ಸನ್ಮಾರ್ಗ ವಾರ್ತೆ
ಹೊಸದಿಲ್ಲಿ: ಭಾರತ್ ಜೋಡೊ ಯಾತ್ರೆಯಲ್ಲಿ ಜಮ್ಮ ಕಾಶ್ಮೀರದಲ್ಲಿ ಭದ್ರತಾ ದೃಷ್ಟಿಯಿಂದ ಕೆಲವೆಡೆ ಕಾಲ್ನಡಿಗೆಗಿಂತ ಕಾರಲ್ಲಿ ಸಂಚರಿಸಬೇಕೆಂದು ಭದ್ರತಾ ದಳ ಸೂಚಿಸಿದೆ. ಗುರುವಾರ ರಾಹುಲ್ ಗಾಂಧಿಯವರು ಕಾಶ್ಮೀರ ಪ್ರವೇಶಿಸಲಿದ್ದಾರೆ. ‘ರಾಹುಲ್ ಗಾಂಧಿಯವರ ಭದ್ರತೆಗೆ ವಿಶೇಷ ವ್ಯವಸ್ಥೆ ಮಾಡಲಾಗಿದ್ದು ಕೆಲವೆಡೆ ಅವರು ಕಾರಲ್ಲಿ ಸಂಚರಿಸಲು ನಿರ್ಧೇಶಿಸಿದ್ದೇವೆ ಎಂದು ಭದ್ರತಾ ದಳದ ಅಧಿಕಾರಿಯೊಬ್ಬರು ಎನ್.ಡಿ. ಟಿವಿಗೆ ತಿಳಿಸಿದ್ದಾರೆ.
ಈ ತಿಂಗಳ 19ರಿಂದ ಪ್ರಾರಂಭಗೊAಡು 30ಕ್ಕೆ ಸಮಾಪ್ತಿಯಾಗಲಿದೆ. ರಾಹುಲ್ ಗಾಂಧಿಯವರ ಭದ್ರತೆಯಲ್ಲಿ ಲೋಪವಿದೆ ಎಂದು ಕಳೆದ ವಾರ ಕಾಂಗ್ರೆಸ್ ಕೇಂದ್ರ ಸರಕಾರಕ್ಕೆ ತಿಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಆದರೆ ನೂರು ಬಾರಿ ರಾಹುಲ್ ಗಾಂಧಿಯವರು ಭದ್ರತಾ ವ್ಯವಸ್ಥೆಯನ್ನು ಮೀರಿದ್ದಾರೆ ಎಂದು ಕೇಂದ್ರ ತಿಳಿಸಿತ್ತು.












