ಇದರಲ್ಲಿ ರಾಜಕೀಯವಿಲ್ಲ: ರೈತರ ‘ಭಾರತ್ ಬಂದ್’ ಕರೆಗೆ ಶಿವಸೇನೆ ಬೆಂಬಲ

0
534

ಸನ್ಮಾರ್ಗ ವಾರ್ತೆ

ಮುಂಬೈ,ಡಿ.8: ಕೇಂದ್ರ ಸರಕಾರದ ವಿವಾದಾತ್ಮಕ ಕೃಷಿ ಕಾನೂನು ವಿರುದ್ಧ ರೈತರ ಬಂದ್‍ ಕರೆಯನ್ನು ಶಿವಸೇನೆ ಬೆಂಬಲಿಸಿದೆ. ಬಂದ್ ಅನ್ನು ರೈತರು ಘೋಷಿಸಿದ್ದಾರೆ. ಅದರಲ್ಲಿ ರಾಜಕೀಯವಿಲ್ಲ ಎಂದು ಶಿವಸೇನೆ ನಾಯಕ ಸಂಜಯ್ ರಾವತ್ ಹೇಳಿದರು. ಆತ್ಮಸಾಕ್ಷಿಯಿದ್ದರೆ ಕೇಂದ್ರ ಸರಕಾರ ರೈತರೊಂದಿಗೆ ಮಾತಾಡಬೇಕೆಂದು ಅವರು ಹೇಳಿದರು.

ರೈತ ಹೋರಾಟ ಘೋಷಿಸಿದ್ದು ರೈತರು. ಅದರಲ್ಲಿ ರಾಜಕೀಯ ಇಲ್ಲ. ಯಾವ ರಾಜಕೀಯ ಪಾರ್ಟಿಯ ಬಾವುಟ ಹಿಡಿಯದೆ ಅವರು ದಿಲ್ಲಿಯತ್ತ ಹೋರಾಟಕ್ಕೆ ಮುಖ ಮಾಡಿದ್ದಾರೆ. ಅವರ ಬೇಡಿಕೆ, ಹೋರಾಟದ ಜೊತೆ ನಿಲ್ಲುವುದು ನಮ್ಮ ಬಾಧ್ಯತೆಯಾಗಿದೆ. ಆತ್ಮಸಾಕ್ಷಿಯಿದರೆ ಪ್ರಧಾನಿ, ಗೃಹ ಸಚಿವರು ರೈತರ ಜೊತೆ ಮಾತಾಡಬೇಕೆಂದು ಅವರು ಹೇಳಿದರು. ಇದೇ ವೇಳೆ ವಿವಿಧ ರಾಜ್ಯಗಳಿಂದ ರೈತ ಹೋರಾಟಕ್ಕೆ ಬೆಂಬಲ ಸಿಕ್ಕಿದೆ. ಪ್ರತಿಪಕ್ಷ ಪಾರ್ಟಿಗಳೂ ಬೆಂಬಲ ಘೋಷಿಸಿವೆ.