ಭೀಮಾ ಕೋರೆಗಾಂವ್: ಸುಧಾ ಭಾರದ್ವಾಜ್‍ರಿಗೆ ಜಾಮೀನು

0
235

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಭೀಮಾ ಕೊರೆಗಾಂವ್ ಪ್ರಕರಣದಲ್ಲಿ ಸಾಮಾಜಿಕ ಕಾರ್ಯಕರ್ತೆ ಸುಧಾ ಭಾರಧ್ವಾಜ್‍ರಿಗೆ ಜಾಮೀನು ಲಭಿಸಿದೆ. ಮುಂಬೈ ಹೈಕೋರ್ಟು ಜಾಮೀನು ನೀಡಿದ್ದು ಕಳೆದ ಎರಡು ವರ್ಷಕ್ಕೂ ಹೆಚ್ಚು ಕಾಲದಿಂದ ಅವರು ಜೈಲಿನಲ್ಲಿದ್ದರು. ಅವರು ವಕೀಲರು ಕೂಡ ಆಗಿದ್ದಾರೆ.

ಇದೇ ವೇಳೆ ರೋನಾ ವಿಲ್ಸನ್ ಸಹಿತ ಎಂಟು ಮಂದಿಗೆ ಜಾಮೀನು ತಿರಸ್ಕರವಾಗಿದೆ. ಜಾಮೀನು ಕೊಡಲಾದ ಸುಧಾ ಭಾರದ್ವಾಜ್ ಡಿಸೆಂಬರ್ ಎಂಟಕ್ಕೆ ವಿಚಾರಣೆ ಕೋರ್ಟಿನಲ್ಲಿ ಜಾಮೀನು ಗಳಿಸಬಹುದೆಂದು ಬಾಂಬೆ ಹೈಕೋರ್ಟು ತಿಳಿಸಿತು.

ಸುಧಾ ಭಾರದ್ವಾಜ್ ಸಹಿತ ಐವರು ಮಾನವಹಕ್ಕು ಕಾರ್ಯಕರ್ತರನ್ನು ಭೀಮಾ ಕೋರೆಗಾಂವ್ ಘರ್ಷಣೆಗೆ ಸಂಬಂಧಿಸಿ ಪುಣೆ ಪೊಲೀಸರು ಬಂಧಿಸಿದ್ದರು. ತೆಲುಗು ಕವಿ ಮಾನವಹ್ಕು ಹೋರಾಟಗಾರ ವರವರ ರಾವ್, ವಕೀಲೆ ಸುಧಾ ಭಾರದ್ವಾಜ್, ವರ್ನನ್ ಗೋನ್ಸಾಲ್ವೀಸ್, ಅರುಣ್ ಪೆರಾರ, ಪತ್ರಕರ್ತ ಗೌತಮ್ ನಖ್ಲಾಖ್‌ರಿಗೆ ಮಾವೋವಾದಿಗಳೊಂದಿಗೆ ಸಂಬಂಧವಿದೆ ಎಂದು ಪೊಲೀಸರ ಆರೋಪಿಸಿದ್ದಾರೆ.