಿಕದಲ್ಲಿ ವಿದುರನ ಹಾಗೇ ಮಾತಾಡಿದ್ದು ನೋಡಿದರೆ…

ಈಗ ಜಾಲತಾಣಗಳಲ್ಲಿ ಭಾಗವತರು ಅಮೆರಿಕದಲ್ಲಿ ಹಾಗೇ ಹೇಳಬಾರದಿತ್ತು ಅಂತ ತುಂಬ rss ಪರಿವಾರದ ಮಂದಿ ಅಲವತ್ತುಕೊಳ್ಳುತ್ತಾರೆ. ಇದು ನಿಜವಾದ RSS.

ಭಾಗವತರ ಅಮೆರಿಕದ ಹೇಳಿಕೆಯೂ ನಿಜವಾದ RSS.

ಸೂಕ್ಷ್ಮವಾಗಿ ಆಲೋಚಿಸಿ ಓದಿ.

ಅಮೆರಿಕಾದಲ್ಲಿ ಭಾಗವತರ ಹೇಳಿಕೆಯನ್ನು ಭಾರತದಲ್ಲಿ ಒಪ್ಪದ rss ಹಿತೈಷಿಗಳು ನಿಜವಾದ RSS.ಅಮೆರಿಕದಲ್ಲಿ ಹೇಳಿಕೆ ಕೊಟ್ಟ ಭಾಗವತರು ನಿಜ RSS.

ಅಂದರೆ ಏಕಕಾಲದಲ್ಲಿ ಎರಡು ಮುಖವನ್ನು ಅತ್ಯಂತ ಸಹಜವಾಗಿ ತೋರಿಸುವ ತಂತ್ರಗಾರಿಕೆ RSS ಗೆ ಸಿದ್ಧಿಸಿದೆ.
ಭಾರತದಲ್ಲಿ RSS ಬೇರುಗಳು ವಿಪುಲವಾಗಿ ಆಳಕ್ಕೆ ಇಳಿದು..ಕೊಂಬೆಗಳು ವಿಶಾಲವಾಗಿ ಹಬ್ಬಿದೆ.ಅದಕ್ಕೆ ಕಾರಣ ಆಗಿದ್ದು.. ಕಾರಣ ಇದ್ದೂ.. ಇಲ್ಲದೇ.. ಮೇಲೆದ್ದು ಬಂದ ಮುಸ್ಲಿಂ ದ್ವೇಷ.

ಪ್ರಾರಂಭ ಅಂದರೆ 1925 ನೆಯ ಕಾಲದಿಂದಲೂ RSS ತನ್ನ ನೆಟ್ವರ್ಕ್ ವೃದ್ಧಿಸಿದ್ದು ಹಿಂದೂಗಳಲ್ಲಿ ಅಭದ್ರ ಭಾವನೆ ಹುಟ್ಟಿಸಿ,ಭಯ ಹುಟ್ಟಿಸುವ ಮೂಲಕ ಮತ್ತು ಮುಸ್ಲಿಂ ಸಮುದಾಯ ಜಾಗತಿಕ ಅಸ್ಥಿತ್ವ ಹೊಂದಿದೆ,ನಮಗಿರುವುದು ಇದೊಂದೇ ರಾಷ್ಟ್ರ.ಇದನ್ನು ಉಳಿಸಿ ಬೆಳೆಸಿ ಮುಂದಿನ ಪೀಳಿಗೆಗೆ ಹಿಂದೂ ರಾಷ್ಟ್ರವಾಗಿ ಕೊಡಬೇಕು ಅನ್ನುವ ವಿಚಾರ ಕೊಡುವ ಮೂಲಕ.ಮುಸ್ಲಿಂ ಹೋದ ಎಲ್ಲಾ ರಾಷ್ಟ್ರಗಳು ತಮ್ಮ ಮೂಲ ಸಂಸ್ಕೃತಿಯನ್ನು ಮರೆತಿವೆ.ಮೂಲಭೂತವಾದ ಬೆಳೆದಿದೆ ಹಾಗಾಗಿ ಭಾರತದಲ್ಲಿ ಭಾರತದ ಬದುಕಿಗೆ,ಹಿಂದೂಗಳ ಒಳಿತಿಗೆ ಮುಸ್ಲಿಂ ಧರ್ಮ ಅಡ್ಡಿ,ಅವರು ನಮ್ಮ ಶತ್ರುಗಳು,ಅವರೆಲ್ಲಾ ಪಾಕಿಸ್ತಾನ ಬೆಂಬಲಿಗರು ಅನ್ನುವ ಕಲ್ಪಿತ ಶತ್ರುವನ್ನು ಮುಸ್ಲಿಮರ ಮೇಲೆ ಆರೋಪಿಸಿ.. ಆ ಮೂಲಕ RSS ಬೆಳೆಸಿದರು.ಸೇವೆ ಮೂಲಕ,ಶಿಕ್ಷಣ ಮೂಲಕ ಎಲ್ಲಾ RSS ಬೆಳೆದದ್ದು ಸಣ್ಣ ಪ್ರಮಾಣದಲ್ಲಿ.

ದ್ವೇಷ ಅನ್ನುವ ಹುಲಿ ಸವಾರಿ ಶುರು ಮಾಡಿ ಶತಮಾನ ಆಯಿತು.ಸವಾರಿ ಮಾಡಿದ ಹುಲಿ ವೃದ್ಧ ಆಗಿದೆ.ವೃದ್ಧ ಹುಲಿಯಿಂದ ಇಳಿಯುವ ಪ್ರಯತ್ನ RSS ನವರದ್ದು .ರಾಜಕೀಯಹಿಂದುತ್ವ ಅನ್ನುವ ಹುಲಿ ಇನ್ನು ನಡೆಯದು ಅಂತ ಗೊತ್ತಾಗುತ್ತಿದೆ.ಆದರೇನು ಮಾಡುವುದು.. ಈ ವೃದ್ಧ ಹುಲಿಯಿಂದ ಇಳಿದರೆ.. ದಶ ದಿಕ್ಕುಗಳಲ್ಲಿಯೂ ಹುಲಿ ಅರ್ಧ ತಿಂದು ಉಳಿಸಿದ ಮಾಂಸವನ್ನು ತಿಂದು ಬೆಳೆಸಿದ ತೋಳಗಳು ದಶ ದಿಕ್ಕುಗಳಲ್ಲಿಯೂ ಇದ್ದಾವೆ.
ಹಾಗಾಗಿ ಭಾಗವತರು ಇಲ್ಲಿ ಧೃತರಾಷ್ಟ್ರ. ಅಲ್ಲಿ ವಿದುರ.

ಬೌದ್ಧಿಕ ಅಪ್ರಾಮಾಣಿಕತೆ ಎಲ್ಲಿಯವರೆಗೂ ಜನರ ಕಣ್ಣಿಗೆ ಅಪ್ಯಾಯಮಾನವಾಗಿ ಕಾಣುತ್ತದೆಯೋ ಅಲ್ಲಿಯವರೆಗೂ ಇದು ಅಬಾಧಿತ.