ರೈತರನ್ನು ಚರ್ಚೆಗೆ ಆಹ್ವಾನಿಸಿದ ಗೃಹ ಸಚಿವ ಅಮಿತ್ ಶಾ

0
409

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಡಿ.8: ರೈತ ಹೋರಾಟವನ್ನು ತಣ್ಣಗಾಗಿಸುವ ಉದ್ದೇಶದಿಂದ ಕೇಂದ್ರ ಗೃಹ ಸಚಿವ ಅಮಿತ್ ಶಾ ರೈತ ನಾಯಕರನ್ನು ಚರ್ಚೆಗೆ ಆಹ್ವಾನಿಸಿದ್ದಾರೆ. ಇಂದು ಸಂಜೆ ಏಳು ಗಂಟೆಗೆ ಅಮಿತ್ ಶಾರೊಂದಿಗೆ ಸಮಾಲೋಚನೆ ನಡೆಯಲಿದೆ ಎಂದು ರೈತ ನಾಯಕರು ಹೇಳಿದರು. ರೈತರು ಮತ್ತು ಕೇಂದ್ರ ಸರಕಾರದ ನಡುವೆ ಆರನೆ ಬಾರಿಯ ಚರ್ಚೆ ನಾಳೆ ನಡೆಯಲಿದ್ದು, ಅಮಿತ್ ಶಾ ಇಂದು ರೈತರನ್ನು ಭೇಟಿಯಾಗಲಿದ್ದಾರೆ.

ಅಮಿತ್ ಶಾರ ಚರ್ಚೆಗೆ ಆಹ್ವಾನ ಬಂದಿದೆ ಎಂದು ಭಾರತೀಯ ಕಿಸಾನ್ ಯೂನಿಯನ್ ನಾಯಕ ರಾಕೇಶ್‍ ಟಿಕಾಯತ್ ತಿಳಿಸಿದರು. ಪ್ರತಿಭಟನಾ ಕೇಂದ್ರ ಸಿಂಘು ಗಡಿಗೆ ತಲುಪಿದ ಬಳಿಕ ಚರ್ಚೆಗೆ ಹೊರಡುವುದಾಗಿ ಅವರು ಹೇಳಿದರು. ರೈತ ಸಂಘಟನೆಗಳ ಕರೆ ನೀಡಿದ ಭಾರತ ಬಂದ್‍ಗೆ ರಾಷ್ಟ್ರಮಟ್ಟದಲ್ಲಿ ದೊಡ್ಡ ಬೆಂಬಲ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಶಾ ಚರ್ಚೆಗೆ ಕರೆದಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್, ಎಎಪಿ, ಎನ್‍ಸಿಪಿ, ಡಿಎಂಕೆ, ಸಿಪಿಎಂ ಟಿಆರೆಸ್ ಮೊದಲಾದ ಪಾರ್ಟಿಗಳು ರೈತರ ಬಂದ್‍ಗೆ ಬೆಂಬಲ ಘೋಷಿಸಿತ್ತು.